ಕರ್ನಾಟಕ

karnataka

ವಿಮಾನದಲ್ಲಿ ಸಿಖ್ಖರು ಕಿರ್ಪಾನ್ ಒಯ್ಯಲು ಅನುಮತಿ ನೀಡಿದ್ದನ್ನು ಪ್ರಶ್ನಿಸಿದ ಪಿಐಎಲ್ ವಜಾ

By

Published : Dec 22, 2022, 8:07 PM IST

ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಮಾರ್ಚ್ 4, 2022 ರಂದು ಸಿಖ್ ಸಮುದಾಯದವರು ನಾಗರಿಕ ಸಂಚಾರದ ವಿಮಾನಯಾನಗಳ ಸಮಯದಲ್ಲಿ ಕಿರ್ಪಾನ್‌ಗಳನ್ನು ಕೊಂಡೊಯ್ಯಲು ಅನುಮತಿ ನೀಡಿರುವ ಅಧಿಸೂಚನೆಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.

ವಿಮಾನದಲ್ಲಿ ಸಿಖ್ಖರು ಕಿರ್ಪಾನ್ ಒಯ್ಯಲು ಅನುಮತಿ ಪ್ರಶ್ನಿಸಿದ ಪಿಐಎಲ್ ವಜಾ
pil-seeking-ban-on-sikhs-from-carrying-saber-during-air-travel-dismissed

ನವದೆಹಲಿ: ದೇಶೀಯ ವಿಮಾನಗಳಲ್ಲಿ ಸಂಚರಿಸುವಾಗ ಸಿಖ್‌ ಪ್ರಯಾಣಿಕರು ತಮ್ಮ ಜೊತೆಗೆ ಕಿರ್ಪಾನ್​ (ಚಿಕ್ಕ ಚೂರಿ) ಇಟ್ಟುಕೊಳ್ಳಲು ಅನುಮತಿ ನೀಡುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಿಲ್ಲಿ ಹೈಕೋರ್ಟ್‌ ವಜಾಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮಣ್ಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠವು ವಕೀಲ ಹರ್ಷ ವಿಭೋರ್ ಸಿಂಘಾಲ್ ಅವರ ಪೀಠ ಅರ್ಜಿ ವಜಾಗೊಳಿಸಿ ಗುರುವಾರ ತೀರ್ಪು ನೀಡಿತು.

ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಮಾರ್ಚ್ 4, 2022 ರಂದು ಸಿಖ್ ಸಮುದಾಯದವರು ನಾಗರಿಕ ಸಂಚಾರದ ವಿಮಾನಯಾನಗಳ ಸಮಯದಲ್ಲಿ ಕಿರ್ಪಾನ್‌ಗಳನ್ನು ಕೊಂಡೊಯ್ಯಲು ಅನುಮತಿ ನೀಡಿರುವ ಅಧಿಸೂಚನೆಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಕಿರ್ಪಾನ್​ ಅಲಗಿನ ಉದ್ದ ಆರು ಇಂಚು ಮೀರಬಾರದು ಮತ್ತು ಅದರ ಒಟ್ಟು ಉದ್ದ ಒಂಬತ್ತು ಇಂಚುಗಳನ್ನು ಮೀರದಿದ್ದರೆ ಸಿಖ್ಖರು ಕಿರ್ಪಾನ್ ಅನ್ನು ಜೊತೆಗೆ ಕೊಂಡೊಯ್ಯಲು ಅನುಮತಿ ಇದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ನಂತರ ಇದಕ್ಕೆ ಮತ್ತೊಂದು ತಿದ್ದುಪಡಿಯನ್ನು ಸೇರಿಸಿ, ವಿಮಾನ ನಿಲ್ದಾಣಗಳಲ್ಲಿ ಕೆಲಸ ಮಾಡುವ ಸಿಖ್ಖರು ಸಹ ಕಿರ್ಪಾನ್​ಗಳನ್ನು ಇಟ್ಟುಕೊಳ್ಳಲು ಅನುಮತಿ ನೀಡಲಾಗಿತ್ತು.

ಸಿಂಘಲ್ ಅವರು ತಮ್ಮ ಅರ್ಜಿಯಲ್ಲಿ, ನಾಗರಿಕ ವಿಮಾನದಲ್ಲಿ ಕಿರ್ಪಾನ್ ಸಾಗಿಸುವುದು ವಾಯುಯಾನ ಭದ್ರತೆಗೆ ಅಪಾಯಕಾರಿ ಪರಿಣಾಮಗಳನ್ನು ಹೊಂದಿದೆ ಮತ್ತು ಹಿಂದೆ ವಿಮಾನಗಳನ್ನು ಹೈಜಾಕ್ ಮಾಡಲು ಅಸ್ತ್ರವಾಗಿ ಬಳಸಿದ ಉದಾಹರಣೆಗಳಿವೆ ಎಂದು ವಾದಿಸಿದ್ದರು.

1981 ಮತ್ತು 1984 ರಲ್ಲಿ ಇಂಥ ಅಪಹರಣಗಳು ನಡೆದಾಗ ಮತ್ತು ಉಗ್ರಗಾಮಿಗಳು ಸರ್ಕಾರದ ವಶದಲ್ಲಿರುವ ಕೈದಿಗಳನ್ನು ಬಿಡುಗಡೆ ಮಾಡಲು ಒತ್ತಾಯಿಸಿದ ಉದಾಹರಣೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ದೇಶದಲ್ಲಿ ಸಿಖ್ಖರು ತಮ್ಮ ಧಾರ್ಮಿಕ ನಿಯಮಗಳ ಪ್ರಕಾರ ಕಿರ್ಪಾನ್ ಧರಿಸಲು ಅನುಮತಿಸಲಾಗಿದೆ. ಸಂವಿಧಾನದ ಮೂಲಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನಡಿಯಲ್ಲಿ ಸಿಖ್ ಸಮುದಾಯಕ್ಕೆ ಈ ವಿನಾಯಿತಿ ನೀಡಲಾಗಿದೆ.

ಇದನ್ನೂ ಓದಿ: ಬೀದರ್​ನಲ್ಲಿ ತಲ್ವಾರ್​ ಹಿಡಿದು ಯುವಕರ ಪುಂಡಾಟ: ಲಾಠಿ ರುಚಿ ತೋರಿಸಿದ ಪೊಲೀಸರು

ABOUT THE AUTHOR

...view details