ಕರ್ನಾಟಕ

karnataka

25 ದಿನಗಳಿಂದ ಇಂಧನ ದರ ಸ್ಥಿರ: ದೇಶ, ರಾಜ್ಯದ ಇಂದಿನ ತೈಲ ಬೆಲೆಯ ಚಿತ್ರಣ ಇಲ್ಲಿದೆ..

By

Published : May 1, 2022, 12:11 PM IST

Updated : May 1, 2022, 1:21 PM IST

ಇಂದು (ಭಾನುವಾರ) ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ. ದೆಹಲಿ, ಬೆಂಗಳೂರು ಸೇರಿದಂತೆ ವಿವಿಧ ನಗರಗಳ ಇಂಧನ ದರ ಎಷ್ಟಿದೆ? ನೋಡೋಣ.

fuel price
ಇಂಧನ ದರ

ನವದೆಹಲಿ:ದೇಶದಲ್ಲಿ ಕಳೆದ 25 ದಿನಗಳಿಂದ ಪೆಟ್ರೋಲ್, ಡೀಸೆಲ್ ದರ ಸ್ಥಿರವಾಗಿದೆ. ಕೆಲ ತಿಂಗಳ ಮೊದಲು ಇಳಿಕೆಯಾಗಿದ್ದ ತೈಲ ಬೆಲೆಯನ್ನು ಮಾ.22ರಿಂದ ಏರಿಸಲಾಗುತ್ತಿತ್ತು. ಇದರಿಂದ ಒಂದು ತಿಂಗಳ ಅವಧಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್​ಗೆ 10 ರೂ. ಹೆಚ್ಚಾಗಿತ್ತು.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಒಂದು ಲೀಟರ್​ಗೆ ₹ 105.41 ಇದ್ದು, ಲೀಟರ್ ಡೀಸೆಲ್ ಬೆಲೆ ₹ 96.67 ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್ ₹ 120.51, ಡೀಸೆಲ್ ₹ 104.71ಕ್ಕೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 110.85 ರೂ. ಹಾಗೂ ಲೀಟರ್ ಡೀಸೆಲ್ ದರ 100.94 ರೂಇದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್​ಗೆ 115.12 ರೂ. ಡೀಸೆಲ್ ಬೆಲೆ ಲೀಟರ್​ಗೆ 99.83 ರೂ. ಆಗಿದೆ. ಕೇರಳದ ತಿರುವನಂತಪುರಂನಲ್ಲಿ ಲೀಟರ್ ಪೆಟ್ರೋಲ್​ಗೆ 116.92 ರೂ ಇದ್ದು, ಲೀಟರ್ ಡೀಸೆಲ್ ಬೆಲೆ 103.69 ರೂ ನಿಗದಿಯಾಗಿದೆ. ಹೈದರಾಬಾದ್​ನಲ್ಲಿ ಲೀಟರ್ ಪೆಟ್ರೋಲ್ ದರ 119.47 ರೂ ಹಾಗೂ ಲೀಟರ್ ಡೀಸೆಲ್ ದರ 105.47 ರೂ.ನಿಗದಿಯಾಗಿದೆ.

ರಾಜ್ಯದ ಪ್ರಮುಖ ನಗರಗಳಲ್ಲಿ ಹೀಗಿದೆ ದರ:

ಜಿಲ್ಲೆ ಪೆಟ್ರೋಲ್ ದರ ಡೀಸೆಲ್ ದರ
ಬೆಂಗಳೂರು 111.11 ರೂ. 94.81 ರೂ.
ಹುಬ್ಬಳ್ಳಿ 110.81 ರೂ. 94.56 ರೂ.
ಮೈಸೂರು 110.59 ರೂ. 94.34 ರೂ.
ಬೆಳಗಾವಿ 111.67 ರೂ. 95.34 ರೂ.
ಶಿವಮೊಗ್ಗ 111.89 ರೂ. 95.43 ರೂ.
ದಾವಣಗೆರೆ 112.82 ರೂ. 96.54 ರೂ.

ಇದನ್ನೂ ಓದಿ:ರಾಜ್ಯದಲ್ಲಿ ಇಂದಿನ ಪೆಟ್ರೋಲ್, ಡೀಸೆಲ್ ದರ ಎಷ್ಟು?

Last Updated :May 1, 2022, 1:21 PM IST

ABOUT THE AUTHOR

...view details