ಕರ್ನಾಟಕ

karnataka

ಒಂದು ವಾರದ ಬಳಿಕ ತೈಲ ಬೆಲೆ ಏರಿಕೆಗೆ ಬ್ರೇಕ್​: ವಿವಿಧ ಮಹಾನಗರಗಳ ದರಗಳು ಹೀಗಿವೆ..

By

Published : Oct 12, 2021, 12:51 PM IST

ಸತತ ಒಂದು ವಾರದಿಂದ ಏರಿಕೆ ಕಾಣುತ್ತಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಯಾವುದೇ ಬದಲಾವಣೆ ಕಂಡಿಲ್ಲ.

Petrol, diesel price rise pause after a week of increase
ಒಂದು ವಾರದ ಬಳಿಕ ತೈಲ ಬೆಲೆ ಏರಿಕೆ ತಡೆಗೆ ಬ್ರೇಕ್​: ವಿವಿಧ ಮಹಾನಗರಗಳ ತೈಲ ಬೆಲೆ ಹೀಗಿದೆ..

ನವದೆಹಲಿ:ಸತತ ಒಂದು ವಾರದ ನಂತರಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ಮಂಗಳವಾರ ಬ್ರೇಕ್ ಬಿದ್ದಿದ್ದು, ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ. ಮುಂದಿನ ದಿನಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇಳಿಕೆಯಾಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ದೆಹಲಿಯಲ್ಲಿ 104.44 ರೂಪಾಯಿ ಇದೆ. ಡೀಸೆಲ್ ಬೆಲೆ 93.17 ರೂಪಾಯಿಯಷ್ಟಿದೆ. ದೇಶದ ಮಹಾನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಿಚಾರಕ್ಕೆ ಬರುವುದಾದರೆ ಮುಂಬೈನಲ್ಲಿ ಅತಿ ಹೆಚ್ಚು ದರವಿದೆ. ಮಹಾನಗರಗಳನ್ನು ಹೊರತುಪಡಿಸಿದರೆ ಭೋಪಾಲ್​ನಲ್ಲಿ ತೈಲ ಬೆಲೆ ಗಗನಕ್ಕೇರಿದೆ. ಅವುಗಳ ಮಾಹಿತಿ ಇಲ್ಲಿದೆ.

ದೇಶದ ವಿವಿಧ ನಗರಗಳಲ್ಲಿ ತೈಲ ಬೆಲೆ

ವಿವಿಧ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ..

ನಗರದ ಹೆಸರು ಪೆಟ್ರೋಲ್ ಬೆಲೆ (ರೂ.ಗಳಲ್ಲಿ) ಡೀಸೆಲ್ ಬೆಲೆ (ರೂ.ಗಳಲ್ಲಿ)
ನವದೆಹಲಿ 104.44 93.17
ಹೈದರಾಬಾದ್ 108.64 101.66
ಕೋಲ್ಕತಾ 105.09 96.28
ಚೆನ್ನೈ 101.79 97.59
ಬೆಂಗಳೂರು 108.08 98.89
ಮುಂಬೈ 110.41 101.03
ಭೋಪಾಲ್ 113 102.29

ಇದನ್ನೂ ಓದಿ:ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದ ಪಾಕ್​ ಉಗ್ರ ದೆಹಲಿಯಲ್ಲಿ ಸೆರೆ; ಎಕೆ 47, ಗ್ರೆನೇಡ್‌ ವಶ

ABOUT THE AUTHOR

...view details