ಕರ್ನಾಟಕ

karnataka

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಹೆಚ್ಚಳ: ಬೆಂಗಳೂರಲ್ಲಿ ಹೀಗಿದೆ ಇಂಧನ ದರ

By

Published : Sep 30, 2021, 9:25 AM IST

ಬೆಂಗಳೂರಿನಲ್ಲಿ 26 ಪೈಸೆ ಏರಿಕೆಯೊಂದಿಗೆ ಲೀಟರ್​ ಪೆಟ್ರೋಲ್ ಬೆಲೆ 105.18ಕ್ಕೆ ಹಾಗೂ 32 ಪೈಸೆ ಹೆಚ್ಚಳದೊಂದಿಗೆ ಡೀಸೆಲ್​ ದರ 95.38 ರೂ.ಗೆ ಏರಿಕೆಯಾಗಿದೆ.

ಇಂಧನ ದರ
ಇಂಧನ ದರ

ಮುಂಬೈ: ಒಂದು ದಿನದ ವಿರಾಮದ ಬಳಿಕ ಇಂದು ಇಂಧನ ದರ ಮತ್ತೆ ಏರಿಕೆ ಕಂಡಿದ್ದು, ಗ್ರಾಹಕನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರತಿ ಲೀಟರ್ ಪೆಟ್ರೋಲ್​​ ಮೇಲೆ 25 ರಿಂದ 30 ಪೈಸೆ ಹಾಗೂ ಡೀಸೆಲ್​ ಮೇಲೆ 28 ರಿಂದ 32 ಪೈಸೆ ಹೆಚ್ಚಳವಾಗಿದೆ.

ನಿನ್ನೆ ಒಂದು ದಿನ ಮಾತ್ರ ಇಂಧನ ದರ ಮೊನ್ನೆಯಷ್ಟೇ ಸ್ಥಿರವಾಗಿತ್ತು. ಆದರೆ, ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 25 ಪೈಸೆ ಏರಿಕೆಯೊಂದಿಗೆ ಲೀಟರ್ ಪೆಟ್ರೋಲ್ ದರ 101.64 ರೂ. ಹಾಗೂ 30 ಪೈಸೆ ಹೆಚ್ಚಳದೊಂದಿಗೆ ಡೀಸೆಲ್​ ದರ 89.87 ರೂ.ಗೆ ಏರಿಕೆಯಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ 26 ಪೈಸೆ ಏರಿಕೆಯೊಂದಿಗೆ ಲೀಟರ್​ ಪೆಟ್ರೋಲ್ ಬೆಲೆ 105.18ಕ್ಕೆ ಹಾಗೂ 32 ಪೈಸೆ ಹೆಚ್ಚಳದೊಂದಿಗೆ ಡೀಸೆಲ್​ ದರ 95.38 ರೂ.ಗೆ ಏರಿಕೆಯಾಗಿದೆ.

ಇದನ್ನೂ ಓದಿ: Ford: 2025ರ ವೇಳೆಗೆ 3 ವಿದ್ಯುತ್​ ವಾಹನ ಬ್ಯಾಟರಿ ಕಾರ್ಖಾನೆಗಳ ನಿರ್ಮಾಣ...10,800 ಉದ್ಯೋಗ ಸೃಷ್ಟಿ

ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತದೆ. ದೇಶದ ಪ್ರಮುಖ ಐದು ಮೆಟ್ರೋ ನಗರಗಳಲ್ಲಿನ ಇಂದಿನ ಪೆಟ್ರೋಲ್, ಡೀಸೆಲ್ ಬೆಲೆ ಹೀಗಿದೆ.

ನಗರ ಪೆಟ್ರೋಲ್ ಡೀಸೆಲ್
ಬೆಂಗಳೂರು 105.18 ರೂ. 95.38 ರೂ.
ದೆಹಲಿ 101.64 ರೂ. 89.87 ರೂ.
ಕೋಲ್ಕತ್ತಾ 102.17 ರೂ. 92.97 ರೂ.
ಮುಂಬೈ 107.71 ರೂ. 97.52 ರೂ.
ಚೆನ್ನೈ 99.36 ರೂ. 94.45 ರೂ.

ABOUT THE AUTHOR

...view details