ಕರ್ನಾಟಕ

karnataka

ಬರ್ಬರ ಕೊಲೆ: ಹರಿದ್ವಾರದಲ್ಲಿ ಗುಪ್ತಾಂಗ ಕಚ್ಚಿ ವ್ಯಕ್ತಿಯ ಹತ್ಯೆ!

By

Published : May 8, 2022, 6:22 PM IST

ಹರಿದ್ವಾರದಲ್ಲಿ ವ್ಯಕ್ತಿಯ ಗುಪ್ತಾಂಗವನ್ನು ಕಚ್ಚಿ ಕೊಲೆ ಮಾಡಿದ ಘಟನೆ ನಡೆದಿದೆ. ಮೃತನ ಗುರುತು ಪತ್ತೆಯಾಗಿಲ್ಲ. ಶವವನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

person-killed
ಯುವಕನ ಕೊಲೆ

ಹರಿದ್ವಾರ:ಉತ್ತರಾಖಂಡದ ಹರಿದ್ವಾರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ದುಷ್ಕರ್ಮಿಗಳು ವ್ಯಕ್ತಿಯ ಗುಪ್ತಾಂಗವನ್ನು ಕಚ್ಚಿ ಕೊಲೆ ಮಾಡಿ, ಬಳಿಕ ರಸ್ತೆ ಬದಿ ಬಿಸಾಡಿದ್ದಾರೆ. ಶನಿವಾರ ಯುವಕನ ಮೃತದೇಹವನ್ನು ಕಂಡ ದಾರಿಹೋಕರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪರಿಶೀಲನೆ ನಡೆಸಿದಾಗ ವ್ಯಕ್ತಿ ಸಾವನ್ನಪ್ಪಿದ್ದು ಗೊತ್ತಾಗಿದೆ.

ವ್ಯಕ್ತಿಯ ದೇಹದ ಮೇಲೆ ಯಾವುದೇ ಗಾಯವಾಗದಿದ್ದರೂ ಸಾವನ್ನಪ್ಪಿದ್ದು ಪೊಲೀಸರಿಗೆ ಅನುಮಾನ ಮೂಡಿಸಿತ್ತು. ಬಳಿಕ ಪರಿಶೀಲಿಸಿದಾಗ ಆತನ ಗುಪ್ತಾಂಗವನ್ನು ಕಚ್ಚಿ ಕೊಲೆ ಮಾಡಿರುವುದು ತಿಳಿದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದು ಮಹಿಳೆಯ ಕಾರಣಕ್ಕಾಗಿ ನಡೆದ ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ. ಈ ರೀತಿಯ ಕೊಲೆಯನ್ನು ನಾವು ಈವರೆಗೂ ಕಂಡಿಲ್ಲ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮೃತ ವ್ಯಕ್ತಿಯ ಗುರುತು ಮತ್ತು ಹಿನ್ನೆಲೆ ಪತ್ತೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಓದಿ:ಕಲಬುರಗಿಯಲ್ಲಿ ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್‌ ಬರ್ಬರ ಹತ್ಯೆ

ABOUT THE AUTHOR

...view details