ಕರ್ನಾಟಕ

karnataka

ನ.26 ರಂದು ಬಿಹಾರದ ಜನರು 'ಮದ್ಯ ಸೇವಿಸುವುದಿಲ್ಲ' ಎಂದು ಪ್ರತಿಜ್ಞೆ ಮಾಡ್ತಾರೆ: ಸಿಎಂ ನಿತೀಶ್ ಕುಮಾರ್

By

Published : Nov 23, 2021, 6:47 AM IST

ರಾಜ್ಯದಲ್ಲಿ ಮದ್ಯ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಸರ್ಕಾರಿ ನೌಕರರು ಸೇರಿದಂತೆ ರಾಜ್ಯದ ಎಲ್ಲ ಜನರು ನವೆಂಬರ್ 26 ರಂದು ಮದ್ಯ ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಸಿಎಂ ನಿತೀಶ್ ಕುಮಾರ್
ಸಿಎಂ ನಿತೀಶ್ ಕುಮಾರ್

ಪಾಟ್ನಾ (ಬಿಹಾರ):ಸರ್ಕಾರಿ ನೌಕರರು ಸೇರಿದಂತೆ ರಾಜ್ಯದ ಎಲ್ಲ ಜನರು ನವೆಂಬರ್ 26 ರಂದು ಮದ್ಯ ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡುತ್ತಾರೆ (take oath on not to consume liquor) ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar Chief Minister Nitish Kumar) ಸೋಮವಾರ ಘೋಷಿಸಿದ್ದಾರೆ.

ನಿನ್ನೆ ಪಾಟ್ನಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ನಿತೀಶ್​, ರಾಜ್ಯದಲ್ಲಿ ಮದ್ಯ ನಿಷೇಧವನ್ನು (liquor ban in Bihar) ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ನಿಯಮ ಉಲ್ಲಂಘಿಸಲು ಬಿಡದಂತೆ ನಿರ್ದೇಶನಗಳನ್ನು ನೀಡಲಾಗಿದೆ. ಮದ್ಯ ನಿಷೇಧದ ನಂತರ ಬಿಹಾರದಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿದೆ ಮತ್ತು ನಾವು ಮದ್ಯದ ವಿರುದ್ಧವಾಗಿದ್ದೇವೆ ಎಂದು ಹೇಳಿದರು.

ಮದುವೆ ಸಮಾರಂಭಗಳಲ್ಲಿ ಮದ್ಯ ನಿಷೇಧ ಸಮರ್ಥಿಸಿಕೊಂಡ ಅವರು, ಮದ್ಯ ಸೇವನೆಯಲ್ಲಿ ಭಾಗಿಯಾಗದ ಜನರು ಪೊಲೀಸರ ದಾಳಿಯ ಬಗ್ಗೆ ಆತಂಕಪಡಬೇಕಾಗಿಲ್ಲ. ಕೆಲವು ಮದುವೆ ಸಮಾರಂಭಗಳಲ್ಲಿ ಮದ್ಯವನ್ನು ನೀಡಲಾಗುತ್ತದೆ ಎಂದು ಪೊಲೀಸರಿಗೆ ದೂರುಗಳು ಬಂದಿವೆ. ಪೊಲೀಸರು ಅಂತಹ ಮಾಹಿತಿ ಪಡೆದಾಗ ಕ್ರಮ ತೆಗೆದುಕೊಳ್ಳುತ್ತಾರೆ. ಸಂಬಂಧವಿಲ್ಲದವರು ಆತಂಕಪಡಬಾರದು" ಎಂದು ಹೇಳಿದರು.

ಇದನ್ನೂ ಓದಿ: ಪಂಜಾಬ್​ನಲ್ಲಿ AAP ಅಧಿಕಾರಕ್ಕೆ ಬಂದ್ರೆ 18+ ಯುವತಿಯರಿಗೂ ತಿಂಗಳಿಗೆ ಸಾವಿರ ರೂ.: ಕೇಜ್ರಿವಾಲ್​ ಘೋಷಣೆ

ಇತ್ತೀಚೆಗೆ ಪಾಟ್ನಾದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಮದ್ಯ ವಿತರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಪೊಲೀಸರು ಶೋಧ ನಡೆಸಿದ್ದರು. ಯಾವುದೇ ಮಹಿಳಾ ಕಾನ್​ಸ್ಟೇಬಲ್​ ಇಲ್ಲದೇ ವಧುವಿನ ಕೋಣೆಗೆ ಪ್ರವೇಶಿಸಿದ್ದರು. ಇದನ್ನು ವಿರೋಧ ಪಕ್ಷಗಳು ತೀವ್ರವಾಗಿ ಖಂಡಿಸಿದ್ದು, ಬಿಹಾರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್‌ಜೆಡಿ ಮುಖಂಡ ಮೃತುಂಜಯ್ ತಿವಾರಿ, ಸಾಮಾನ್ಯ ಜನರಿಗೆ ತೊಂದರೆ ಕೊಡುವ ಹಕ್ಕು ರಾಜ್ಯ ಸರ್ಕಾರ ಮತ್ತು ಪೊಲೀಸರಿಗೆ ಇಲ್ಲ. ಸರ್ಕಾರವು ಕಾನೂನನ್ನು ಸರಿಯಾಗಿ ಜಾರಿಗೆ ತರಬೇಕು. ಮಹಿಳಾ ಕಾನ್​ಸ್ಟೇಬಲ್ ಇಲ್ಲದೇ ವಧುವಿನ ಕೋಣೆಗೆ ಪ್ರವೇಶಿಸುವುದು ಸರಿಯಲ್ಲ. 2016 ರಿಂದ ಮದ್ಯ ನಿಷೇಧಿಸಲಾಗಿದ್ದರೂ ರಾಜ್ಯದಲ್ಲಿ ಮದ್ಯ ಎಲ್ಲಿಂದ ಬರುತ್ತಿದೆ ಎಂದು ಪ್ರಶ್ನಿಸಿದರು.

ಇನ್ನು ಕಳೆದ ವಾರ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮದ್ಯಪಾನ ನಿಷೇಧದ ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಸಿಕ್ಕಿಬಿದ್ದ ಸರ್ಕಾರಿ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ರಾಜ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚೈತನ್ಯ ಪ್ರಸಾದ್ ಹೇಳಿದ್ದಾರೆ.

ABOUT THE AUTHOR

...view details