ಕರ್ನಾಟಕ

karnataka

ಏಕನಾಯಕತ್ವದ ಕೂಗು.. ಎಐಎಡಿಎಂಕೆ ಸಭೆಯಿಂದ ಹೊರನಡೆದ ಪನ್ನೀರ್​​ ಸೆಲ್ವಂ

By

Published : Jun 23, 2022, 5:16 PM IST

ಎಐಎಡಿಎಂಕೆ ಸಭೆಯಿಂದ ಹೊರನಡೆದ ಪನ್ನೀರ್​​ ಸೆಲ್ವಂ

ಏಕ ನಾಯಕತ್ವದ ಬೇಡಿಕೆಗೆ ಮಣಿದ ಎಐಎಡಿಎಂಕೆ ಸಂಯೋಜಕ, ಮಾಜಿ ಸಿಎಂ ಪನ್ನೀರಸೆಲ್ವಂ ಅವರು ಇಲ್ಲಿ ನಡೆದ ಪಕ್ಷದ ಸಾಮಾನ್ಯ ಮಂಡಳಿ ಸಭೆಯಿಂದ ಹೊರನಡೆದಿದ್ದಾರೆ.

ಚೆನ್ನೈ(ತಮಿಳುನಾಡು): ಏಕ ನಾಯಕತ್ವದ ಬೇಡಿಕೆಯಿಂದ ಕೆರಳಿದ ಎಐಎಡಿಎಂಕೆ ಸಂಯೋಜಕ, ಮಾಜಿ ಮುಖ್ಯಮಂತ್ರಿ ಪನ್ನೀರಸೆಲ್ವಂ ಅವರು ಇಲ್ಲಿ ನಡೆದ ಪಕ್ಷದ ಸಾಮಾನ್ಯ ಮಂಡಳಿ ಸಭೆಯಿಂದ ಹೊರನಡೆದಿದ್ದಾರೆ. ಈ ವೇಳೆ ಪಕ್ಷದ ಜಂಟಿ ಸಂಯೋಜಕ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ಪರ ಹಿರಿಯರು ಬೆಂಬಲ ಸೂಚಿಸಿದ್ದಾರೆ.

ಎಐಎಡಿಎಂಕೆ ಸಾಮಾನ್ಯ ಸಭೆ ಮತ್ತು ಕಾರ್ಯಕಾರಿ ಸಮಿತಿ ಸಭೆಯು ಪಕ್ಷದ ಸಂಯೋಜಕ ಓ. ಪನ್ನೀರಸೆಲ್ವಂ, ಜಂಟಿ ಸಂಯೋಜಕ ಎಡಪ್ಪಾಡಿ ಪಳನಿಸ್ವಾಮಿ ಮತ್ತು ಅದರ ನಾಯಕ ತಮಿಳ್ಮಗನ್ ಹುಸೇನ್ ಅವರ ಅಧ್ಯಕ್ಷತೆಯಲ್ಲಿ ಶ್ರೀವಾರು ವೆಂಕಟಾಜಲಪತಿ ಸಭಾಂಗಣದಲ್ಲಿ ನಡೆಯಿತು. ಇದರಲ್ಲಿ ಮಾಜಿ ಸಚಿವರಾದ ಸಿ.ವಿ. ಷಣ್ಮುಗಂ, ಜಯಕುಮಾರ್ ಹಾಗೂ ಪಕ್ಷದ ಹಿರಿಯ ಮುಖಂಡರು ಭಾಗವಹಿಸಿದ್ದರು.

ಎಐಎಡಿಎಂಕೆ ಸಭೆಯಿಂದ ಹೊರನಡೆದ ಪನ್ನೀರ್​​ ಸೆಲ್ವಂ

ಇದಕ್ಕೂ ಮುನ್ನ ಸಭಾಂಗಣದಲ್ಲಿ ಪನ್ನೀರಸೆಲ್ವಂ ಮತ್ತು ಎಡಪ್ಪಾಡಿ ಪಳನಿಸಾಮಿ ಬೆಂಬಲಿಗರು ಘೋಷಣೆಗಳನ್ನು ಕೂಗಿದರು. ಸಭೆಗೆ ಬಂದ ಪನ್ನೀರಸೆಲ್ವಂ ವಿರುದ್ಧ ನಾನಾ ಘೋಷಣೆಗಳು ಇದೇ ಸಂದರ್ಭದಲ್ಲಿ ಮೊಳಗಿದವು. ಇದರಿಂದ ಸ್ಥಳದಲ್ಲಿ ಕೊಂಚ ಗದ್ದಲ ಉಂಟಾಯಿತು.

ಪಕ್ಷದ ಸಂಸ್ಥಾಪಕ ಎಂ ಜಿ ರಾಮಚಂದ್ರನ್ ಅವರ ಚಲನಚಿತ್ರದ ಹಾಡನ್ನು ಹಿರಿಯ ಪದಾಧಿಕಾರಿ ಮತ್ತು ಮಾಜಿ ಸಚಿವೆ ಬಿ ವಲರಮತಿ ಹಾಡಿದರು. ಹಾಗೆ 'ನಾಯಕ ಹೊರಹೊಮ್ಮುತ್ತಾನೆ' ಎಂದು ಪಳನಿಸ್ವಾಮಿ ಅವರನ್ನು ಶ್ಲಾಘಿಸಿದರು. ಈ ವೇಳೆ ಪನ್ನೀರಸೆಲ್ವಂ ಅನುಯಾಯಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದೆಲ್ಲದರ ಪರಿಣಾಮ ಸ್ಥಳದಲ್ಲಿ ಗಲಾಟೆ ಉಂಟಾಯಿತು. ನಂತರ ಸಭೆಯನ್ನ ಜುಲೈ 11ಕ್ಕೆ ಮುಂದೂಡಲಾಯಿತು.

ಇದನ್ನೂ ಓದಿ: ಕನಾಥ್ ಶಿಂದೆ ಮುಂದಿರುವ ಆಯ್ಕೆಗಳೇನು? ಮಹಾರಾಷ್ಟ್ರದಲ್ಲಿ ರಚನೆಯಾಗುತ್ತಾ ಹೊಸ ಸರ್ಕಾರ?

ABOUT THE AUTHOR

...view details