ಕರ್ನಾಟಕ

karnataka

ದೋಣಿಯ ಮೇಲೆ ಪಾಕ್​ ಗುಂಡಿನ ದಾಳಿ: ಕೋಸ್ಟ್​ಗಾರ್ಡ್​​ನಿಂದ ಮೀನುಗಾರರ ರಕ್ಷಣೆ

By

Published : Oct 7, 2022, 11:58 AM IST

ಕಚ್‌ನ ಜಖೌ ಪ್ರದೇಶದ ಸಮುದ್ರದಲ್ಲಿ ಅಬ್ದಾಸಾ ತಾಲೂಕಿನ ಮ್ಯಾಂಗ್ರೋಲ್ ಮತ್ತು ಜಿ.ಜೆ. 1 1 - MM - 3873, ಹರಸಿದ್ಧಿ 5 ಎಂಬ ಹೆಸರಿನ ಮೀನುಗಾರಿಕಾ ದೋಣಿಯು ಅರಬ್ಬೀ ಸಮುದ್ರದಲ್ಲಿ ಜಖೌ ಮತ್ತು ಓಖಾ ಕಡೆಗೆ ಮೀನುಗಾರಿಕೆ ನಡೆಸುತ್ತಿತ್ತು. ಜಖೌ ಬಳಿ ದೋಣಿಯ ಮೇಲೆ ಪಾಕಿಸ್ತಾನಿ ಕಡಲ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದಾಗ ಮೀನುಗಾರರ ದೋಣಿಗಳು ಮುಳುಗಿವೆ.

ದೋಣಿಯ ಮೇಲೆ ಪಾಕ್​ ಗುಂಡಿನ ದಾಳಿ: ಕೋಸ್ಟ್​ಗಾರ್ಡ್​​ನಿಂದ ಮೀನುಗಾರರ ರಕ್ಷಣೆ
Pak firing on boat Coastguard rescues fishermen

ಕಚ್ (ಗುಜರಾತ್): ಕಚ್​ನ ಜಖೌ ಪ್ರದೇಶದ ಕಡಲ ಗಡಿಯಲ್ಲಿ ಪಾಕಿಸ್ತಾನದ ಮೆರೈನ್ ಸೆಕ್ಯುರಿಟಿ ಸೈನಿಕರು ಭಾರತೀಯ ದೋಣಿಯೊಂದರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಿಂದಾಗಿ ಭಾರತೀಯ ದೋಣಿ ಸಮುದ್ರದಲ್ಲಿ ಮುಳುಗಲಾರಂಭಿಸಿತು. ಆದರೆ, ಕೋಸ್ಟ್ ಗಾರ್ಡ್ ತಂಡಗಳು ದೋಣಿಯಲ್ಲಿದ್ದ 8 ಮೀನುಗಾರರನ್ನು ರಕ್ಷಿಸಿದ್ದಾರೆ.

ಕಚ್‌ನ ಜಖೌ ಪ್ರದೇಶದ ಸಮುದ್ರದಲ್ಲಿ ಅಬ್ದಾಸಾ ತಾಲೂಕಿನ ಮ್ಯಾಂಗ್ರೋಲ್ ಮತ್ತು ಜಿ.ಜೆ. 1 1 - MM - 3873, ಹರಸಿದ್ಧಿ 5 ಎಂಬ ಹೆಸರಿನ ಮೀನುಗಾರಿಕಾ ದೋಣಿಯು ಅರಬ್ಬೀ ಸಮುದ್ರದಲ್ಲಿ ಜಖೌ ಮತ್ತು ಓಖಾ ಕಡೆಗೆ ಮೀನುಗಾರಿಕೆ ನಡೆಸುತ್ತಿತ್ತು. ಜಖೌ ಬಳಿ ದೋಣಿಯ ಮೇಲೆ ಪಾಕಿಸ್ತಾನಿ ಕಡಲ ಭದ್ರತಾ ಸಿಬ್ಬಂದಿ ಗುಂಡು ಹಾರಿಸಿದಾಗ ಮೀನುಗಾರರ ದೋಣಿಗಳು ಮುಳುಗಿವೆ. ಕಡಲ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೀನುಗಾರಿಕೆ ಸೀಸನ್ ಈಗಷ್ಟೇ ಆರಂಭವಾಗಿದೆ. ಹೀಗಾಗಿ ಭದ್ರತಾ ಪಡೆಗಳು ಗಸ್ತು ತೀವ್ರಗೊಳಿಸಿವೆ. ಗಸ್ತು ತಿರುಗುತ್ತಿದ್ದ ಕೋಸ್ಟ್ ಗಾರ್ಡ್ ತಂಡ ತಕ್ಷಣ ಕಾರ್ಯಾಚರಣೆ ನಡೆಸಿ ದೋಣಿಯಲ್ಲಿದ್ದ ನಾವಿಕರನ್ನು ರಕ್ಷಿಸಿದೆ. ಓಖಾ ಕೋಸ್ಟ್ ಗಾರ್ಡ್ ಮೀನುಗಾರರನ್ನು ಜಖೌ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಭಟ್ಕಳ: ಅಲೆಯ ಅಬ್ಬರಕ್ಕೆ ಮೀನುಗಾರಿಕಾ ದೋಣಿ ಪಲ್ಟಿ

ABOUT THE AUTHOR

...view details