ಕರ್ನಾಟಕ

karnataka

UP Polls: 'ಭಾಗಿದಾರಿ' ಅಧಿಕಾರಕ್ಕೆ ಬಂದರೆ ಯುಪಿಗೆ ಇಬ್ಬರು ಸಿಎಂ, ಮೂವರು ಡಿಸಿಎಂ: ಓವೈಸಿ ವಿಚಿತ್ರ ಭರವಸೆ

By

Published : Jan 23, 2022, 9:07 AM IST

Updated : Jan 23, 2022, 10:44 AM IST

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ಶನಿವಾರ 'ಭಾಗಿದಾರಿ ಪರಿವರ್ತನ್ ಮೋರ್ಚಾ'ವನ್ನು ಆರಂಭಿಸಿರುವ ಅಸಾದುದ್ದೀನ್ ಓವೈಸಿ, ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಇಬ್ಬರು ಸಿಎಂಗಳನ್ನು ನಿಯೋಜನೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

Owaisi now promises two CMs for UP, if his new front gets power
UP Polls: ಅಧಿಕಾರಕ್ಕೆ ಬಂದರೆ ಯುಪಿಗೆ ಇಬ್ಬರು ಸಿಎಂಗಳ ಭರವಸೆ ನೀಡಿದ ಓವೈಸಿ

ಲಖನೌ(ಉತ್ತರ ಪ್ರದೇಶ):ಪಂಚರಾಜ್ಯಗಳ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಮಹತ್ವ ಪಡೆದುಕೊಂಡಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ಪಕ್ಷಗಳು ಭಾರಿ ಕಸರತ್ತು ನಡೆಸುತ್ತಿವೆ. ಈ ಬೆನ್ನಲ್ಲೇ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಿಚಿತ್ರ ಭರವಸೆಯೊಂದನ್ನು ನೀಡಿದ್ದಾರೆ.

ಚುನಾವಣೆಯಲ್ಲಿ ಗೆಲುವಿಗಾಗಿ ಶನಿವಾರ 'ಭಾಗಿದಾರಿ ಪರಿವರ್ತನ್ ಮೋರ್ಚಾ'ವನ್ನು ಆರಂಭಿಸಿರುವ ಅಸಾದುದ್ದೀನ್ ಓವೈಸಿ ಉತ್ತರ ಪ್ರದೇಶದಲ್ಲಿ ಮೈತ್ರಿ ಪಕ್ಷವು ಅಧಿಕಾರಕ್ಕೆ ಬಂದರೆ, ಇಬ್ಬರು ಮುಖ್ಯಮಂತ್ರಿಗಳನ್ನು ನಿಯೋಜಿಸುವ ಭರವಸೆಯನ್ನು ನೀಡಿದ್ದಾರೆ.

ಭಾಗಿದಾರಿ ಪರಿವರ್ತನ್ ಮೋರ್ಚಾ ವಿವಿಧ ಪಕ್ಷಗಳ ಮೈತ್ರಿಕೂಟವಾಗಿದ್ದು, ಈ ಹೊಸ ಮೈತ್ರಿಕೂಟ ಉತ್ತರ ಪ್ರದೇಶದ ಎಲ್ಲಾ 403 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿದ್ದು, ಒಂದು ವೇಳೆ ಅಧಿಕಾರಕ್ಕೆ ಬಂದರೆ, ಇಬ್ಬರು ಸಿಎಂಗಳು ಮತ್ತು ಮೂವರು ಡಿಸಿಎಂಗಳನ್ನು ನಿಯೋಜಿಸುವುದಾಗಿ ಓವೈಸಿ ಹೇಳಿದ್ದಾರೆ.

ಇಬ್ಬರು ಸಿಎಂಗಳ ಪೈಕಿ ಒಬ್ಬರು ಹಿಂದುಳಿದ ವರ್ಗಗಳಿಗೆ ಮತ್ತು ಇನ್ನೊಬ್ಬರು ದಲಿತ ಸಮುದಾಯಕ್ಕೆ ಸೇರಿರುತ್ತಾರೆ. ಇನ್ನು ಮೂವರು ಡಿಸಿಎಂಗಳಲ್ಲಿ ಒಬ್ಬರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ ಎಂದು ಓವೈಸಿ ಭರವಸೆ ನೀಡಿದ್ದಾರೆ. ಆದರೆ ಸಂವಿಧಾನದಲ್ಲಿ ಒಂದು ರಾಜ್ಯಕ್ಕೆ ಒಂದು ಸಿಎಂ ಸ್ಥಾನಕ್ಕೆ ಮಾತ್ರ ಅವಕಾಶ ಕಲ್ಪಿಸಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಭಾಗಿದಾರಿ ಪರಿವರ್ತನ್ ಮೋರ್ಚಾದಲ್ಲಿನ ಪಕ್ಷಗಳು:ಇನ್ನು ಓವೈಸಿ ಆರಂಭಿಸಿರುವ ಭಾಗಿದಾರಿ ಪರಿವರ್ತನ್ ಮೋರ್ಚಾದಲ್ಲಿ ಉತ್ತರ ಪ್ರದೇಶದ ಮಾಜಿ ಸಚಿವರಾದ ಬಾಬು ಸಿಂಗ್ ಕುಶ್ವಾಹಾ ಅವರ ಜನ್ ಅಧಿಕಾರ್ ಪಾರ್ಟಿ, 1970ರ ಅವಧಿಯಲ್ಲಿ ಕಾನ್ಶೀರಾಂ ಅವರಿಂದ ಸ್ಥಾಪನೆಯಾದ ಅಖಿಲ ಭಾರತ ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ನೌಕರರ ಒಕ್ಕೂಟಗಳಿವೆ.

ಯುಪಿಯ ಮಾಜಿ ಸಚಿವ ಕುಶ್ವಾಹಾ ಅವರನ್ನು ಭಾಗಿದಾರಿ ಪರಿವರ್ತನ್ ಮೋರ್ಚಾದ ಸಂಚಾಲಕರನ್ನಾಗಿ ನೇಮಿಸಲಾಗಿದ್ದು, ಇತರ ರಾಜಕೀಯ ಪಕ್ಷಗಳಿಗೆ ಮೋರ್ಚಾದ ಬಾಗಿಲು ತೆರೆದಿದೆ. ಯುಪಿ ವಿಧಾನಸಭಾ ಚುನಾವಣೆಯ ಸಮರ ಈಗ ಮೋರ್ಚಾ ಮತ್ತು ಬಿಜೆಪಿ ನಡುವೆ ಇದೆ ಎಂದಿದ್ದಾರೆ.

ಇದನ್ನೂ ಓದಿ:ಭ್ರಷ್ಟಾಚಾರ ಆರೋಪ: ತಿಹಾರ್ ಜೈಲು ಪ್ರಧಾನ ಕಚೇರಿ ಬಳಿ ರೋಹಿಣಿ ಜೈಲಿನ 80 ಸಿಬ್ಬಂದಿ ಪ್ರತಿಭಟನೆ

Last Updated :Jan 23, 2022, 10:44 AM IST

ABOUT THE AUTHOR

...view details