ಕರ್ನಾಟಕ

karnataka

ಭಾರತೀಯ ಸೈನಿಕರ ಮನೋಸ್ಥೈರ್ಯ ಪರ್ವತಗಳಿಗಿಂತ ಹೆಚ್ಚು: ಎಂ.ಎಂ ನರವಣೆ

By

Published : Jan 15, 2021, 9:29 AM IST

Updated : Jun 29, 2022, 10:33 AM IST

ಭಾರತದ ಗಡಿಯಲ್ಲಿ ಅನೇಕ ಪಿತೂರಿಗಳು ನಡೆದಿದ್ದರೂ, ಅವುಗಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಸೇನಾ ದಿನಾಚರಣೆಯ ಮೆರವಣಿಗೆಯ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಹೇಳಿದ್ದಾರೆ. ಇನ್ನು ಭಾರತೀಯ ಸೇನಾ ದಿನಾಚರಣೆ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​, ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಟ್ವೀಟ್​ ಮೂಲಕ ಶುಭಾಶಯ ತಿಳಿಸಿದ್ದಾರೆ.

Indian Army
ಭಾರತೀಯ ಸೈನಿಕ

ಹೈದರಾಬಾದ್​:ಭಾರತ-ಚೀನಾ ಗಡಿಯಲ್ಲಿ ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಕೆಡವಲು ಅನೇಕ ಸಂಚುಗಳು ನಡೆಯುತ್ತಿತ್ತು. ಅವೆಲ್ಲದಕ್ಕೂ ಭಾರತೀಯ ಸೇನೆ ಸೂಕ್ತ ಉತ್ತರ ನೀಡಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಣೆ ಹೇಳಿದ್ದಾರೆ.

"ಉತ್ತರ ಗಡಿಗಳಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಉದ್ವಿಗ್ನತೆಯ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಗಡಿಗಳಲ್ಲಿ ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸುವ ಪಿತೂರಿಗೆ ಸಂಬಂಧಿಸಿದಂತೆ, ಸೂಕ್ತವಾದ ಉತ್ತರವನ್ನು ಭಾರತೀಯ ಸೇನೆ ನೀಡಿದೆ. ಗಾಲ್ವಾನ್​ನಲ್ಲಿ ನಮ್ಮ ಯೋಧರು ಮಾಡಿರುವ ತ್ಯಾಗವು ವ್ಯರ್ಥವಾಗುವುದಿಲ್ಲ ಎಂದು ನಾನು ದೇಶಕ್ಕೆ ಭರವಸೆ ನೀಡಲು ಬಯಸುತ್ತೇನೆ. ಭಾರತೀಯ ಸೇನಾ ಪಡೆಗಳ ಮನೋಸ್ಥೈರ್ಯ ಮತ್ತು ಪ್ರೇರಣೆ, ಅವರು ಕಾವಲು ಕಾಯುತ್ತಿರುವ ಪರ್ವತಗಳಿಗಿಂತ ಹೆಚ್ಚಾಗಿದೆ” ಎಂದು ಸೇನಾ ದಿನಾಚರಣೆಯ ಮೆರವಣಿಗೆಯ ಸಂದರ್ಭದಲ್ಲಿ ಹೇಳಿದರು.

ಇನ್ನು ಭಾರತೀಯ ಸೇನಾ ದಿನಾಚರಣೆ ಹಿನ್ನೆಲೆಯಲ್ಲಿ ದೇಶದ ಗಣ್ಯಾತಿಗಣ್ಯರು ಸೇನೆಯ ಪುರುಷ ಮತ್ತು ಮಹಿಳಾ ಪಡೆಗೆ ಶುಭಾಶಯ ತಿಳಿಸಿ ಟ್ವೀಟ್​ ಮಾಡಿದ್ದಾರೆ.

"ಭಾರತೀಯ ಸೇನೆಯ ಧೀರ ಪುರುಷರು ಮತ್ತು ಮಹಿಳೆಯರಿಗೆ ಶುಭಾಶಯಗಳು. ರಾಷ್ಟ್ರದ ಸೇವೆಯಲ್ಲಿ ಸರ್ವೋಚ್ಚ ತ್ಯಾಗ ಮಾಡಿದ ಧೈರ್ಯಶಾಲಿಗಳನ್ನು ನಾವು ನೆನಪಿಸಿಕೊಳ್ಳುತ್ತೇವೆ. ಧೈರ್ಯಶಾಲಿ ಮತ್ತು ಬದ್ಧ ಸೈನಿಕರು, ಅನುಭವಿಗಳು ಮತ್ತು ಅವರ ಕುಟುಂಬಗಳಿಗೆ ಭಾರತ ಶಾಶ್ವತವಾಗಿ ಕೃತಜ್ಞರಾಗಿರಬೇಕು" ಎಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಶುಭಾಶಯ ತಿಳಿಸಿದ್ದಾರೆ.

ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್​ ಮಾಡಿದ್ದು, "ನಮ್ಮ ಸೈನ್ಯವು ಪ್ರಬಲವಾಗಿದೆ. ಧೈರ್ಯಶಾಲಿ ಮತ್ತು ದೃಢವಾದ ನಿಶ್ಚಯವನ್ನು ಹೊಂದಿದೆ. ಇದು ಯಾವಾಗಲೂ ದೇಶವನ್ನು ಹೆಮ್ಮೆಪಡುವಂತೆ ಮಾಡಿದೆ. ದೇಶದ ಎಲ್ಲ ಜನರ ಪರವಾಗಿ ನಾನು ಭಾರತೀಯ ಸೈನ್ಯಕ್ಕೆ ವಂದಿಸುತ್ತೇನೆ" ಎಂದಿದ್ದಾರೆ.

ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಸೇನಾ ದಿನಾಚರಣೆಗೆ ಶುಭಾಶಯ ತಿಳಿಸಿದ್ದು, "ನಾವು ಧೈರ್ಯಶಾಲಿ ಸೈನಿಕರಿಗೆ ಗೌರವ ಸಲ್ಲಿಸುತ್ತೇವೆ. ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಕರ್ತವ್ಯದ ಸಾಲಿನಲ್ಲಿ ಅವರ ಶೌರ್ಯ ಮತ್ತು ಸರ್ವೋಚ್ಚ ತ್ಯಾಗವು ನಮ್ಮನ್ನು ಹೊಸ ಚೈತನ್ಯದಿಂದ ಸಮರ್ಪಿಸಲು ಪ್ರೇರೇಪಿಸುತ್ತದೆ" ಎಂದಿದ್ದಾರೆ.

Last Updated : Jun 29, 2022, 10:33 AM IST

ABOUT THE AUTHOR

...view details