ಕರ್ನಾಟಕ

karnataka

ಉಕ್ರೇನ್​ನಲ್ಲಿ ಸಮರ: ಆಶ್ರಯ ತಾಣವಾಗಿರುವ ಬಂಕರ್​​ ಬಗ್ಗೆ ಮಾಹಿತಿ ನೀಡಿದ ಭಾರತೀಯ ವಿದ್ಯಾರ್ಥಿ

By

Published : Mar 4, 2022, 4:18 PM IST

Russia-Ukraine War crisis.. ಉಕ್ರೇನಿಯನ್ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ವಿದ್ಯಾರ್ಥಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಬಂಕರ್‌ನಲ್ಲಿ ಆಶ್ರಯ ಪಡೆದಿರುವ ವಿಡಿಯೋಗಳು ವೈರಲ್​ ಆಗಿವೆ.

ರಷ್ಯಾ ಉಕ್ರೇನ್ ಸಮರ
ರಷ್ಯಾ ಉಕ್ರೇನ್ ಸಮರ

ಪುರಿ(ಒಡಿಶಾ) : ರಷ್ಯಾ ದೇಶ ಉಕ್ರೇನ್ ಮೇಲೆ ಹಿಡಿತ ಸಾಧಿಸಲು ನಿರಂತರವಾಗಿ ಕ್ಷಿಪಣಿಗಳನ್ನು ಉಡಾಯಿಸುತ್ತಿದೆ. ಹೀಗಾಗಿ ರಷ್ಯಾ ಸೇನೆಯ ದಾಳಿಯನ್ನು ತಪ್ಪಿಸಲು ಜನರು ಬಂಕರ್​​ಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಅವರಲ್ಲಿ ಅನೇಕ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ನ ಬಂಕರ್‌ಗಳಲ್ಲಿ ಸಿಲುಕಿಕೊಂಡಿದ್ದಾರೆ. ಅದರಂತೆ ಪುರಿ ಜಿಲ್ಲೆಯ ನಿವಾಸಿ ಸತ್ಯಶ್ರೀ ಮೊಹಾಪಾತ್ರ ಕೂಡ ಅಲ್ಲಿ ಆಶ್ರಯ ಪಡೆದಿದ್ದು, ಆ ಬಂಕರ್​ ಹಾಗೂ ಅವರ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ್ದಾರೆ.

ಆಶ್ರಯ ತಾಣವಾಗಿರುವ ಬಂಕರ್​​ ಬಗ್ಗೆ ಮಾಹಿತಿ ನೀಡಿದ ಭಾರತೀಯ ವಿದ್ಯಾರ್ಥಿ

ಉಕ್ರೇನಿಯನ್ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ವಿದ್ಯಾರ್ಥಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ಬಂಕರ್‌ನಲ್ಲಿ ಆಶ್ರಯ ಪಡೆದಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಬಂಕರ್ ಎಂದರೇನು?ಬಂಕರ್ ಎಂಬುದು ರಕ್ಷಣಾತ್ಮಕ ಮಿಲಿಟರಿ ಕೋಟೆಯಾಗಿದ್ದು, ಬಾಂಬ್‌ಗಳು, ಫಿರಂಗಿಗಳು ಅಥವಾ ಇತರ ದಾಳಿಗಳಿಂದ ಜನರನ್ನು ಮತ್ತು ಮೌಲ್ಯಯುತ ವಸ್ತುಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಬಂಕರ್‌ಗಳು ಯಾವಾಗಲೂ ನೆಲದಡಿಯಲ್ಲಿ ಇರುತ್ತವೆ. ಈ ರೀತಿಯ ಬಂಕರ್​ಗಳನ್ನು ವಿಶ್ವಯುದ್ಧ I, ವಿಶ್ವಯುದ್ಧ II ಮತ್ತು ಶೀತಲ ಸಮರದಲ್ಲಿ ಶಸ್ತ್ರಾಸ್ತ್ರ ಸೌಲಭ್ಯಗಳು, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಮತ್ತು ಶೇಖರಣಾ ಸೌಲಭ್ಯಗಳಿಗಾಗಿ ವ್ಯಾಪಕವಾಗಿ ಬಳಸಲಾಗಿತ್ತು. ಈ ಬಂಕರ್‌ಗಳನ್ನು ಸುಂಟರಗಾಳಿಯಿಂದ ಆಗುವ ಅನಾಹುತದಿಂದ ಪಾರಾಗಲೂ ಸಹ ಬಳಕೆ ಮಾಡಿಕೊಳ್ಳಲಾಗುತ್ತದೆ.

ABOUT THE AUTHOR

...view details