- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ 71ನೆ ಜನ್ಮದಿನದ ಸಂಭ್ರಮ
- ಲಖನೌದಲ್ಲಿ 45ನೇ ಜಿಎಸ್ಟಿ ಕೌನ್ಸಿಲ್ ಸಭೆ: ಪೆಟ್ರೋಲ್, ಡೀಸೆಲ್ ಜಿಎಸ್ಟಿ ವ್ಯಾಪ್ತಿಗೆ ತರಲು ಚರ್ಚೆ ಸಾಧ್ಯತೆ
- ಗುಜರಾತ್, ಕರ್ನಾಟಕದಲ್ಲಿ ಮೆಗಾ ವ್ಯಾಕ್ಸಿನ್ ಅಭಿಯಾನ.. ಒಂದೇ ದಿನ 30 ಲಕ್ಷ ಡೋಸ್ ನೀಡುವ ಗುರಿ
- ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರಿಂದ ಕಪ್ಪು ಶುಕ್ರವಾರ ಪ್ರತಿಭಟನಾ ಮೆರವಣಿಗೆ
- ಮೋದಿ ಜನ್ಮದಿನದ ಪ್ರಯುಕ್ತ ಸಂಸ್ಕೃತಿ ಸಚಿವಾಲಯವು ಪ್ರಧಾನ ಮಂತ್ರಿ ಸ್ವೀಕರಿಸಿದ ಉಡುಗೊರೆಗಳನ್ನು ಇ - ಹರಾಜು ಮಾಡಲಿದೆ
- ಹಿಮಾಚಲ ಪ್ರದೇಶ ವಿಧಾನಸಭೆ ಸುವರ್ಣ ಮಹೋತ್ಸವದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗವಹಿಸಲಿದ್ದಾರೆ
- ಮುಂಬೈನಲ್ಲಿ ಇಂದು ಮಹಿಳೆಯರಿಗಾಗಿ ವಿಶೇಷ ಕೋವಿಡ್ ಲಸಿಕೆ ಅಭಿಯಾನ
- ತೆಲಂಗಾಣದ ನಿರ್ಮಲ್ ಜಿಲ್ಲೆಯಲ್ಲಿ ಬಿಜೆಪಿಯ ' ತೆಲಂಗಾಣ ವಿಮೋಚನಾ ದಿನ' ಸಾರ್ವಜನಿಕ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿ
- ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ: ಸಿಎಂ ಬಸವರಾಜ ಬೊಮ್ಮಾಯಿಯಿಂದ ಧ್ವಜಾರೋಹಣ
- ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಂದ ಜಿಲ್ಲಾ ಪ್ರವಾಸ ಆರಂಭ
- ಬರೋಬ್ಬರಿ 18 ವರ್ಷಗಳ ಬಳಿಕ ಶುಕ್ರವಾರ ನ್ಯೂಜಿಲ್ಯಾಂಡ್ ಪಾಕಿಸ್ತಾನದಲ್ಲಿ ಏಕದಿನ ಕ್ರಿಕೆಟ್ ಆಡಲಿದೆ
- ಇಂದಿನಿಂದ ಡೇವಿಸ್ ಕಪ್ ಟೆನಿಸ್ : ಬಲಿಷ್ಠ ಫಿನ್ಲ್ಯಾಂಡ್ ವಿರುದ್ಧ ಭಾರತ ಕಣಕ್ಕೆ
ಪ್ರಧಾನಿ ಮೋದಿ ಜನ್ಮದಿನ, ಕಲ್ಯಾಣ ಕರ್ನಾಟಕ ಉತ್ಸವ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳು ಹೀಗಿವೆ
ಪ್ರಧಾನಿ ನರೇಂದ್ರ ಮೋದಿ ಜನ್ಮದಿನ, 45ನೇ ಜಿಎಸ್ಟಿ ಸಭೆ ಹಾಗೂ ಕಲ್ಯಾಣ ಕರ್ನಾಟಕ ಉತ್ಸವ ಶುಕ್ರವಾರದ ಎದುರು ನೋಡಬಹುದಾದ ಪ್ರಮುಖ ಸುದ್ದಿಗಳಾಗಿವೆ.
ಇಂದಿನ ವಿದ್ಯಮಾನಗಳು