ಕರ್ನಾಟಕ

karnataka

ಕಾರ್ಮಿಕರ ರಾಷ್ಟ್ರವ್ಯಾಪಿ ಮುಷ್ಕರ: ಬ್ಯಾಂಕಿಂಗ್ ಸೇವೆಗಳಲ್ಲಿ ಭಾಗಶಃ ವ್ಯತ್ಯಯ

By

Published : Mar 29, 2022, 3:16 PM IST

12 ಟ್ರೇಡ್ ಯೂನಿಯನ್‌ಗಳು ಕರೆ ನೀಡಿದ ದೇಶವ್ಯಾಪಿ ಮುಷ್ಕರವು ಆರೋಗ್ಯ, ವಿದ್ಯುತ್ ಮತ್ತು ಇಂಧನ ಪೂರೈಕೆಯಂತಹ ಅಗತ್ಯ ಸೇವೆಗಳ ಮೇಲೆ ಪರಿಣಾಮ ಬೀರಿಲ್ಲ.

trade unions  strike
ಕೇಂದ್ರ ಕಾರ್ಮಿಕ ಸಂಘಟನೆಗಳ ರಾಷ್ಟ್ರವ್ಯಾಪಿ ಮುಷ್ಕರ

ನವದೆಹಲಿ:ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಎರಡು ದಿನಗಳ ದೇಶವ್ಯಾಪಿ ಮುಷ್ಕರ ಇಂದು ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ಮುಷ್ಕರ ದೇಶದ ಕೆಲವು ಭಾಗಗಳಲ್ಲಿ ಜನಜೀವನದ ಮೇಲೆ ಪರಿಣಾಮ ಬೀರಿದೆ. ಮುಷ್ಕರದ 2ನೇ ದಿನವಾದ ಇಂದು ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಸಾರ್ವಜನಿಕ ವಲಯದ ಹಲವು ಬ್ಯಾಂಕ್‌ಗಳಲ್ಲಿ ಗ್ರಾಹಕ ಸೇವೆಗಳು ಸ್ಥಗಿತಗೊಂಡಿದ್ದವು.

12 ಟ್ರೇಡ್ ಯೂನಿಯನ್‌ಗಳು ಕರೆ ನೀಡಿದ ಬಂದ್​​ ಆರೋಗ್ಯ, ವಿದ್ಯುತ್ ಮತ್ತು ಇಂಧನ ಪೂರೈಕೆಯಂತಹ ಅಗತ್ಯ ಸೇವೆಗಳ ಮೇಲೆ ಪರಿಣಾಮ ಬೀರಿಲ್ಲ. ಸರ್ಕಾರಿ ಕಚೇರಿಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳಲ್ಲಿಯೂ ಮುಷ್ಕರ ಪ್ರಭಾವ ಕಡಿಮೆಯಾಗಿತ್ತು. ಕೆಲವು ಬ್ಯಾಂಕ್ ಶಾಖೆಗಳು, ವಿಶೇಷವಾಗಿ ಟ್ರೇಡ್ ಯೂನಿಯನ್ ಪ್ರಭಾವ ಹೊಂದಿರುವ ನಗರಗಳಲ್ಲಿ ಸೀಮಿತವಾದ ಕೌಂಟರ್‌ಗಳನ್ನು ತೆರೆದು ವಹಿವಾಟುಗಳನ್ನು ನಡೆಸುತ್ತಿದ್ದವು.

ಬೇಡಿಕೆಗಳೇನು?:ಖಾಸಗೀಕರಣಕ್ಕೆ ವಿರೋಧ, ಇತ್ತೀಚಿನ ಕಾರ್ಮಿಕ ಸುಧಾರಣೆಗಳು ಮತ್ತು ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಗೆ (ಎಂಎನ್‌ಆರ್‌ಇಜಿಎ) ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನ ಹೆಚ್ಚಿಸಿ ಗುತ್ತಿಗೆ ಕಾರ್ಮಿಕರನ್ನು ಖಾಯಂಗೊಳಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳಿವೆ.

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ಮಾತನಾಡಿ, ಮುಷ್ಕರದ ಪರಿಣಾಮ ಪೂರ್ವ ಭಾರತದಲ್ಲಿ ಹೆಚ್ಚು ಕಂಡುಬಂದಿದ್ದು, ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಎಲ್ಲಾ ಶಾಖೆಗಳನ್ನು ಮುಚ್ಚಲಾಗಿದೆ. ಇನ್ನುಳಿದ ಪ್ರದೇಶಗಳಲ್ಲಿ ಬ್ಯಾಂಕ್ ಶಾಖೆಗಳಲ್ಲಿ ಅಧಿಕಾರಿಗಳಿದ್ದರೂ ನೌಕರರ ಗೈರು ಹಾಜರಿಯಿಂದ ಕೆಲಸಕ್ಕೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಬ್ಯಾಂಕ್​, ಸಾರಿಗೆ ಸೇವೆ ಮೇಲೆ ಪರಿಣಾಮ ಬೀರಿದ ಸಾರ್ವತ್ರಿಕ ಮುಷ್ಕರ..ಇಂದೂ ಮುಂದುವರಿಕೆ

ABOUT THE AUTHOR

...view details