ಕರ್ನಾಟಕ

karnataka

National Herald case: ನಾಳೆ ಮತ್ತೆ ಹಾಜರಾಗುವಂತೆ ಸೋನಿಯಾಗೆ ಇಡಿ ನೋಟಿಸ್​

By

Published : Jul 26, 2022, 8:06 PM IST

ನ್ಯಾಷನಲ್ ಹೆರಾಲ್ಡ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಇಂದು ಎರಡನೇ ಬಾರಿಗೆ ವಿಚಾರಣೆಗೊಳಪಟ್ಟರು. ಸುಮಾರು 6 ಗಂಟೆಗಳ ಕಾಲ ಅವರು ಅಧಿಕಾರಿಗಳ ಮುಂದೆ ವಿಚಾರಣೆ ಎದುರಿಸಿದ್ದಾರೆ.

Sonia Gandhi Summoned Again Tomorrow
Sonia Gandhi Summoned Again Tomorrow

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಎರಡನೇ ಸಲ ವಿಚಾರಣೆಗೊಳಪಟ್ಟಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ನಾಳೆ ಸಹ ಹಾಜರಾಗಲು ಇಡಿ ತಿಳಿಸಿದೆ ಎಂದು ವರದಿಯಾಗಿದೆ. ಇಂದು ನಡೆದ ಆರು ಗಂಟೆಗಳ ವಿಚಾರಣೆ ವೇಳೆ ಸುಮಾರು 55ಕ್ಕೂ ಹೆಚ್ಚಿನ ಪ್ರಶ್ನೆ ಅವರಿಗೆ ಕೇಳಲಾಗಿದೆ ಎಂದು ಹೇಳಲಾಗ್ತಿದೆ.

ಇಂದು ಬೆಳಗ್ಗೆ 11 ಗಂಟೆಗೆ ಜಾರಿ ನಿರ್ದೇಶನಾಲಯ ಕಚೇರಿಗೆ ಆಗಮಿಸಿದ್ದ ಸೋನಿಯಾ ಗಾಂಧಿ ಆರು ಗಂಟೆಗಳ ಕಾಲ ವಿಚಾರಣೆ ಎದುರಿಸಿದ್ದು, ಅಧಿಕಾರಿಗಳು ಕೇಳಿರುವ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸೋನಿಯಾ ಗಾಂಧಿ ಅವರಿಗೆ ನೋಟಿಸ್ ನೀಡಿದ್ದಾಗಿ ತಿಳಿದು ಬಂದಿದ್ದು, ನಾಳೆ ಮತ್ತೆ ಆಗಮಿಸಲಿದ್ದಾರೆ. ಜುಲೈ 21ರಂದು ಮೊದಲ ಸುತ್ತಿನ ವಿಚಾರಣೆ ಎದುರಿಸಿರುವ ಸೋನಿಯಾ ಗಾಂಧಿ, ಇಂದು ಎರಡನೇ ಸುತ್ತಿನ ವಿಚಾರಣೆಗೆ ಹಾಜರಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಹುಲ್ ಗಾಂಧಿ ಸಹ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೊಳಪಟ್ಟಿದ್ದಾರೆ.

ಇದನ್ನೂ ಓದಿರಿ:'ಇತಿಹಾಸ ಪುನರಾವರ್ತನೆಯಾಗುತ್ತಿದೆ'.. ರಾಹುಲ್​ ಬಂಧನದ ಬೆನ್ನಲ್ಲೇ ಈ ರೀತಿ ಟ್ವೀಟ್ ಮಾಡಿದ ಕಾಂಗ್ರೆಸ್​

ಸೋನಿಯಾ ಗಾಂಧಿ ಅವರನ್ನ ಇಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿರುವುದನ್ನ ಮುಂದಿಟ್ಟುಕೊಂಡು ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಿತ್ತು. ಈ ವೇಳೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಹ ಭಾಗಿಯಾಗಿದ್ದರು. ಅವರನ್ನ ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು, ಸೋನಿಯಾ ಗಾಂಧಿ ಅವರ ವಿಚಾರಣೆ ಮುಗಿದ ಬಳಿಕ ಬಿಡುಗಡೆ ಮಾಡಿದ್ದಾರೆ.

ಕಾಂಗ್ರೆಸ್ ಅಧಿನಾಯಕಿಯನ್ನ ವಿಚಾರಣೆಗೊಳಪಡಿಸಿರುವುದನ್ನ ಖಂಡಿಸಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್​​ನ 50 ಸಂಸದರು, ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಠಾಣೆಗೆ ಕರೆದೊಯ್ಯಲಾಗಿತ್ತು.

ABOUT THE AUTHOR

...view details