ಕರ್ನಾಟಕ

karnataka

18 ವರ್ಷದಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮುಸ್ಲಿಂ ವ್ಯಕ್ತಿಯಿಂದ ಸಾಮರಸ್ಯದ ಸಂದೇಶ

By

Published : Sep 8, 2022, 9:32 AM IST

Updated : Sep 8, 2022, 10:40 AM IST

ಮುಸ್ಲಿಂ ವ್ಯಕ್ತಿಯೊಬ್ಬರು ತನ್ನ ಸ್ನೇಹಿತರೊಂದಿಗೆ ಕಳೆದ ಹದಿನೆಂಟು ವರ್ಷಗಳಿಂದ ಸಾರ್ವಜನಿಕವಾಗಿ ವಿಘ್ನೇಶ್ವರ ಮೂರ್ತಿ ಪ್ರತಿಷ್ಠಾಪಿಸುತ್ತಿದ್ದಾರೆ. ಈ ಮೂಲಕ ದೇವನೊಬ್ಬ ನಾಮ ಹಲವು ಎಂಬ ನಾಣ್ಣುಡಿಯಂತೆ ಧಾರ್ಮಿಕ ಸಾಮರಸ್ಯದ ಸಂದೇಶವನ್ನು ಅವರು ಸಾರುತ್ತಿದ್ದಾರೆ.

Muslim man installs Ganesh idol
Muslim man installs Ganesh idol

ಹೈದರಾಬಾದ್​​(ತೆಲಂಗಾಣ): ಕಳೆದ 18 ವರ್ಷಗಳಿಂದ ಮುಸ್ಲಿಂ ವ್ಯಕ್ತಿಯೊಬ್ಬರು ಸೌಹಾರ್ದತೆ ಮತ್ತು ಸಹೋದರತ್ವವನ್ನು ಪಸರಿಸುವ ಉದ್ದೇಶದಿಂದ ಸಾರ್ವಜನಿಕವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ತೆಲಂಗಾಣದ ಹೈದರಾಬಾದ್​​ನ ರಾಮ್​​ನಗರದ ನಿವಾಸಿ ಮೊಹಮ್ಮದ್​ ಸಿದ್ದಿಕ್​​ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರುತ್ತಿದ್ದಾರೆ.

"ಎಲ್ಲರೂ ಒಟ್ಟಿಗೆ, ಒಗ್ಗಟ್ಟಿನಿಂದ ಬಾಳಬೇಕು. ನಮ್ಮ ಸ್ನೇಹಿತರಲ್ಲಿಯೂ ನಾವು ಹಿಂದೂ, ಮುಸ್ಲಿಂ ಎಂಬ ಭಾವನೆಯಿಲ್ಲ. ನಮ್ಮೊಂದಿಗೆ ಅವರು ಮಸೀದಿಗೂ ಬರುತ್ತಾರೆ. ಇಫ್ತಾರ್​ ಕೂಟದಲ್ಲಿಯೂ ಭಾಗಿಯಾಗುತ್ತಾರೆ. ಹೀಗಾಗಿ, ನಾನು ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಅನ್ನದಾನ ಮಾಡುತ್ತೇನೆ. ಗಣೇಶನ ಮೂರ್ತಿ ಪ್ರತಿಷ್ಟಾಪಿಸಲು ಶುರು ಮಾಡಿದಾಗಿನಿಂದಲೂ ಅನೇಕ ರೀತಿಯ ಬೆಳವಣಿಗೆಯನ್ನು ಕಂಡಿದ್ದೇನೆ. ಇಲ್ಲಿನ ಜನರು ನನಗೆ ತುಂಬಾ ಗೌರವ ನೀಡುತ್ತಿದ್ದಾರೆ" ಮೊಹಮ್ಮದ್ ಸಿದ್ದಿಕ್​​ ಹೇಳುತ್ತಾರೆ.

ಇದನ್ನೂ ಓದಿ:ಮುಂಬೈನ ಪ್ರಸಿದ್ಧ ರಾಜ ಗಣೇಶನ ಹುಂಡಿಯಲ್ಲಿ 2 ಕೆಜಿ ಬೆಳ್ಳಿ, ಬಂಗಾರ

ಈ ಕುರಿತು ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿ, "ಗಣೇಶನ ದರ್ಶನಕ್ಕೆಂದು ನಾನು ಎಲ್​​ಬಿ ನಗರದಿಂದ ಇಲ್ಲಿಗೆ ಬಂದಿದ್ದೇನೆ. ಮುಸ್ಲಿಮರು ಹಾಗೂ ಹಿಂದೂಗಳು ಒಟ್ಟಿಗೆ ಗಣೇಶನ ಹಬ್ಬಾಚರಣೆ ಮಾಡುವುದು ನಿಜಕ್ಕೂ ಉತ್ತಮ ಬೆಳವಣಿಗೆ" ಎಂದರು.

ಇದನ್ನೂ ಓದಿ:ವಿಘ್ನನಾಶಕ ಗಣಪತಿಯ ಪೂಜಿಸಿದ್ದಕ್ಕೆ ವಿಘ್ನ.. ಬಿಜೆಪಿ ಮುಸ್ಲಿಂ ನಾಯಕಿ ವಿರುದ್ಧ ಫತ್ವಾ

ಗಣೇಶನ ಪೂಜಿಸಿದ ಮುಸ್ಲಿಂ ಮಹಿಳೆಯ ವಿರುದ್ಧ ಫತ್ವಾ: ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಮುಸ್ಲಿಂ ಬಿಜೆಪಿ ನಾಯಕಿಯೊಬ್ಬರು ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ್ದು, ಅವರ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು. ಇಸ್ಲಾಂ ಕಟ್ಟಳೆ ಮುರಿದಿದ್ದಾರೆ ಎಂದು ಆರೋಪಿಸಿ ರೂಬಿ ಖಾನ್ ಎಂಬ ಮಹಿಳೆಯ ವಿರುದ್ಧ ದಿಯೋಬಂದಿ ಧರ್ಮಗುರು ಫತ್ವಾ ಹೊರಡಿಸಿದ್ದರು.

Last Updated : Sep 8, 2022, 10:40 AM IST

ABOUT THE AUTHOR

...view details