ಕರ್ನಾಟಕ

karnataka

2 ದಿನ - ಎಂಟು ಸ್ಥಳಗಳಲ್ಲಿ ಎನ್​ಸಿಬಿ ದಾಳಿ: 3 ಕೋಟಿ ಮೌಲ್ಯದ ಮಾದಕ ದ್ರವ್ಯ ವಶ

By

Published : Dec 14, 2021, 10:17 PM IST

ಕಳೆದ ಎರಡು ದಿನಗಳಲ್ಲಿ ದಾಳಿ ನಡೆಸಿ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯದ 13 ಕೋಟಿ ಮೌಲ್ಯದ 9 ಕೆಜಿ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ.

ಎರಡು ದಿನಗಳಲ್ಲಿ ಎಂಟು ಸ್ಥಳಗಳಲ್ಲಿ ಎನ್​ಸಿಬಿ ದಾಳಿ
ಎರಡು ದಿನಗಳಲ್ಲಿ ಎಂಟು ಸ್ಥಳಗಳಲ್ಲಿ ಎನ್​ಸಿಬಿ ದಾಳಿ

ಮುಂಬೈ: ಮುಂಬೈ ಎನ್​ಸಿಬಿ ಅಧಿಕಾರಿಗಳು ಕಳೆದ ಎರಡು ದಿನಗಳಲ್ಲಿ ಎಂಟು ಸ್ಥಳಗಳಲ್ಲಿ ದಾಳಿ ನಡೆಸಿ ಆರು ಪ್ರಕರಣಗಳನ್ನು ದಾಖಲಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮುಂಬೈ ಎನ್‌ಸಿಬಿ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಮಾತನಾಡಿ, ದಾಳಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆ ಮೌಲ್ಯದ 13 ಕೋಟಿ ಮೌಲ್ಯದ 9 ಕೆಜಿ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿದೆ. ಹಲವು ಪ್ರಕರಣಗಳ ತನಿಖೆ ನಡೆಸುತ್ತಿದೆ. ಎನ್​ಸಿಬಿ ಸರಣಿಯಲ್ಲಿ ಇದೊಂದು ದೊಡ್ಡ ಪ್ರಕರಣವಾಗಿದೆ ಎಂದು ವಿವರಿಸಿದರು.

ಇದನ್ನೂ ಓದಿ: ಕಾಡಿಗೆ ಬೆಂಕಿ: ಹೊತ್ತಿ ಉರಿದ ನೈಸರ್ಗಿಕ ಸಂಪತ್ತು.. ದೋಡಾ ಅಪಘಾತದಲ್ಲಿ ಆರು ಸಾವು

ಮಾದಕ ವಸ್ತುಗಳನ್ನು ವಿದೇಶಕ್ಕೆ ಸಾಗಿಸಲಾಗುತ್ತಿತ್ತು. ಓವನ್‌ಗಳು, ಟೈಗಳು, ಸ್ಟೆತಸ್ಕೋಪ್‌ಗಳು ಮತ್ತು ಬೈಸಿಕಲ್ ಹೆಲ್ಮೆಟ್‌ಗಳಂತಹ ವಸ್ತುಗಳನ್ನು ಈ ಕಳ್ಳಸಾಗಣೆಗೆ ಬಳಸಲಾಗುತ್ತಿತ್ತು ಎಂದು ಮಾಹಿತಿ ನೀಡಿದರು.

ಕಳ್ಳಸಾಗಾಣಿಕೆದಾರರು ಕಳೆದ ಎರಡು ತಿಂಗಳಿನಿಂದ ಮಾದಕ ದ್ರವ್ಯ ಸಾಗಣೆ ಮಾಡುತ್ತಿದ್ದರು. ಹೆಚ್ಚಿನ ಕಾರ್ಯಾಚರಣೆಗಳಲ್ಲಿ ಕೊರಿಯರ್ ಸೇವೆಗಳನ್ನು ಬಳಸಿದ್ದಾರೆ. ಹಾಗೆ ಹಲವು ನಕಲಿ ಹೆಸರುಗಳು ಮತ್ತು ಗುರುತಿನ ಚೀಟಿಗಳನ್ನು ಬಳಸಲಾಗಿದೆ ಎಂದರು.

ABOUT THE AUTHOR

...view details