ಕರ್ನಾಟಕ

karnataka

ವೃದ್ಧನಿಂದ ಅತ್ಯಾಚಾರ, ಗರ್ಭಿಣಿಯಾದ ಬಾಲಕಿ.. ಪಂಚಾಯಿತಿ ನಡೆಸಿ ಪ್ರಕರಣ ಮುಚ್ಚಿಹಾಕಲು ಯತ್ನ!

By

Published : Apr 11, 2022, 9:09 AM IST

ಅಪ್ರಾಪ್ತ ಬಾಲಕಿಗೆ ಸಂಬಂಧಿ ವೃದ್ಧನೋರ್ವ ಲೈಂಗಿಕ ಕಿರುಕುಳ ನೀಡಿ ಗರ್ಭವತಿಯಾಗಿರುವ ಘಟನೆ ಪಶ್ಚಿಮ ಚಂಪಾರನ್ ಜಿಲ್ಲೆಯ ಬಗಾಹ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ವೃದ್ಧನು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ಈ ವಿಷಯವನ್ನು ಮುಚ್ಚಿಡಲು ಸಂತ್ರಸ್ತೆಯ ಮನೆಯವರ ಮೇಲೆ ಒತ್ತಡ ಹೇರಿ ಪಂಚಾಯಿತಿ ನಡೆಸಿರುವುದಾಗಿ ತಿಳಿದುಬಂದಿದೆ.

molestation-of-minor-in-bagaha
ವೃದ್ಧನಿಂದ ಬಾಲಕಿ ಮೇಲೆ ಅತ್ಯಾಚಾರ: ಪಂಚಾಯತಿ ನಡೆಸಿ ಪ್ರಕರಣ ಮುಚ್ಚಲು ಯತ್ನ

ಬೆತಿಯಾ (ಬಿಹಾರ ) : ಅಪ್ರಾಪ್ತ ಬಾಲಕಿಗೆ ಸಂಬಂಧಿ ವೃದ್ಧನೋರ್ವ ಲೈಂಗಿಕ ಕಿರುಕುಳ ನೀಡಿ ಗರ್ಭವತಿಯಾಗಿರುವ ಘಟನೆ ಪಶ್ಚಿಮ ಚಂಪಾರನ್ ಜಿಲ್ಲೆಯ ಬಗಾಹ ಎಂಬಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ವೃದ್ಧ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದು, ವಿಷಯವನ್ನು ಮುಚ್ಚಿಡಲು ಸಂತ್ರಸ್ತೆಯ ಮನೆಯವರ ಮೇಲೆ ಒತ್ತಡ ಹೇರಿ ಪಂಚಾಯಿತಿ ನಡೆಸಿರುವುದಾಗಿ ತಿಳಿದುಬಂದಿದೆ. ಅಚ್ಚರಿಯ ಸಂಗತಿ ಎಂದರೆ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಆರೋಪಿಗೆ ಎರಡು ಲಕ್ಷ ರೂಪಾಯಿ ದಂಡ ವಿಧಿಸಿ ಪಂಚಾಯಿತಿ ಆದೇಶ ಹೊರಡಿಸಿದ್ದು, ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗಿದೆ ಎಂದು ವರದಿಯಾಗಿದೆ. ಜಿಲ್ಲೆಯ ಭೈರೋಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವೃದ್ಧ ತನ್ನ ಮನೆಯಲ್ಲಿ ಯಾರೂ ಇಲ್ಲ ಎಂದು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಆಹಾರ ತಯಾರಿಸಿಕೊಡಲು ಕರೆಸಿಕೊಂಡಿದ್ದ. ಬಾಲಕಿ ತಂದೆಯ ಒಪ್ಪಿಗೆಯಂತೆ ಆಹಾರ ಮಾಡಿಕೊಡಲು ಸಂಬಂಧಿ ವೃಧ್ದನ ಮನೆಗೆ ಹೋಗಿದ್ದಳು. ಈ ಸಂದರ್ಭ ಅತ್ಯಾಚಾರ ಎಸಗಿರುವುದಾಗಿ ತಿಳಿದುಬಂದಿದೆ. ನಂತರ ಬಾಲಕಿ ಗರ್ಭಿಣಿಯಾಗಿದ್ದು, ಕೆಲವು ದಿನಗಳ ನಂತರ ಬಾಲಕಿಯ ಮನೆಯವರು ಗರ್ಭಪಾತ ಮಾಡಿಸಿದ್ದರು. ಈ ವಿಷಯ ಜನರಿಗೆ ತಿಳಿದಿಲ್ಲ ಎಂದು ಬಾಲಕಿಯ ಮನೆಯವರು ಮೌನವಾಗಿದ್ದರು.

ಎರಡು ಲಕ್ಷ ದಂಡ ಪಾವತಿಸುವುದಾಗಿ ಹೇಳಿದ ವೃದ್ಧ: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಂಚಾಯಿತಿ ಮಾಡುವಾಗ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ವೃದ್ಧ ಒಪ್ಪಿಕೊಂಡಿದ್ದಾನೆ. ಈ ಬಗ್ಗೆ 2 ಲಕ್ಷ ರೂಪಾಯಿ ದಂಡ ಕಟ್ಟುವುದಾಗಿಯೂ ಪಂಚಾಯಿತಿಯಲ್ಲಿ ಒಪ್ಪಿಕೊಂಡಿದ್ದಾನೆ. ಇಷ್ಟೆಲ್ಲ ನಡೆದ ಬಳಿಕವೂ ಆರೋಪಿಯು ಮತ್ತೆ ಬಾಲಕಿಯನ್ನು ಬೆದರಿಸಿ ಲೈಂಗಿಕ ಕಿರುಕುಳ ನೀಡಲು ಯತ್ನಿಸಿರುವುದಾಗಿ ಎಂದು ಸಂಬಂಧಿಕರು ಹೇಳಿದ್ದಾರೆ.

ಈ ಬಗ್ಗೆ ಬಾಲಕಿ ತನ್ನ ಪೋಷಕರಿಗೆ ತಿಳಿಸಿದ್ದು, ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ವಿಷಯ ತಿಳಿದ ಗ್ರಾಮಸ್ಥರು ಮತ್ತೆ ಪಂಚಾಯಿತಿ ಕರೆದು ಮಾತುಕತೆ ನಡೆಸಿದ್ದರೆನ್ನಲಾಗಿದೆ. ಇದರಿಂದಾಗಿ ಸಂತ್ರಸ್ತೆಯ ಕುಟುಂಬಸ್ಥರು ಮಹಿಳಾ ಪೊಲೀಸ್ ಠಾಣೆಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಎಸ್ಎಚ್ಒ ಉಮಾಶಂಕರ್ ಅವರನ್ನು ಅಮಾನತುಗೊಳಿಸಿ ಎಸ್ಪಿ ಕಿರಣ್ ಕುಮಾರ್ ಗೋರಖ್ ಅವರು ಆದೇಶ ಹೊರಡಿಸಿದ್ದಾರೆ.

ಓದಿ :ಅವ್ರು ಮಾಂಸದೂಟ ಬೇಕು ಅಂದ್ರು, ಇವ್ರು ರಾಮನವಮಿ ದಿನ ಬೇಡ ಅಂದ್ರು.. ಇಷ್ಟಕ್ಕೆ ಜೆಎನ್​ಯು ಕ್ಯಾಂಪಸ್​ ರಕ್ತಸಿಕ್ತ!

ABOUT THE AUTHOR

...view details