ಕರ್ನಾಟಕ

karnataka

'ಯುಪಿಯಲ್ಲಿ ಬಿಜೆಪಿ ಗೆಲ್ಲಿಸಿದ ಮಾಯಾವತಿ,ಓವೈಸಿಗೆ ಪದ್ಮವಿಭೂಷಣ, ಭಾರತ ರತ್ನ ನೀಡಬೇಕು': ಶಿವಸೇನೆ

By

Published : Mar 11, 2022, 7:27 PM IST

ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸಿದೆ. ಅದರ ಬಗ್ಗೆ ನನಗೆ ಬೇಸರವಿಲ್ಲ. ನಿಮ್ಮ ಸಂತೋಷದಲ್ಲಿ ನಾವು ಭಾಗಿಯಾಗುತ್ತೇವೆ. ಆದರೆ, ಉತ್ತರಾಖಂಡ ಮುಖ್ಯಮಂತ್ರಿ, ಗೋವಾದ ಇಬ್ಬರು ಡೆಪ್ಯುಟಿ ಸಿಎಂ ಸೋಲು ಕಂಡಿದ್ಯಾಕೆ? ಒಂದು ರಾಷ್ಟ್ರೀಯ ಪಕ್ಷ ಪಂಜಾಬ್​​ನಲ್ಲಿ ಸಂಪೂರ್ಣವಾಗಿ ನೆಲಕಚ್ಚಿದೆ..

Mayawati Owaisi contributed bjp win
Mayawati Owaisi contributed bjp win

ಮುಂಬೈ(ಮಹಾರಾಷ್ಟ್ರ):ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಭರ್ಜರಿ ಗೆಲುವು ದಾಖಲು ಮಾಡಿ, ಸತತ ಎರಡನೇ ಅವಧಿಗೆ ಸರ್ಕಾರ ರಚನೆ ಮಾಡಲು ಮುಂದಾಗಿದೆ. ಈ ವಿಷಯವಾಗಿ ಮಾತನಾಡಿರುವ ಶಿವಸೇನೆಯ ಸಂಜಯ್ ರಾವತ್,​​ ಬಹುಜನ ಸಮಾಜವಾದಿ ಪಕ್ಷದ ಅಧ್ಯಕ್ಷೆ ಮಾಯಾವತಿ ಹಾಗೂ ಎಐಎಂಐಎಂ ಮುಖ್ಯಸ್ಥ ಓವೈಸಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸುವಲ್ಲಿ ಕೊಡುಗೆ ನೀಡಿರುವ ಓವೈಸಿ, ಮಾಯಾವತಿಗೆ ಪದ್ಮ ವಿಭೂಷಣ ಅಥವಾ ಭಾರತ ರತ್ನ ನೀಡಬೇಕು ಎಂದಿರುವ ರಾವತ್​, ಬಿಜೆಪಿ ಅದ್ಭುತ ವಿಜಯ ಸಾಧಿಸಿದೆ. ಈ ಗೆಲುವಿನಲ್ಲಿ ಮಾಯಾವತಿ ಮತ್ತು ಓವೈಸಿ ಬಿಜೆಪಿಗೆ ಗೆಲುವಿನ ಕೊಡುಗೆ ನೀಡಿದ್ದಾರೆ ಎಂದರು.

ಇದನ್ನೂ ಓದಿರಿ:ಕೊನೆಯ ಸಚಿವ ಸಂಪುಟ ಸಭೆ ನಡೆಸಿ, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಯೋಗಿ

ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆಲುವು ಸಾಧಿಸಿದೆ. ಅದರ ಬಗ್ಗೆ ನನಗೆ ಬೇಸರವಿಲ್ಲ. ನಿಮ್ಮ ಸಂತೋಷದಲ್ಲಿ ನಾವು ಭಾಗಿಯಾಗುತ್ತೇವೆ. ಆದರೆ, ಉತ್ತರಾಖಂಡ ಮುಖ್ಯಮಂತ್ರಿ, ಗೋವಾದ ಇಬ್ಬರು ಡೆಪ್ಯುಟಿ ಸಿಎಂ ಸೋಲು ಕಂಡಿದ್ಯಾಕೆ? ಒಂದು ರಾಷ್ಟ್ರೀಯ ಪಕ್ಷ ಪಂಜಾಬ್​​ನಲ್ಲಿ ಸಂಪೂರ್ಣವಾಗಿ ನೆಲಕಚ್ಚಿದೆ.

ಇದರ ಬಗ್ಗೆ ಆ ಪಕ್ಷ ಚಿಂತನೆ ನಡೆಸಬೇಕು ಎಂದರು. ಪ್ರಧಾನಮಂತ್ರಿ, ಗೃಹ ಮಂತ್ರಿ, ರಕ್ಷಣಾ ಸಚಿವರು ಸೇರಿದಂತೆ ಎಲ್ಲರೂ ಪಂಜಾಬ್‌ನಲ್ಲಿ ಪ್ರಚಾರ ನಡೆಸಿದ್ದರು. ಆದರೆ, ಗೆಲುವು ಸಾಧಿಸಲು ನಿಮಗೆ ಸಾಧ್ಯವಾಗಲಿಲ್ಲ ಎಂದರು.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಉತ್ತರ ಪ್ರದೇಶ, ಮಣಿಪುರ,ಗೋವಾ ಮತ್ತು ಉತ್ತರಾಖಂಡದಲ್ಲಿ ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡುವಲ್ಲಿ ಯಶಸ್ವಿಯಾಗಿದೆ. ಪಂಜಾಬ್​​ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್​ ಸಂಪೂರ್ಣ ಸೋತಿದ್ದು, ಆಮ್​ ಆದ್ಮಿ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಉತ್ತರಪ್ರದೇಶದಲ್ಲಿ ಅತಿ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದ ಬಿಎಸ್​ಪಿ ಕೇವಲ 1 ಸ್ಥಾನದಲ್ಲಿ ಗೆಲುವು ಸಾಧಿಸಿದ್ದು, ಓವೈಸಿ ಪಕ್ಷ ಯಾವುದೇ ಸ್ಥಾನದಲ್ಲೂ ಗೆಲುವಿನ ಖಾತೆ ತೆರೆದಿಲ್ಲ. 403 ಕ್ಷೇತ್ರಗಳ ಪೈಕಿ ಬಿಜೆಪಿ 273, ಸಮಾಜವಾದಿ ಪಕ್ಷ 125, ಕಾಂಗ್ರೆಸ್​​ 2 ಹಾಗೂ ಇತರೆ 2 ಸ್ಥಾನಗಳಲ್ಲಿ ಗೆದ್ದಿದೆ.

ABOUT THE AUTHOR

...view details