ಕರ್ನಾಟಕ

karnataka

Maruti Suzuki ಕಾರುಗಳ ಬೆಲೆಯಲ್ಲಿ ಶೇ.1.9ರಷ್ಟು ಹೆಚ್ಚಳ ಮಾಡಿದ ಕಂಪನಿ: ಕಾರಣ?

By

Published : Sep 6, 2021, 1:54 PM IST

ಜನವರಿ ಮತ್ತು ಏಪ್ರಿಲ್​ ತಿಂಗಳಿನಲ್ಲಿ ಮಾರುತಿ ಸುಜುಕಿ(Maruti Suzuki) ಕಂಪನಿಯು ಬೆಲೆ ಕೊಂಚ ಹೆಚ್ಚಳ ಮಾಡಿತ್ತು. ಇದೀಗ ಮತ್ತೆ ಏರಿಕೆ ಮಾಡಿದೆ. ಇನ್ನು ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಸೆಲೆರಿಯೊ ಹೊರತುಪಡಿಸಿ ಉಳಿದೆಲ್ಲಾ ಕಾರುಗಳ ಮೇಲೆ ದರ ಹೆಚ್ಚಳ ಮಾಡಿದೆ.

Maruti Suzuki
ಮಾರುತಿ ಸುಜುಕಿ ಕಾರು

ನವದೆಹಲಿ:ಜನಪ್ರಿಯ ಮಾರುತಿ ಸುಜುಕಿ(Maruti Suzuki) ಕಾರು ಉತ್ಪಾದನಾ ಕಂಪನಿಯು ತನ್ನೆಲ್ಲಾ ಮಾದರಿಗಳ ಮೇಲಿನ ಬೆಲೆಯನ್ನು ಶೇ. 1.9ರಷ್ಟು ಹೆಚ್ಚಿಸುವುದಾಗಿ ಹೇಳಿತ್ತು. ಆ ಘೋಷಣೆ ಇಂದಿನಿಂದ ಜಾರಿಗೆ ಬರಲಿದೆ. ಆಯ್ದ ಮಾದರಿಗಳ ಎಕ್ಸ್ ಶೋ ರೂಂ ಬೆಲೆಗಳಲ್ಲಿ ಶೇಕಡಾ 1.9ರಷ್ಟು ಸರಾಸರಿ ಬೆಲೆ ಏರಿಕೆ ಮಾಡಿದೆ.

ಇನ್​ಪುಟ್ ವೆಚ್ಚಗಳ ಹೆಚ್ಚಳದಿಂದಾಗಿ ಕಳೆದ ವರ್ಷ ಕಂಪನಿಯು ತೀವ್ರ ಪರಿಣಾಮ ಎದುರಿಸಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಬೆಲೆ ಏರಿಕೆ ಮಾಡಿದ್ದು, ಸೆಪ್ಟೆಂಬರ್ 2021ರಿಂದ ಪರಿಷ್ಕೃತ ಆದೇಶ ಜಾರಿಯಾಗಿದೆ.

ಈ ಹಿಂದೆ ಜನವರಿ ಮತ್ತು ಏಪ್ರಿಲ್​ ತಿಂಗಳಿನಲ್ಲಿ ಮಾರುತಿ ಸುಜುಕಿ ಕಂಪನಿಯು ಬೆಲೆ ಕೊಂಚ ಹೆಚ್ಚಳ ಮಾಡಿತ್ತು. ಇದೀಗ ಮತ್ತೆ ಏರಿಕೆ ಮಾಡಿದೆ. ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಸೆಲೆರಿಯೊ ಹೊರತುಪಡಿಸಿ ಉಳಿದೆಲ್ಲಾ ಕಾರುಗಳ ಮೇಲೆ ದರ ಹೆಚ್ಚಳ ಮಾಡಿದೆ.

ABOUT THE AUTHOR

...view details