ಕರ್ನಾಟಕ

karnataka

21 ಸಾವಿರ ಬಡ ಹೆಣ್ಣುಮಕ್ಕಳಿಗೆ ಮದುವೆ ಮಾಡಿಸಿದ ಸಚಿವ ಗೋಪಾಲ್ ಭಾರ್ಗವ.. ಈಡೇರಿದ ಸಂಕಲ್ಪ

By

Published : Mar 12, 2023, 4:54 PM IST

ಮಧ್ಯಪ್ರದೇಶದ ಸಾಗರದ ಗಧಕೋಟಾದಲ್ಲಿ ಸಚಿವ ಗೋಪಾಲ್ ಭಾರ್ಗವ ಅವರು ಏರ್ಪಡಿಸಿದ್ದ 20 ನೇ ಸಾಮೂಹಿಕ ವಿವಾಹದಲ್ಲಿ 2100 ಬಡ ಹೆಣ್ಣುಮಕ್ಕಳ ನವದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಚಿವ ಗೋಪಾಲ್ ಭಾರ್ಗವ ಅವರು 22 ವರ್ಷದ ಹಿಂದೆ ಆರಂಭಿಸಿದ ಬಡ ಹೆಣ್ಣುಮಕ್ಕಳನ್ನು ದತ್ತು ಪಡೆದು ಕನ್ಯಾದಾನ ಮಾಡುವ ಮಹಾನ್ ಸಂಕಲ್ಪವನ್ನು 21 ಸಾವಿರ ಹುಡುಗಿಯರಿಗೆ ಮದುವೆ ಮಾಡಿಸುವ ಮೂಲಕ ಈಡೇರಿಸಿದ್ದಾರೆ.

mass marriage
ಸಾಮೂಹಿಕ ವಿವಾಹ

ಸಾಗರ್​: ಮಧ್ಯಪ್ರದೇಶದ ಹಿರಿಯ ಸಚಿವ ಗೋಪಾಲ್ ಭಾರ್ಗವ ಅವರು 22 ವರ್ಷಗಳ ಹಿಂದೆ ಆರಂಭಿಸಿದ್ದ ಬಡ ಕುಟುಂಬದ ಹೆಣ್ಣುಮಕ್ಕಳನ್ನು ದತ್ತು ಪಡೆದು ಕನ್ಯಾದಾನ ಮಾಡುವ ಮಹಾನ್ ಸಂಕಲ್ಪವನ್ನು 21 ಸಾವಿರ ಹುಡುಗಿಯರಿಗೆ ಮದುವೆ ಮಾಡಿಸುವ ಮೂಲಕ ಈಡೇರಿಸಿದ್ದಾರೆ.

ಈ ಬಾರಿಯೂ 20ನೇ ಸಾಮೂಹಿಕ ವಿವಾಹ ಅಚ್ಚುಕಟ್ಟಾಗಿ ನೆರವೇರಿಸಿದ್ದು, ಒಂದೇ ಮಂಟಪದಲ್ಲಿ 2100 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಮಹಾ ಸಂಕಲ್ಪದ ಪೂರ್ಣಾಹುತಿ ದಿನಕ್ಕೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಮತ್ತು ಮಧ್ಯಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ವಿಧಿ ಶರ್ಮಾ ಸೇರಿದಂತೆ ಇತರೆ ಮುಖಂಡರು ಸಾಕ್ಷಿಯಾದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್​ ಮಾತನಾಡಿ, ಸಚಿವ ಗೋಪಾಲ್ ಭಾರ್ಗವ ಅವರು ರಾಜಕಾರಣಿ ಅಷ್ಟೇ ಅಲ್ಲ, ಸಮಾಜ ಸೇವೆಗೆ ತಾಜಾ ಉದಾಹರಣೆ ಎಂದು ಬಣ್ಣಿಸಿದರು. ಬಡ ಕುಟುಂಬದ ಹೆಣ್ಣುಮಕ್ಕಳನ್ನು ದತ್ತು ಪಡೆದು ಕನ್ಯಾದಾನ ಮಾಡುವ ಮಹಾನ್ ಸಂಕಲ್ಪವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಸಚಿವ ಗೋಪಾಲ್ ಭಾರ್ಗವ ಅವರ ಪುತ್ರ ಅಭಿಷೇಕ್ ಭಾರ್ಗವ ಅವರು ತಂದೆಯಂತೆ ಸಮಾಜ ಸೇವೆಯಲ್ಲಿ ತೊಡಗಿದ್ದು, ವಜ್ರ ಎಂದು ಬಣ್ಣಿಸಿ, ಅವರು ಸಹ ಬಡ ಅನಾಥ ಮಕ್ಕಳನ್ನು ದತ್ತು ಪಡೆದಿದ್ದಾರೆ ಎಂದು ಪ್ರಶಂಸಿಸಿದರು.

ಗೋಪಾಲ ಭಾರ್ಗವ ಕೇವಲ ರಾಜಕಾರಣಿಯಲ್ಲ. ಅವರೊಬ್ಬ ಸಮಾಜ ಸೇವಕ ಹಾಗೂ ಅಭಿವೃದ್ಧಿ ಪುರುಷ. ಅವರು ಯಾವಾಗಲೂ ಮಧ್ಯಪ್ರದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಾರೆ. 21 ಸಾವಿರ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿ ರಚಿಸಿದ ಸಮಾಜ ಸೇವೆಯ ಇತಿಹಾಸ ಅನುಕರಣೀಯ. ಈ ಬಾರಿಯೂ ಅದ್ಧೂರಿ ಸಾಮೂಹಿಕ ವಿವಾಹ ಸಮಾರಂಭ ಏರ್ಪಡಿಸಿ 2100 ಹುಡುಗಿಯರ ಮದುವೆಯನ್ನು ನೆರವೇರಿಸಿದರು ಎಂದು ಶ್ಲಾಘಿಸಿದರು.

ರಾಜಕೀಯ ವೃತ್ತಿಯಲ್ಲ, ಅದೊಂದು ಸಮಾಜಸೇವೆ ಎನ್ನುವುದನ್ನೂ ಗೋಪಾಲ ಭಾರ್ಗವ ಸಾಬೀತುಪಡಿಸಿದ್ದಾರೆ. 1 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದ ಸಾಮೂಹಿಕ ವಿವಾಹವನ್ನು ಸಮಾಜ ಸೇವೆಯ ಮಹಾಕುಂಭ ಎಂದು ಸಿಎಂ ಹೊಗಳಿದರು.

ಸಚಿವ ಗೋಪಾಲ್ ಭಾರ್ಗವ ಮಾತನಾಡಿ, 20 ವರ್ಷಗಳ ಹಿಂದೆ ಸಿಎಂ ಶಿವರಾಜ್ ಸಿಂಗ್ ಹಾಗೂ ತಾವು ಬಡ ಹೆಣ್ಣುಮಕ್ಕಳ ಮದುವೆ ಸಮಾರಂಭ ಆರಂಭಿಸಿದ್ದೆವು. ಈ ಹಿಂದೆ ಬಡತನದಿಂದಾಗಿ ಮನೆ, ಚಿನ್ನಾಭರಣವನ್ನು ಹೆಣ್ಣು ಮಕ್ಕಳ ಮದುವೆಗೆ ಅಡಮಾನ ಇಟ್ಟಿದ್ದ ಪೋಷಕರ ನೋವನ್ನು ಮುಖ್ಯಮಂತ್ರಿ ಚೌಹಾಣ್ ಅರ್ಥ ಮಾಡಿಕೊಂಡು ಮುಖ್ಯಮಂತ್ರಿ ಕನ್ಯಾ ವಿವಾಹ-ನಿಖಾ ಯೋಜನೆ ಆರಂಭಿಸಿದ್ದು ದೊಡ್ಡ ಪುಣ್ಯ. 20 ವರ್ಷಗಳ ಹಿಂದೆ ಅದನ್ನು ಸಣ್ಣ ರೂಪದಲ್ಲಿ ಪ್ರಾರಂಭಿಸಿದ್ದೆ, ಅದು ಈಗ ದೊಡ್ಡ ರೂಪವನ್ನು ಪಡೆದುಕೊಂಡಿದೆ ಎಂದು ಹೇಳಿದರು.

ಗೋಪಾಲ್ ಭಾರ್ಗವ ಏರ್ಪಡಿಸಿದ್ದ 20ನೇ ಸಾಮೂಹಿಕ ವಿವಾಹದಲ್ಲಿ ಕುಶ್ವಾಹ ಸಮುದಾಯದ 500 ದಂಪತಿ, ಅಹಿರ್ವಾರ್ ಸಮುದಾಯದ 400, ತಲಾ 150 ಕುರ್ಮಿ ​​ಮತ್ತು ಲೋಧಿಯಿಂದ, 50 ಬ್ರಾಹ್ಮಣ ಸಮುದಾಯ, 50 ಮುಸ್ಲಿಂ ಸಮುದಾಯದ ಜೋಡಿಗಳು ನವದಾಂಪತ್ಯಕ್ಕೆ ಕಾಲಿಟ್ಟರು.

ಇದನ್ನೂಓದಿ:ಸಕ್ಕರೆ ನಾಡಲ್ಲಿ ಮೋದಿಗೆ ಅಕ್ಕರೆಯ ಸ್ವಾಗತ: ಭರ್ಜರಿ ರೋಡ್​​ ಶೋ, ಹೂವಿನ ಸುರಿಮಳೆ!- ವಿಡಿಯೋ

ABOUT THE AUTHOR

...view details