ಕರ್ನಾಟಕ

karnataka

ಪ್ರೀತಿಸಲು ನಿರಾಕರಿಸಿದ ಯುವತಿ: ಮನೆಗೆ ನುಗ್ಗಿ ಹತ್ಯೆ ಮಾಡಿದ ಯುವಕ

By

Published : Nov 23, 2022, 4:44 PM IST

ಚಂಡೀಗಢದಲ್ಲಿ ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ಯುವಕ ಹತ್ಯೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆರೋಪಿ ಮುಹಮ್ಮದ್ ಶಾರಿಕ್​ನನ್ನು ಬಂಧಿಸಿದ್ದು, ಹೆಚ್ಚಿನ ತನಿಖೆ ಆರಂಭಿಸಿದ್ದಾರೆ.

Accused Muhammad Shariq
ಪ್ರೀತಿಸಲು ನಿರಾಕರಿಸಿದ ಯುವತಿ

ಚಂಡೀಗಢ(ಪಂಜಾಬ್​): ಯುವತಿಯೋರ್ವಳು ಪ್ರೀತಿ ಮಾಡಲು ನಿರಾಕರಿಸಿದಳು ಎಂಬ ಕಾರಣಕ್ಕೆ, ಆಕೆಯನ್ನು ಯುವಕನೋರ್ವ ಹತ್ಯೆ ಮಾಡಿರುವ ಘಟನೆ ಪಂಜಾಬ್​ನ ಸೆಕ್ಟರ್ 45 ಬುರೈಲ್​ನಲ್ಲಿ ನಡೆದಿದೆ. ಕೊಲೆ ಮಾಡಿದ ಆರೋಪಿ ಚಂಡೀಗಢದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಸೆಕ್ಟರ್-43ರ ಬಸ್ ನಿಲ್ದಾಣದಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಯುವಕ ಮಹಮ್ಮದ್ ಶಾರಿಕ್ 18 ವರ್ಷದ ಯುವತಿಯ ಮನೆಗೆ ನುಗ್ಗಿ ಆಕೆಯನ್ನು ಕೊಂದಿದ್ದಾನೆ. ವಾಸ್ತವವಾಗಿ, ಮೊಹಮ್ಮದ್ ಶಾರಿಕ್​ಗೆ ಮದುವೆಯಾಗಿದ್ರೂ, ಪ್ರೀತಿಸುವಂತೆ ಯುವತಿಗೆ ಒತ್ತಡ ಹೇರುತ್ತಿದ್ದ. ಯುವಕ ಮತ್ತು ಯುವತಿ ಪರಸ್ಪರ ಎದುರು ಮನೆಯಲ್ಲಿ ವಾಸಿಸುತ್ತಿದ್ದರು. ಆರೋಪಿ ಮೂಲತಃ ಬಿಹಾರದ ಮಧುಬನಿ ಜಿಲ್ಲೆಯ ಬೇಲಾ ಗ್ರಾಮದವನಾಗಿದ್ದಾನೆ.

ಮನೆಗೆ ನುಗ್ಗಿ ಕೊಲೆ: ಮೃತ ಯುವತಿಯ ತಾಯಿ ಮನೆಗೆಲಸ ಮಾಡಿ ಕುಟುಂಬವನ್ನು ಪೋಷಿಸುತ್ತಿದ್ದರು. ಬಾಲಕಿಯ ತಂದೆ ಉತ್ತರ ಪ್ರದೇಶದ ತಮ್ಮ ಹುಟ್ಟೂರಿನಲ್ಲಿ ವಾಸವಾಗಿದ್ದಾರೆ. ಯುವತಿಯ ಸಹೋದರ ನವೆಂಬರ್ 19ರಂದು ಬೆಳಗ್ಗೆ ಮನೆಯಿಂದ ಶಾಲೆಗೆ ಹೋಗಿದ್ದಾನೆ. ಮಧ್ಯಾಹ್ನ ವಾಪಸ್​ ಬರುವಾಗ ಮನೆಯ ಬಾಗಿಲು ತೆರೆದಿದ್ದು, ಬಾಲಕಿ ಹಾಸಿಗೆಯ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ.

ಬಾಲಕನ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಯುವತಿಯ ತಾಯಿ ಅಕ್ಕಪಕ್ಕದ ಮನೆಯವರಿಗೆ ಕರೆ ಮಾಡಿ ಮಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸರ್ಕಾರಿ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ಸೆಕ್ಟರ್-16ಕ್ಕೆ ಬರುವಷ್ಟರಲ್ಲಿ ಯುವತಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.

ಮೊಹಮ್ಮದ್ ಶಾರಿಕ್ ಹೋಟೆಲ್‌ನಲ್ಲಿ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರೆ, ಮೃತ ಯುವತಿ 12 ನೇ ತರಗತಿ ಓದುತ್ತಿದ್ದಳು. ಮೊಹಮ್ಮದ್ ಶಾರಿಕ್ ಕೆಲವು ತಿಂಗಳಿನಿಂದ ಯುವತಿಗೆ ಪ್ರೀತಿಸುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದ ಎಂದು ತಿಳಿದುಬಂದಿದೆ. ಇದಕ್ಕೆ ಯುವತಿ ನಿರಾಕರಿಸಿದ್ದಕ್ಕೆ ಕೊಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಕೊಲೆಗೂ ಮುನ್ನ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ತಂದೆ, ತಾಯಿ, ಸಹೋದರಿ, ಅಜ್ಜಿಯನ್ನು ಬರ್ಬರವಾಗಿ ಇರಿದು ಕೊಂದ ಪುತ್ರ!

ಕಳೆದ ಕೆಲವು ದಿನಗಳಿಂದ ನನ್ನ ಮಗಳು ಆತನನ್ನು ಪ್ರೀತಿಸುವಂತೆ ಶಾರಿಕ್​ ಒತ್ತಡ ಹೇರುತ್ತಿದ್ದ. ಈಗಾಗಲೇ ಆತನಿಗೆ ಮದುವೆಯಾಗಿದ್ದರಿಂದ ಅವಳು ಪ್ರೀತಿ ಮಾಡಲು ನಿರಾಕರಿಸಿದ್ದಳು ಎಂದು ಮೃತ ಯುವತಿ ತಾಯಿ ಹೇಳಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಮನೆ ಮಾಲೀಕ ಯುವತಿ ತಾಯಿಯ ದೂರಿನ ಮೇರೆಗೆ ಶಾರಿಕ್​ನ ಮನೆ ಕಾಲಿ ಮಾಡಿಸಿದ್ದರು. ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಮೊಹಮ್ಮದ್ ಶಾರಿಕ್​ನನ್ನು ಗುರುತಿಸಿದ್ದಾರೆ. ಆರೋಪಿಯು ಯುವತಿ ಮನೆಯಲ್ಲಿ ಸುಮಾರು 1 ಗಂಟೆ ಇದ್ದು, ನಂತರ ಓಡಿ ಹೋಗಿರುವುದು ಸಿಸಿಟಿವಿಯಿಂದ ತಿಳಿದುಬಂದಿದೆ.

ABOUT THE AUTHOR

...view details