ಕರ್ನಾಟಕ

karnataka

ಕಾನೂನು ಆಯೋಗಕ್ಕೆ ಎರಡೂವರೆ ವರ್ಷಗಳ ಬಳಿಕ ಅಧ್ಯಕ್ಷ, ಸದಸ್ಯರ ಆಯ್ಕೆ

By

Published : Nov 8, 2022, 12:05 PM IST

ಸಂಕೀರ್ಣ ಕಾನೂನು ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರಕ್ಕೆ ಸೂಕ್ತ ಸಲಹೆ ನೀಡುವುದು ಕಾನೂನು ಆಯೋಗದ ಕೆಲಸವಾಗಿದೆ. ಇದೀಗ ಎರಡೂವರೆ ವರ್ಷಗಳ ಬಳಿಕ ಆಯೋಗಕ್ಕೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕವಾಗಿದೆ.

Retired Chief Justice Rituraj Awasthi
ನಿವೃತ್ತ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ

ನವದೆಹಲಿ: ಕಾನೂನು ಆಯೋಗ ರಚನೆಯಾದ ಎರಡೂವರೆ ವರ್ಷಗಳ ನಂತರ ಕೇಂದ್ರ ಸರ್ಕಾರ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿದೆ. ಕಾನೂನು ಸಚಿವ ಕಿರಣ್ ರಿಜಿಜು ಈ ಕುರಿತು ಟ್ವೀಟ್​ ಮಾಡಿದ್ದು, ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಾಗಿ ಹೇಳಿದ್ದಾರೆ.

ಇದು 22ನೇ ಕಾನೂನು ಆಯೋಗವಾಗಿದ್ದು, ಮೂರು ವರ್ಷಗಳ ಅವಧಿಗೆಂದು 2020ರ ಫೆಬ್ರವರಿ 24 ರಂದು ರಚಿಸಲಾಗಿತ್ತು. ಆ ಸಂದರ್ಭದಲ್ಲಿ ಅಧಿಕೃತವಾಗಿ ಈ ಆಯೋಗಕ್ಕೆ ಅಧ್ಯಕ್ಷರಾಗಿ ಯಾರನ್ನೂ ನೇಮಕ ಮಾಡದೇ ಇದ್ದರೂ, ರಚನೆಯಾದ ದಿನಾಂಕದ ಪ್ರಕಾರ ಮುಂದಿನ ವರ್ಷ ಫೆಬ್ರುವರಿಗೆ ಅಯೋಗದ ಮೊದಲ ಅವಧಿ ಕೊನೆಗೊಳ್ಳುತ್ತದೆ.

21ನೇ ಕಾನೂನು ಆಯೋಗದ ಅವಧಿ 2018ರ ಆಗಸ್ಟ್​ಗೆ ಕೊನೆಗೊಂಡಿತ್ತು. ಸಂಕೀರ್ಣ ಕಾನೂನು ಸಮಸ್ಯೆಗಳ ಕುರಿತು ಕಾನೂನು ಸಮಿತಿಯು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುತ್ತದೆ. ಏಕರೂಪ ನಾಗರಿಕ ಸಂಹಿತೆಗೆ (ಯುಸಿಸಿ) ಸಂಬಂಧಿಸಿದ ಸಮಸ್ಯೆಯನ್ನು ಪ್ರಸಕ್ತ ಕಾನೂನು ಸಮಿತಿಯು ಕೈಗೆತ್ತಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಇದನ್ನೂ ಓದಿ:22ನೇ ಕಾನೂನು ಆಯೋಗಕ್ಕೆ ಕೇಂದ್ರ ಸಚಿವ ಸಂಪುಟ ಅಸ್ತು!

ABOUT THE AUTHOR

...view details