ಕರ್ನಾಟಕ

karnataka

ಆರೋಪಿ ಹಿಡಿಯಲು ಹೋಗಿದ್ದಾಗ ಘರ್ಷಣೆ: ಎಎಸ್‌ಐಗೆ ಥಳಿಸಿ ಬಟ್ಟೆ ಹರಿದ ಗ್ರಾಮಸ್ಥರು

By

Published : Nov 8, 2022, 10:19 PM IST

ಜಾರ್ಖಂಡ್​ನ ಛತ್ರ ಜಿಲ್ಲೆಯಲ್ಲಿ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಘರ್ಷಣೆ ಉಂಟಾಗಿ ಎಎಸ್‌ಐ ನನ್ನು ಅಮಾನುಷವಾಗಿ ಥಳಿಸಿರುವ ಘಟನೆ ಜರುಗಿದೆ.

lathi-charge-on-villagers-after-beating-up-police-man-in-jharkhand
ಆರೋಪಿ ಹಿಡಿಯಲು ಹೋಗಿದ್ದಾಗ ಘರ್ಷಣೆ: ಎಎಸ್‌ಐಗೆ ಥಳಿಸಿ ಬಟ್ಟೆ ಹರಿದ ಗ್ರಾಮಸ್ಥರು

ಛತ್ರ (ಜಾರ್ಖಂಡ್):ರಸ್ತೆ ಅಪಘಾತ ಪ್ರಕರಣದ ಆರೋಪಿಯನ್ನು ಪೊಲೀಸರು ಹಿಡಿಯಲು ಹೋಗಿದ್ದಾಗ ಘರ್ಷಣೆ ನಡೆದು, ಓರ್ವ ಪೊಲೀಸ್​ ಅಧಿಕಾರಿಯನ್ನೇ ಗ್ರಾಮಸ್ಥರು ನಿರ್ದಯವಾಗಿ ಥಳಿಸಿದ್ದಲ್ಲದೇ ಬಟ್ಟೆ ಹರಿದಿರುವ ಘಟನೆ ಜಾರ್ಖಂಡ್​ನ ಛತ್ರ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ದಹುರಿ ಗ್ರಾಮದ ಸಮೀಪ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಮೃತಪಟ್ಟಿದ್ದ. ಅಪಘಾತದ ಬಳಿಕ ಕಾರು ಸಮೇತ ಪರಾರಿಯಾಗಿದ್ದ ಆರೋಪಿಯನ್ನು ಹಿಡಿಯಲು ಎಎಸ್‌ಐ ಸೇರಿ ಪೊಲೀಸರು ಆತನ ಬೆನ್ನಟ್ಟಿದ್ದಾರೆ. ಆದರೆ, ಈ ವೇಳೆ ಪೊಲೀಸರು ಮತ್ತು ಗ್ರಾಮಸ್ಥರ ನಡುವೆ ಘರ್ಷಣೆ ಉಂಟಾಗಿದೆ.

ಅಲ್ಲದೇ, ಎಎಸ್‌ಐಯನ್ನು ಹಿಡಿದು ಗ್ರಾಮಸ್ಥರು ಅಮಾನುಷವಾಗಿ ಥಳಿಸಿದ್ದಾರೆ. ಇಡೀ ಗ್ರಾಮಸ್ಥರು ಗುಂಪು ಸೇರಿಕೊಂಡು ಪೊಲೀಸ್​ ಅಧಿಕಾರಿ ಎಂಬುವುದನ್ನೂ ನೋಡದೇ ಆತನ ಬಟ್ಟೆ ಹರಿದು ಹಾಕಿದ್ದು, ಇದರಿಂದ ಎಎಸ್‌ಐ ಪ್ರಾಣ ಭಿಕ್ಷೆ ಬೇಡುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.

ಇದಾದ ಬಳಿಕ ಕಲ್ಲು ತೂರಾಟ, ಲಾಠಿ ಪ್ರಹಾರ ಸಹ ನಡೆದಿದೆ. ಇದರಿಂದಾಗಿ ಇಡೀ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಡಿವೈಎಸ್ಪಿ ಅವಿನಾಶ್ ಕುಮಾರ್ ಮತ್ತು ಪೊಲೀಸ್ ಠಾಣೆ ಪ್ರಭಾರಿ ಮನೋಹರ್ ಕರ್ಮಾಲಿ ಸೇರಿದಂತೆ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ವರದಕ್ಷಿಣೆ ಕಿರುಕುಳ ಅಂತಾ ಪೊಲೀಸರ ಮೊರೆ ಹೋದ ಪತ್ನಿ: ಕಟ್ಟು ಕಥೆ ಕಟ್ಟಿ ಅತ್ತೆ - ಮಾವನನ್ನೇ ಜೈಲಿಗೆ ಹಾಕಿಸಿದ ಅಳಿಯ!

ABOUT THE AUTHOR

...view details