ಕರ್ನಾಟಕ

karnataka

ಲಖಿಂಪುರ ಹಿಂಸಾಚಾರ: ಪೊಲೀಸರ ಮುಂದೆ ಹಾಜರಾದ ಕೇಂದ್ರ ಸಚಿವರ ಪುತ್ರ

By

Published : Oct 9, 2021, 11:36 AM IST

Updated : Oct 9, 2021, 11:56 AM IST

ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಉತ್ತರ ಪ್ರದೇಶ ಪೊಲೀಸರ ಮುಂದೆ ಹಾಜರಾಗಿದ್ದಾನೆ. ಇಂದು ಕೋರ್ಟ್​ಗೆ ಹಾಜರಾಗುವ ಸಾಧ್ಯತೆಯಿದೆ.

lakhimpur-violence-ashish-mishra-appear-in-front-of-up-police
ಲಖಿಂಪುರ ಹಿಂಸಾಚಾರ: ಪೊಲೀಸರ ಮುಂದೆ ಹಾಜರಾದ ಕೇಂದ್ರ ಸಚಿವರ ಪುತ್ರ

ಲಖನೌ(ಉತ್ತರ ಪ್ರದೇಶ): ಲಖಿಂಪುರ ಹಿಂಸಾಚಾರದ ಪ್ರಮುಖ ಆರೋಪಿ ಹಾಗೂ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಇಂದು ಉತ್ತರ ಪ್ರದೇಶ ಪೊಲೀಸರ ಮುಂದೆ ಹಾಜರಾಗಿದ್ದಾನೆ.

ಅಕ್ಟೋಬರ್ 8ರಂದು ಆಶಿಶ್ ಮಿಶ್ರಾ ಕೋರ್ಟ್​ಗೆ ಹಾಜರಾಗಲು ನೋಟಿಸ್​ ನೀಡಲಾಗಿತ್ತು. ಆದರೆ ಕೋರ್ಟ್​ಗೆ ಹಾಜರಾಗದ ಹಿನ್ನೆಲೆಯಲ್ಲಿ ಇಂದು ಪೊಲೀಸರ ಮುಂದೆ ಆಶಿಶ್ ಹಾಜರಾಗಿದ್ದಾನೆ. ಪೊಲೀಸರು ಆತನನ್ನು ಕೋರ್ಟ್​ಗೆ ಕರೆದೊಯ್ಯುವ ಸಾಧ್ಯತೆಯಿದೆ.

ಹಿಂಸಾಚಾರ ಪ್ರಕರಣದಲ್ಲಿ ಅಶಿಶ್ ಮಿಶ್ರಾನನ್ನು ಬಂಧಿಸುವಂತೆ ಒತ್ತಡ ಹೆಚ್ಚಾದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಕ್ಷ್ಯವಿಲ್ಲದೇ ಯಾವುದೇ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರಕರಣದಲ್ಲಿ ಯಾರಿಗೂ ಅನ್ಯಾಯವಾಗುವುದಿಲ್ಲ ಎಂದಿದ್ದರು.

ಇದನ್ನೂ ಓದಿ:206 ದಿನಗಳಲ್ಲೇ ಇದೇ ಮೊದಲ ಬಾರಿಗೆ ದೇಶಾದ್ಯಂತ ಕಡಿಮೆ ಕೊರೊನಾ ಪ್ರಕರಣಗಳು ಪತ್ತೆ

Last Updated : Oct 9, 2021, 11:56 AM IST

ABOUT THE AUTHOR

...view details