ಕರ್ನಾಟಕ

karnataka

ನಾಳೆಯಿಂದ ತಮಿಳುನಾಡಿಗೆ ಕೆಎಸ್​ಆರ್​ಟಿಸಿ ಬಸ್ ಸೇವೆ ಪುನಾರಂಭ

By

Published : Aug 22, 2021, 7:23 PM IST

ಹೊಸೂರು, ವೆಲ್ಲೂರು, ತಿರುವಣ್ಣಾಮಲೈ, ವಿಲ್ಲುಪುರಂ, ತಿರುಕೋಯಿಲೂರ್, ಕೊಯಮತ್ತೂರು, ತಿರುನಲ್ಲರ್,ತಿರುಚಿ, ಮಧುರೈ ಹಾಗೂ ಕುಂಭಕೋಣಂ, ಕಾಂಚೀಪುರಂ, ಚೆನ್ನೈ ಹಾಗೂ ಊಟಿ ಸೇರಿದಂತೆ ವಿವಿಧ ಸ್ಥಳಗಳಿಗೆ ಬಸ್​ಗಳು ಓಡಾಡಲಿವೆ. ನಾಳೆಯಿಂದ ಸುಮಾರು 250 ಬಸ್​ಗಳು ಕಾರ್ಯ ನಿರ್ವಹಿಸಲಿವೆ..

KSRTC bus service restarted to Tamilnadu
ನಾಳೆಯಿಂದ ತಮಿಳುನಾಡಿಗೆ ಕೆಎಸ್​ಆರ್​ಟಿಸಿ ಬಸ್ ಸೇವೆ ಪುನಾರಂಭ

ಬೆಂಗಳೂರು :ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಕೆಎಸ್ಆರ್​ಟಿಸಿ ಹಲವು ರಾಜ್ಯಗಳ ಬಸ್‌ ಸಂಚಾರವನ್ನ ಸ್ಥಗಿತಗೊಳಿಸಿತ್ತು. ಆದರೆ, ನಿಧಾನವಾಗಿ ಎಲ್ಲ ರಾಜ್ಯಗಳು ಅನ್​ಲಾಕ್ ಆದ ಕಾರಣ ಅಂತಾರಾಜ್ಯ ಬಸ್​ಗಳ ಸಂಚಾರ ಶುರುವಾಗಿದೆ.

ಕಳೆದ ಏಪ್ರಿಲ್ 27ರಂದು ಕೋವಿಡ್ ನಿರ್ಬಂಧದಿಂದಾಗಿ ತಮಿಳುನಾಡಿಗೆ ಬಸ್ ಸೇವೆಗಳನ್ನು ನಿಲ್ಲಿಸಲಾಗಿತ್ತು‌‌. ಇದೀಗ, ನಾಳೆಯಿಂದ ತಮಿಳುನಾಡಿಗೆ ಕೆಎಸ್‌ಆರ್‌ಟಿಸಿ ಬಸ್ ಸೇವೆಗಳು ಪುನಾರಂಭಗೊಳ್ಳಲಿವೆ.

ಹೊಸೂರು, ವೆಲ್ಲೂರು, ತಿರುವಣ್ಣಾಮಲೈ, ವಿಲ್ಲುಪುರಂ, ತಿರುಕೋಯಿಲೂರ್, ಕೊಯಮತ್ತೂರು, ತಿರುನಲ್ಲರ್,ತಿರುಚಿ, ಮಧುರೈ ಹಾಗೂ ಕುಂಭಕೋಣಂ, ಕಾಂಚೀಪುರಂ, ಚೆನ್ನೈ ಹಾಗೂ ಊಟಿ ಸೇರಿದಂತೆ ವಿವಿಧ ಸ್ಥಳಗಳಿಗೆ ಬಸ್​ಗಳು ಓಡಾಡಲಿವೆ. ನಾಳೆಯಿಂದ ಸುಮಾರು 250 ಬಸ್​ಗಳು ಕಾರ್ಯ ನಿರ್ವಹಿಸಲಿವೆ.

ಓದಿ:ಶ್ರೀಲಂಕಾದ ಕರಾವಳಿಯಲ್ಲಿ ವಾಯುಭಾರ ಕುಸಿತ : ರಾಜ್ಯದಲ್ಲಿ ಆ.26ರವರೆಗೆ ಭಾರಿ ಮಳೆ ಸಾಧ್ಯತೆ

ABOUT THE AUTHOR

...view details