ಕರ್ನಾಟಕ

karnataka

ಜಾರ್ಖಂಡ್‌ನಲ್ಲಿದೆ ಓಣಂ ಸೇತುವೆ: ಈ ಬ್ರಿಡ್ಜ್ ಸಾರುತ್ತಿದೆ ಕೇರಳದ ಸಾಂಸ್ಕೃತಿಕ ಮಹತ್ವ !

By ETV Bharat Karnataka Team

Published : Nov 2, 2023, 7:41 PM IST

Updated : Nov 3, 2023, 10:25 AM IST

ಜಾರ್ಖಂಡ್‌ನ ಲತೇಹರ್‌ನಲ್ಲಿ ನಿರ್ಮಿಸಲಾದ ಸೇತುವೆಗೆ ಕೇರಳ ನಂಟಿದೆ. ಈ ಸೇತುವೆಯನ್ನು ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿಯಾಗಿ ನಿರ್ಮಿಸಿವೆ. ಇದಕ್ಕೆ ಓಣಂ ಸೇತುವೆ ಎಂದು ಹೆಸರಿಡಲಾಗಿದೆ.

ಓಣಂ ಸೇತುವೆ
ಓಣಂ ಸೇತುವೆ

ಪಲಮು:ಜಾರ್ಖಂಡ್‌ನ ಸೇತುವೆಯೊಂದು ಕೇರಳದೊಂದಿಗೆ ಸಂಬಂಧ ಹೊಂದಿದೆ. ಈ ಸೇತುವೆಯು ಕೇರಳದ ಸಾಂಸ್ಕೃತಿಕ ಮಹತ್ವವನ್ನು ಸಾರುತ್ತದೆ. ಇದು ಜಾರ್ಖಂಡ್‌ನ ರಾಜಧಾನಿ ರಾಂಚಿಯಿಂದ ಸುಮಾರು 150 ಕಿಲೋಮೀಟರ್ ದೂರದಲ್ಲಿರುವ ಲತೇಹಾರ್‌ನ ಬರೇಸಾದ್ ಪ್ರದೇಶದಲ್ಲಿದೆ. ಈ ಸೇತುವೆಗೆ ಓಣಂ ಸೇತುವೆ ಎಂದು ಹೆಸರಿಡಲಾಗಿದೆ.

ಲತೇಹರ್​​​ನಲ್ಲಿರುವ ಓಣಂ ಸೇತುವೆ ಹಲವು ವಿಧಗಳಲ್ಲಿ ವಿಶೇಷವಾಗಿದೆ. ಇದರ ನಿರ್ಮಾಣವನ್ನು ಪೊಲೀಸರು ಮತ್ತು ಭದ್ರತಾ ಪಡೆಗಳು ಜಂಟಿಯಾಗಿ ಸಿದ್ಧಪಡಿಸಿವೆ. ಸೆಪ್ಟೆಂಬರ್ 2022 ರಲ್ಲಿ ಬುಧಾ ಪಹಾಡ್‌ನಲ್ಲಿ ಮಾವೋವಾದಿಗಳ ವಿರುದ್ಧ ಆಪರೇಷನ್ ಆಕ್ಟೋಪಸ್ ಪ್ರಾರಂಭಿಸಲಾಯಿತು. ಈ ಕಾರ್ಯಾಚರಣೆಯ ಸಮಯದಲ್ಲಿ ಸೈನಿಕರು ಬುಧಾ ನದಿಯನ್ನು ದಾಟಬೇಕಾಗಿತ್ತು. ಭದ್ರತಾ ಪಡೆಗಳು ಆರಂಭದಲ್ಲಿ ಕಚ್ಚಾ ಸೇತುವೆ ನಿರ್ಮಿಸುವ ಯೋಜನೆಯನ್ನು ಸಿದ್ಧಪಡಿಸಿದ್ದವು.

ಸೇತುವೆ ನಿರ್ಮಾಣ ಕಾಮಗಾರಿ ಆರಂಭವಾದ ದಿನದಿಂದಲೇ ಓಣಂ ಕೂಡ ಆರಂಭವಾಗಿತ್ತು. ಓಣಂನ ಸಂತಸ ಮತ್ತು ಉತ್ಸಾಹದಲ್ಲಿ ಪಾಲ್ಗೊಳ್ಳುವ ಜೊತೆಗೆ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. ಓಣಂನ ಕೊನೆಯ ದಿನದಂದು ಇದರ ನಿರ್ಮಾಣ ಕಾರ್ಯ ಪೂರ್ಣಗೊಂಡಿತು. ಹೀಗಾಗಿ ಈ ಸೇತುವೆಗೆ ಓಣಂ ಎಂದು ಹೆಸರಿಸಲಾಯಿತು.

ಗ್ರಾಮಸ್ಥರಿಗೆ ಓಣಂ ಸೇತುವೆ ಜೀವನಾಡಿ: ಇದೀಗ ಓಣಂ ಸೇತುವೆ 15 ಕಿಲೋಮೀಟರ್ ವ್ಯಾಪ್ತಿಯಲ್ಲಿನ ಗ್ರಾಮಸ್ಥರಿಗೆ ಜೀವನಾಡಿಯಾಗಿ ಮಾರ್ಪಟ್ಟಿದೆ. ಈ ಸೇತುವೆಯು ಲತೇಹಾರ್‌ನ ಬರಸಾದ್ ಮತ್ತು ಬುಧಾ ಪಹಾಡ್‌ನ ಟಿಸಿಯಾ ನಡುವೆ ಇದೆ. ಈ ಮೂಲಕ ಬುಧಾ ಪಹಾಡ್ ಹಾಗೂ ಛತ್ತೀಸ್‌ಗಢ, ಗುಮ್ಲಾ ಮತ್ತು ಲೋಹರ್ದಗಾ ಪ್ರದೇಶಗಳಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಳ ಮೇಲೆ ನಿಗಾ ಇಡಲಾಗಿದೆ. ಓಣಂ ಸೇತುವೆ ತಿಸಿಯಾ, ನವಟೋಳಿ ಮುಂತಾದ ಸುಮಾರು ಅರ್ಧ ಡಜನ್ ಹಳ್ಳಿಗಳ ಜೀವನಾಡಿಯಾಗಿದೆ.

ಈ ಸೇತುವೆಯನ್ನು 2022 ರ ಸೆಪ್ಟೆಂಬರ್ - ಅಕ್ಟೋಬರ್‌ನಲ್ಲಿ ಹ್ಯೂಮ್ ಪೈಪ್ ಮೂಲಕ ತಯಾರಿಸಲಾಯಿತು. ಈಗ ಈ ಸೇತುವೆಯನ್ನು ಕಾಂಕ್ರೀಟ್ ಮಾಡಲಾಗಿದೆ. ಓಣಂ ಹಬ್ಬದ ಸಂದರ್ಭದಲ್ಲಿ ಈ ಸೇತುವೆಯನ್ನು ಸಿದ್ಧಪಡಿಸಲಾಗಿರುವುದರಿಂದ ಈ ಸೇತುವೆಗೆ ಓಣಂ ಎಂದು ಹೆಸರಿಡಲಾಗಿದೆ ಎಂದು ಪಲಾಮು ವಲಯ ಐಜಿ ರಾಜಕುಮಾರ್ ಲಾಕ್ರಾ ತಿಳಿಸಿದ್ದಾರೆ. ಆರಂಭದಲ್ಲಿ ಈ ಸೇತುವೆಯ ಮೂಲಕ ಮುಂಚೂಣಿ ಶಿಬಿರಗಳವರೆಗೆ ಸೈನಿಕರಿಗೆ ಅಗತ್ಯ ಸಾಮಗ್ರಿಗಳು ಲಭ್ಯವಾಗುತ್ತಿತ್ತು. ಈಗ ಇಲ್ಲಿನ ಗ್ರಾಮಸ್ಥರು ಸಹ ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಓಣಂ ಹಬ್ಬದ ಮಹತ್ವ : ಓಣಂ ಕೇರಳದ ಪ್ರಮುಖ ಹಬ್ಬವಾಗಿದೆ. ಓಣಂ ಆಚರಣೆಗಳು ಸುಮಾರು 10 ದಿನಗಳವರೆಗೆ ಇರುತ್ತದೆ. ಓಣಂ ಸಮಯದಲ್ಲಿ ಪ್ರತಿ ಮನೆಯನ್ನು ಹೂವುಗಳು ಮತ್ತು ದಳಗಳಿಂದ ಅಲಂಕರಿಸಲಾಗುತ್ತದೆ. ಓಣಂ ಅನ್ನು ಪ್ರತಿ ವರ್ಷ ವಾಮನ ಜನ್ಮದಿನದಂದು ಆಚರಿಸಲಾಗುತ್ತದೆ ಮತ್ತು ರಾಜ ಬಲಿಯನ್ನು ಸ್ವಾಗತಿಸಲಾಗುತ್ತದೆ. ಈ ಹಬ್ಬದಲ್ಲಿ ಕೇರಳದಲ್ಲಿ ಹಲವು ರೀತಿಯ ಆಟಗಳನ್ನು ಆಯೋಜಿಸಲಾಗುತ್ತದೆ.

ಇದನ್ನೂ ಓದಿ :ಅಸ್ಸೋಂನ ಮಕುಮ್‌ನಲ್ಲಿದೆ ಶತಮಾನದ ಚೈನೀಸ್ ಶಾಲೆ; ಈಗ ಹಿಂದಿ ಮಾಧ್ಯಮದಲ್ಲಿ ನಡೆಯುತ್ತೆ ಬೋಧನೆ

Last Updated : Nov 3, 2023, 10:25 AM IST

ABOUT THE AUTHOR

...view details