ಕರ್ನಾಟಕ

karnataka

4 ತಿಂಗಳ ಮಗು ಕಿಡ್ನಾಪ್​ ಮಾಡಿದ ಇಬ್ಬರು ಆರೋಪಿಗಳು ಅಂದರ್..!

By

Published : Jul 27, 2023, 5:47 PM IST

ತಮಿಳುನಾಡಿನ ನಾಗರ್‌ಕೋಯಿಲ್‌ನಿಂದ ನಾಲ್ಕು ತಿಂಗಳ ಮಗುವನ್ನು ಅಪಹರಿಸಿದ ಇಬ್ಬರು ಆರೋಪಿಗಳನ್ನು ತಿರುವನಂತಪುರಂನಲ್ಲಿ ಬಂಧಿಸಲಾಗಿದೆ.

kidnapped four month old baby
ನಾಲ್ಕು ತಿಂಗಳ ಮಗು ಕಿಡ್ನಾಪ್​ ಮಾಡಿದ ಇಬ್ಬರು ಆರೋಪಿಗಳ ಬಂಧನ..!

ತಿರುವನಂತಪುರಂ (ಕೇರಳ):ತಮಿಳುನಾಡಿನ ನಾಗರ್‌ಕೋಯಿಲ್‌ನಿಂದ ನಾಲ್ಕು ತಿಂಗಳ ಮಗುವನ್ನು ಅಪಹರಿಸಿದ್ದ ಪುರುಷ ಮತ್ತು ಮಹಿಳೆಯನ್ನು ಕೇರಳ ರಾಜಧಾನಿ ತಿರುವನಂತಪುರದಲ್ಲಿ ಬಂಧಿಸಲಾಗಿದೆ. ಇಬ್ಬರು ಆರೋಪಿಗಳು ಮಗುವನ್ನು ಭಿಕ್ಷಾಟನೆಯಲ್ಲಿ ತೊಡಗಿಸಿಕೊಳ್ಳಲು ಯೋಜಿಸಿದ್ದರು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದರು. ಬಂಧಿತ ತಮಿಳು ಜೋಡಿಯನ್ನು ನಾರಾಯಣನ್ ಮತ್ತು ಶಾಂತಿ ಎಂದು ಗುರುತಿಸಲಾಗಿದೆ.

ಚಿರಾಯಂಕಿಝುದಲ್ಲಿ ಇಬ್ಬರು ಆರೋಪಿಗಳ ಬಂಧನ:ಕೇರಳ ಪೊಲೀಸರು ಇಬ್ಬರು ಆರೋಪಿಗಳನ್ನು ಕೇರಳ ಪೊಲೀಸರು ಚಿರಾಯಂಕಿಝುದಲ್ಲಿ ಬಂಧನ ಮಾಡಿದ್ದಾರೆ. ನಾಗರಕೋಯಿಲ್ ರೈಲು ನಿಲ್ದಾಣದಲ್ಲಿ ಮಗು ತನ್ನ ಪೋಷಕರ ಪಕ್ಕದಲ್ಲಿ ಮಲಗಿತ್ತು. ಮಗು ಕಾಣೆಯಾಗಿರುವ ಬಗ್ಗೆ ವಡಸ್ಸೆರಿ ಪೊಲೀಸರಿಗೆ ಪೋಷಕರು ದೂರು ನೀಡಿದ್ದರು. ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಯಿಂದ ಅಪಹರಣಕ್ಕೊಳಗಾದ ಮಗುವನ್ನು ಪುರುಷ ಮತ್ತು ಮಹಿಳೆ ಇಬ್ಬರು ಸೇರಿ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರ ಎದುರು ತಪ್ಪೊಪ್ಪಿಕೊಂಡ ಆರೋಪಿಗಳು:ಇವರಿಬ್ಬರು ಎರನಾಡು ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸಾಗುತ್ತಿರುವ ಕುರಿತು ಸಿಸಿಟಿವಿ ದೃಶ್ಯಾವಳಿ ಪೊಲೀಸರಿಗೆ ಸಿಕ್ಕಿದೆ. ಈ ದೃಶ್ಯಗಳ ಸಹಿತ ಮಾಹಿತಿಯನ್ನು ಕೇರಳ ಪೊಲೀಸರಿಗೆ ರವಾನಿಸಲಾಗಿದೆ. ಕೇರಳ ಪೊಲೀಸರು ಮಗುವಿನೊಂದಿಗೆ ಅನುಮಾನಾಸ್ಪದ ಸ್ಥಿತಿಯಲ್ಲಿ ಕಂಡು ಬಂದ ಪುರುಷ ಮತ್ತು ಮಹಿಳೆಯನ್ನು ಚಿರಯಿಂಕೀಝು ಬಳಿ ವಿಚಾರಣೆಗೆ ಒಳಪಡಿಸಿದರು. ಕಳೆದ ಸೋಮವಾರ ಈ ಇಬ್ಬರು ಆರೋಪಿಗಳು, ಮಗುವನ್ನು ಅಪಹರಿಸಿರುವುದಾಗಿ ಪೊಲೀಸರ ಎದುರು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ :ವಿಜಯಪುರ ಶಾಲಾ ಬಾಲಕಿ ಅಪಹರಣ ಪ್ರಕರಣ: ಐವರು ಆರೋಪಿಗಳ ಬಂಧನ

ಇತ್ತೀಚಿನ ಪ್ರಕರಣ, ಮಗು ರಕ್ಷಣೆ ಮಾಡಿದ ಪೊಲೀಸರು:ಮೊದಲ ಹೆಂಡತಿಗೆ ತಿಳಿಯದಂತೆ ಎರಡನೇ ಮದುವೆಯಾಗಿ ಮೊದಲ ಹೆಂಡತಿಯ ಮಗುವನ್ನು ತನ್ನ ಮನೆಯಲ್ಲಿ ಬಚ್ಚಿಟ್ಟು, ಕೀನ್ಯಾ ದೇಶಕ್ಕೆ ತೆರಳಿದ್ದ ಪ್ರಕರಣದ ಹಿನ್ನೆಲೆ, ಹಾಸನ ಪೊಲೀಸರು, ಆ ಮಗುವನ್ನ ರಕ್ಷಣೆ ಮಾಡಿರುವ ಘಟನೆ ಇತ್ತೀಚೆಗೆ ನಡೆದಿತ್ತು. ಆರೋಪಿ ರಿಜ್ವಾನ್ ಅಹಮದ್ ಎಂಬುವರು ಮಗುವನ್ನ ಬಚ್ಚಿಟ್ಟಿದ್ದು, ಮೊದಲ ಹೆಂಡತಿಗೆ ಗೊತ್ತಿಲ್ಲದಂತೆ 2ನೇ ಮದುವೆಯಾಗಿ ಹೊರದೇಶಕ್ಕೆ ಪರಾರಿಯಾಗಿದ್ದರು ಎನ್ನವುದು ಪೆನ್ಷನ್ ಮೊಹಲ್ಲಾ ಠಾಣೆಯ ಪೊಲೀಸರ ತನಿಖೆಯಿಂದ ತಿಳಿದಿತ್ತು. ಅಷ್ಟೇ ಅಲ್ಲ ಮಗು ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಮಗುವಿನ ತಾಯಿ, ಪತಿ ಮನೆ ಹಾಗೂ ತಮ್ಮ ಸಂಬಂಧಿಕರ ಮನೆಗಳನ್ನು ಹುಡುಕಾಟ ನಡೆಸಿದ್ದರು. ಆಗಲೂ ಮಗು ಸಿಗದ ಕಾರಣಕ್ಕೆ ಹಾಸನದ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ :ಬೆಳಗಾವಿಯಲ್ಲಿ ಬಾಲಕಿ ಅಪಹರಣ ಯತ್ನ: ಪ್ರಕರಣ ದಾಖಲಾದ 12 ಗಂಟೆಯೊಳಗೆ ಆರೋಪಿ ಪೊಲೀಸರ ಖೆಡ್ಡಾಕ್ಕೆ

ABOUT THE AUTHOR

...view details