ಕರ್ನಾಟಕ

karnataka

ಕೆಸಿಆರ್​ ಈ ಹಿಂದೆಯೂ ತೃತೀಯ ರಂಗ ಮಾಡಿದ್ದರು ಏನೂ ಆಗಲಿಲ್ಲ: ದೇವೇಂದ್ರ ಫಡ್ನವೀಸ್

By

Published : Feb 21, 2022, 7:19 PM IST

ಔರಂಗಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನವೀಸ್, ರಾಜ್ಯಗಳ ಮುಖ್ಯಮಂತ್ರಿಗಳು ಈ ರೀತಿ ಭೇಟಿಯಾಗುವುದು ಹೊಸದಲ್ಲ, ರಾವ್ ಅವರು 2014 ಮತ್ತು 2019 ರ ನಡುವೆ ಸಿಎಂ ಆಗಿದ್ದಾಗಲೂ ಭೇಟಿಯಾಗಿದ್ದರು ಎಂದರು.

ದೇವೇಂದ್ರ ಫಡ್ನವಿಸ್
ದೇವೇಂದ್ರ ಫಡ್ನವಿಸ್

ಔರಂಗಾಬಾದ್: ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪಕ್ಷಗಳನ್ನು ಒಗ್ಗೂಡಿಸಲು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ಒಂದು ದಿನದ ನಂತರ, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಪ್ರಯೋಗಗಳನ್ನು ಅವರು ಈ ಮೊದಲೂ ಮಾಡಿದ್ದಾರೆ. ಆದ್ರೆ ಅವು ವಿಫಲವಾಗಿವೆ ಎಂದಿದ್ದಾರೆ.

ಔರಂಗಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಫಡ್ನವೀಸ್, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಈ ರೀತಿ ಭೇಟಿಯಾಗುವುದು ಹೊಸದಲ್ಲ. ರಾವ್ ಅವರು 2014 ಮತ್ತು 2019 ರ ನಡುವೆ ಸಿಎಂ ಆಗಿದ್ದಾಗಲೂ ಭೇಟಿಯಾಗಿದ್ದರು ಎಂದರು.

ಇದನ್ನೂ ಓದಿ: ಆಶಿಶ್ ಮಿಶ್ರಾಗೆ ಜಾಮೀನು: ಸುಪ್ರೀಂಕೋರ್ಟ್​ ಮೊರೆ ಹೋದ ರೈತರ ಕುಟುಂಬಸ್ಥರು

ಇಂತಹ ಬಿಜೆಪಿಯೇತರ ಪಕ್ಷಗಳ ಒಗ್ಗಟ್ಟಿನ ಪ್ರಯೋಗಗಳನ್ನು ಈ ಹಿಂದೆ ಹಲವಾರು ರಾಜ್ಯಗಳಲ್ಲಿ ಮಾಡಲಾಗಿತ್ತು. ಆದರೆ, ಯಾವುದೇ ಪರಿಣಾಮ ಬೀರಲಿಲ್ಲ ಎಂದು ಫಡ್ನವೀಸ್ ಹೇಳಿದ್ರು.

ಪ್ರಸ್ತುತ ರಾವ್ ಅವರ ಟಿಆರ್‌ಎಸ್ ಆಡಳಿತದಲ್ಲಿರುವ ತೆಲಂಗಾಣದಲ್ಲಿ ಶೀಘ್ರದಲ್ಲೇ ಬಿಜೆಪಿ ಪಕ್ಷವು ಮುಂಚೂಣಿಗೆ ಬರಲಿದೆ. 2019 ರ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಬಿಜೆಪಿ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡಿದೆ. ಆ ರಾಜ್ಯದಲ್ಲಿ ನಮ್ಮ ಪಕ್ಷವು ನಂಬರ್ ಒನ್ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸಮಸ್ಯೆಗಳ ಕುರಿತು ಮಾತನಾಡಿದ ಫಡ್ನವೀಸ್, ಮರಾಠವಾಡವನ್ನು ಬರ ಮುಕ್ತಗೊಳಿಸಲು ಎಂವಿಎ ಸರ್ಕಾರವು ತಾವು ಸಿಎಂ ಆಗಿದ್ದ ಅವಧಿಯಲ್ಲಿ ರೂಪಿಸಲಾದ ಯೋಜನೆಗಳನ್ನು ಕೊಲೆ ಮಾಡಿದೆ ಎಂದು ಆರೋಪಿಸಿದರು.

TAGGED:

ABOUT THE AUTHOR

...view details