ಕರ್ನಾಟಕ

karnataka

ಗುಜರಾತ್​ ಫಲಿತಾಂಶ:  ಶ್ರೀಮಂತ ಅಭ್ಯರ್ಥಿ ಜಯಂತಿ ಪಟೇಲ್​ಗೆ ಗೆಲುವು

By

Published : Dec 8, 2022, 1:46 PM IST

ಶ್ರೀಮಂತ ಅಭ್ಯರ್ಥಿ ಎಂಬ ಖ್ಯಾತಿ ಹೊಂದಿದ್ದ, ಮಾನ್ಸಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಂತಿ ಪಟೇಲ್ ಚುನಾವಣೆಯಲ್ಲಿ ಗೆದ್ದಿದ್ದಾರೆ.

ಬಿಜೆಪಿ
ಬಿಜೆಪಿ

ಅಹಮದಾಬಾದ್:ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಬಿಜೆಪಿ ಐತಿಹಾಸಿಕ ವಿಜಯದತ್ತ ದಾಪುಗಾಲನ್ನಿಟ್ಟಿದೆ. ಮಾನ್ಸಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಂತಿ ಪಟೇಲ್ ಗೆಲುವು ಸಾಧಿಸಿದ್ದಾರೆ. ಇವರು 2022 ರ ಚುನಾವಣೆಯಲ್ಲಿ ಅತ್ಯಂತ ಶ್ರೀಮಂತ ಅಭ್ಯರ್ಥಿ ಎಂದು ಹೆಸರು ವಾಸಿಯಾಗಿದ್ದರು.

ನಾಮಪತ್ರದೊಂದಿಗೆ ಸಲ್ಲಿಸಿದ ಚುನಾವಣಾ ಅಫಿಡವಿಟ್‌ನಲ್ಲಿ 661.29 ಕೋಟಿ ರೂಪಾಯಿ ಆಸ್ತಿಯನ್ನು ಘೋಷಿಸಿದ್ದರು. 2012 ಮತ್ತು 2017 ರ ಚುನಾವಣಾ ಅಫಿಡವಿಟ್‌ಗಳ ವಿಶ್ಲೇಷಣೆಯು ಸಹ ಪಟೇಲ್ ರಾಜ್ಯದ ಅತ್ಯಂತ ಶ್ರೀಮಂತ ಅಭ್ಯರ್ಥಿ ಎಂದು ಹೇಳುತ್ತವೆ.

ನಾನು ಅತ್ಯಂತ ಶ್ರೀಮಂತ ಅಭ್ಯರ್ಥಿಯೇ ಎಂದು ನನಗೆ ತಿಳಿದಿಲ್ಲ. ಮೂರು ದಶಕಗಳಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿದ್ದೇನೆ. ನನ್ನ ಮಗ ಮತ್ತು ನಾನು ನಮ್ಮ ವ್ಯವಹಾರದಲ್ಲಿ ತುಂಬಾ ಶ್ರಮಿಸಿದ್ದೇವೆ ಎಂದು ಪಟೇಲ್​ ಹೇಳಿದ್ದರು. ಇವರಿಗೆ ಪಂಕಜ್ ಎಂಬ ಮಗ ಮತ್ತು ಪ್ರಿಯಾಂಕಾ ಎಂಬ ಮಗಳು ಇದ್ದಾರೆ.

ಇದನ್ನೂ ಓದಿ:158 ಸ್ಥಾನಗಳಲ್ಲಿ ಮುನ್ನಡೆ..149 ಸ್ಥಾನ ಗೆಲುವಿನ ಸಾರ್ವಕಾಲಿಕ ದಾಖಲೆ ಮುರಿಯುತ್ತಾ ಬಿಜೆಪಿ?

ಅಧಿಕೃತ ಸಂಪತ್ತು ಘೋಷಣೆ ಪ್ರಕಾರ, ಅವರ ವೈಯಕ್ತಿಕ ವಾರ್ಷಿಕ ಆದಾಯ 44. 22 ಲಕ್ಷ ರೂಪಾಯಿ ಮತ್ತು ಅವರ ಪತ್ನಿ ಆನಂದಿಯ ವಾರ್ಷಿಕ ಆದಾಯ 62.7 ಲಕ್ಷ ರೂ. ಎಂದು ತಿಳಿಸುತ್ತದೆ. ಅವರು 92. 4 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಹೊಂದಿದ್ದು, ಅವರ ಪತ್ನಿ 1. 2 ಕೋಟಿ ರೂಪಾಯಿ ಮೌಲ್ಯದ ಆಭರಣಗಳನ್ನು ಹೊಂದಿದ್ದಾರೆ. ಅವರ ಕುಟುಂಬದ ಚರ ಆಸ್ತಿ ಮೌಲ್ಯ 147. 04 ಕೋಟಿ, ಸ್ಥಿರ ಆಸ್ತಿ ಮೌಲ್ಯ 514 ಕೋಟಿ ಆಗಿದೆ.

ಸಿಧ್‌ಪುರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿರುವ ಬಲ್ವಂತಸಿಂಗ್ ರಜಪೂತ್ 447 ಕೋಟಿ ರೂಪಾಯಿ ಆಸ್ತಿಯೊಂದಿಗೆ ಎರಡನೇ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ದ್ವಾರಕಾದ ಬಿಜೆಪಿ ಅಭ್ಯರ್ಥಿ ಪಬುಭಾ ಮಾಣೆಕ್ 178. 58 ಕೋಟಿ ಆಸ್ತಿ ಹೊಂದುವ ಮೂಲಕ ಮೂರನೇ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದಾರೆ. 159. 84 ಕೋಟಿ ಮೌಲ್ಯದ ಒಟ್ಟು ಆಸ್ತಿಯನ್ನು ತೋರಿಸಿದ ರಾಜ್‌ಕೋಟ್ ಪೂರ್ವದ ಕಾಂಗ್ರೆಸ್ ಅಭ್ಯರ್ಥಿ ಇಂದ್ರನೀಲ್ ರಾಜಗುರು ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ.

ABOUT THE AUTHOR

...view details