ಕರ್ನಾಟಕ

karnataka

ಬೆಟ್ಟದಿಂದ ರಸ್ತೆಗೆ ಉರುಳಿಬಿದ್ದ ಬೃಹತ್‌ ಬಂಡೆಗಳು: ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್‌

By

Published : Mar 3, 2022, 2:31 PM IST

ಬೆಟ್ಟಗಳು ರಸ್ತೆಗೆ ಉರುಳಿ ಬಿದ್ದ ಪರಿಣಾಮ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಕೆಲ ಗಂಟೆಗಳ ಕಾಲ ಬಂದ್‌ ಮಾಡಲಾಗಿದೆ. ಇದರಿಂದ ಕಿರಿದಾದ ಹೆದ್ದಾರಿಯಲ್ಲಿ ವಾಹನಗಳ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿವೆ.

jammu kashmir national highway blocked due to landslide at banihal
ಬೆಟ್ಟದಿಂದ ರಸ್ತೆಗೆ ಉರುಳಿಬಿದ್ದ ಬೃಹತ್‌ ಬಂಡೆಗಳು; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್‌

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯ ಬನಿಹಾಲ್ ಪಟ್ಟಣದ ಬಳಿ ಭಾರಿ ಪ್ರಮಾಣದಲ್ಲಿ ಬೆಟ್ಟ ಕುಸಿತವಾದ ಪರಿಣಾಮ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್‌ ಮಾಡಲಾಗಿದೆ.

ಬಂಡೆಗಳು ಬೆಟ್ಟದಿಂದ ಕರ್ವ್​ ಹೆದ್ದಾರಿಯ ಪಕ್ಕದ ರಸ್ತೆಯ ಮೇಲೆ ಬಿದ್ದ ಬಳಿಕ ಆಳವಾದ ಕಾಲುವೆಗೆ ಉರುಳಿ ಬೀಳುತ್ತಿರುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಶಬಾನ್‌ಬಾಸ್ ಪ್ರದೇಶದಲ್ಲಿ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಸಂಚಾರ ಪೊಲೀಸರು ತಿಳಿಸಿದ್ದಾರೆ. ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ರಸ್ತೆ ಇದಾಗಿದೆ.

ಬೆಟ್ಟ ಉರುಳಿ ಬಿದ್ದ ಹಿನ್ನೆಲೆಯಲ್ಲಿ ಕಿರಿದಾದ ಹೆದ್ದಾರಿಯಲ್ಲಿ ವಾಹನಗಳ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿವೆ. ಮತ್ತೊಂಡೆ ಬಂಡೆ ಬಿದ್ದ ಸ್ವಲ್ಪ ದೂರದಲ್ಲೇ ಮನೆಯೊಂದು ಇರುವುದನ್ನು ದೃಶ್ಯಗಳಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ:ಆಮ್ಶಿಪೋರಾ ಎನ್‌ಕೌಂಟರ್‌ : ಇಬ್ಬರು ಉಗ್ರರನ್ನ ಸದೆಬಡಿದ ಭದ್ರತಾ ಪಡೆ.. ಓರ್ವ ನಾಗರಿಕ ಸಾವು

TAGGED:

ABOUT THE AUTHOR

...view details