ಕರ್ನಾಟಕ

karnataka

ನಿಮಗೆ ನಿದ್ರಿಸಲು ಕಷ್ಟವೇ?... ನಿದ್ರಾಹೀನತೆಗೆ ಆಯುರ್ವೇದದಲ್ಲಿದೆ ಪರಿಹಾರ

By

Published : Jun 24, 2021, 3:53 PM IST

ನಮ್ಮ ದೇಹದಲ್ಲಿ ನಡೆಯುವ ಚಯಾಪಚಯ ಕಾರ್ಯ ನಿರ್ವಹಿಸಲು ನಿದ್ರೆ ಮುಖ್ಯವಾಗಿದೆ. ಉತ್ತಮ ಸ್ಮರಣೆ ಮತ್ತು ಏಕಾಗ್ರತೆ ಹೊಂದಲು ಸಹ ಇದು ಅಗತ್ಯ. ನಿದ್ರೆಯ ಕೊರತೆಯಿಂದಾಗಿ ಅಧಿಕ ರಕ್ತದೊತ್ತಡ, ಬೊಜ್ಜು, ಜಠರಗರುಳಿನ ಸಮಸ್ಯೆಗಳು, ಸಮನ್ವಯದ ಕೊರತೆ, ಏಕಾಗ್ರತೆಯ ಕೊರತೆ ಮುಂತಾದ ಆರೋಗ್ಯ ಪರಿಸ್ಥಿತಿಗಳು ಉಂಟಾಗಬಹುದು.

Insomnia
ನಿದ್ರಾಹೀನತೆ

ನಿದ್ರಾಹೀನತೆಯು ಮೆಲಟೋನಿನ್ ಹಾರ್ಮೋನ್ ದುರ್ಬಲತೆಗೆ ಸಂಬಂಧಿಸಿವೆ. ಇದು ರಾತ್ರಿಯ ಸಮಯದಲ್ಲಿ ಪೀನಲ್ ಗ್ರಂಥಿಯಿಂದ ಸ್ರವಿಸುತ್ತದೆ. ಮೆಲಟೋನಿನ್ ಮಟ್ಟವು ನಿದ್ರೆಯ ಕಾಯಿಲೆಗಳಿಗೆ ಕಾರಣವಾಗುತ್ತದೆ. ಈ ಹಾರ್ಮೋನ್ ನಿದ್ರೆ - ಎಚ್ಚರ ಚಕ್ರವನ್ನು ನಿಯಂತ್ರಿಸುತ್ತದೆ. ನಮ್ಮ ದೇಹದಲ್ಲಿ ನಡೆಯುವ ಚಯಾಪಚಯ ಕಾರ್ಯವನ್ನು ನಿರ್ವಹಿಸಲು ನಿದ್ರೆ ಮುಖ್ಯವಾಗಿದೆ.

ಉತ್ತಮ ಸ್ಮರಣೆ ಮತ್ತು ಏಕಾಗ್ರತೆ ಹೊಂದಲು ಸಹ ಇದು ಅಗತ್ಯ. ನಿದ್ರೆಯ ಕೊರತೆಯಿಂದಾಗಿ ಅಧಿಕ ರಕ್ತದೊತ್ತಡ, ಬೊಜ್ಜು, ಜಠರ ಗರುಳಿನ ಸಮಸ್ಯೆಗಳು, ಸಮನ್ವಯದ ಕೊರತೆ, ಏಕಾಗ್ರತೆಯ ಕೊರತೆ ಮುಂತಾದ ಆರೋಗ್ಯ ಪರಿಸ್ಥಿತಿಗಳು ಉಂಟಾಗಬಹುದು.

ನಿದ್ರಾಹೀನತೆಯ ವರ್ಗೀಕರಣ

ನಿದ್ರಾಹೀನತೆ ಎರಡು ವರ್ಗಗಳಾಗಿ ವಿಂಗಡಿಸಬಹುದು ಎಂದು ಡಾ. ಯಾಸ್ಮಿನ್ ವಿವರಿಸುತ್ತಾರೆ.

  1. ಪ್ರಾಥಮಿಕ ನಿದ್ರಾಹೀನತೆ: ಈ ರೀತಿಯ ನಿದ್ರಾಹೀನತೆಯು ಯಾವುದೇ ಆರೋಗ್ಯ ಸ್ಥಿತಿ ಅಥವಾ ಕಾಯಿಲೆಗಳಿಗೆ ಸಂಬಂಧಿಸಿಲ್ಲ. ಆದರೆ, ಒತ್ತಡದಂತಹ ಕೆಲವು ಜೀವನ ಸನ್ನಿವೇಶಗಳ ಪರಿಣಾಮವಾಗಿದೆ. ಏಕೆಂದರೆ ಪ್ರೀತಿಪಾತ್ರರ ನಷ್ಟ ಅಥವಾ ನಿರ್ಣಾಯಕ ಸ್ಥಿತಿ, ಸಂಬಂಧದ ಅಂತ್ಯ, ಉದ್ಯೋಗ ನಷ್ಟ ಇತ್ಯಾದಿ ಜೀವನ ಘಟನೆಗಳು. ಇದು ಪರಿಸರ ಅಂಶಗಳಾದ ಶಬ್ದ, ಬೆಳಕು ಮತ್ತು ಹವಾಮಾನದ ಕಾರಣದಿಂದಾಗಿರಬಹುದು. ಕೆಲಸ ಬದಲಾವಣೆಯು ಸಹ ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.
  2. ದ್ವಿತೀಯ ನಿದ್ರಾಹೀನತೆ:ಆರೋಗ್ಯ ಸ್ಥಿತಿ ಅಥವಾ ಅಸ್ತಮಾ, ಸಂಧಿವಾತ, ಕ್ಯಾನ್ಸರ್, ಅಧಿಕ ರಕ್ತದೊತ್ತಡ, ಋತುಬಂಧ, ಎದೆಯುರಿ ಮುಂತಾದ ಅನಾರೋಗ್ಯದ ಕಾರಣದಿಂದ ನಿದ್ರಾಹೀನತೆ ಉಂಟಾಗಬಹುದು. ನೋವು, ಅಲರ್ಜಿಗಳು, ಆಲ್ಕೋಹಾಲ್, ತಂಬಾಕು, ಕೆಫೀನ್ ಬಳಕೆ ಮತ್ತು ಕೆಲವು ಔಷಧಗಳು ಸಹ ಪರಿಣಾಮ ಬೀರಬಹುದು. ಆತಂಕ ಮತ್ತು ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳು ಮತ್ತು ಸ್ಲೀಪ್ ಅಪ್ನಿಯಾ ಅಥವಾ ರೆಸ್ಟ್ಲೆಸ್ ಲೆಗ್ ಸಿಂಡ್ರೋಮ್​ನಂತಹ ನಿದ್ರೆಯ ಕಾಯಿಲೆಗಳು ಸಹ ಕಾರಣವಾಗುವ ಅಂಶಗಳಾಗಿವೆ.

ಇದಲ್ಲದೆ, ನಿದ್ರಾಹೀನತೆ ಅಥವಾ ಆನಿಡ್ರಾ ಮೂರು ವಿಧಗಳಾಗಿರಬಹುದು. ಅವು ಎಷ್ಟು ಕಾಲ ಉಳಿಯುತ್ತವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಇವು:

  • ಅಸ್ಥಿರ ನಿದ್ರಾಹೀನತೆ- ಇದು ಒಂದು ರಾತ್ರಿ ಅಥವಾ ಒಂದು ವಾರದವರೆಗೆ ಇರುತ್ತದೆ. ಸಾಮಾನ್ಯವಾಗಿ ಹೊಸ ಅಥವಾ ಬದಲಾದ ವಾತಾವರಣದಲ್ಲಿ ಮಲಗಿದಾಗ ಈ ರೀತಿಯ ನಿದ್ರಾಹೀನತೆ ಉಂಟಾಗುತ್ತದೆ.
  • ಅಲ್ಪಾವಧಿಯ ನಿದ್ರಾಹೀನತೆ- ಇದು 2-3 ವಾರಗಳವರೆಗೆ ಇರುತ್ತದೆ. ಸಾಮಾನ್ಯವಾಗಿ ಒತ್ತಡ ಅಥವಾ ಚಿಂತೆ ಮುಂತಾದ ಭಾವನಾತ್ಮಕ ಅಂಶಗಳಿಂದ ಉಂಟಾಗುತ್ತದೆ.
  • ದೀರ್ಘಕಾಲದ ನಿದ್ರಾಹೀನತೆ- ದೀರ್ಘಕಾಲದ ನಿದ್ರಾಹೀನತೆಯು ಅನೇಕ ದಿನಗಳವರೆಗೆ ಇರುತ್ತದೆ. ಈ ಸ್ಥಿತಿಯು ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಉಳಿಯಬಹುದು.

ನಿದ್ರಾಹೀನತೆಯ ಲಕ್ಷಣಗಳು:

  • ಆಕಳಿಕೆ
  • ಅರೆನಿದ್ರಾವಸ್ಥೆ
  • ಚಡಪಡಿಕೆ / ಅಸ್ವಸ್ಥತೆ
  • ಆಯಾಸ ಮತ್ತು ಜಡತೆ
  • ತಲೆನೋವು
  • ಮನಸ್ಸು ಕೇಂದ್ರೀಕರಿಸಲು ಅಸಮರ್ಥತೆ
  • ಮರೆವು
  • ಕಳಪೆ ಸಂವೇದನಾ ಗ್ರಹಿಕೆ
  • ಅಜೀರ್ಣ
  • ಮಲಬದ್ಧತೆ
  • ತೂಕ ಇಳಿಕೆ

ನಿದ್ರಾಹೀನತೆಗೆ ಆಯುರ್ವೇದದ ಸಹಾಯ:ಆಯುರ್ವೇದದಲ್ಲಿ ನಿದ್ರಾಹೀನತೆ ಗುಣಪಡಿಸಲು ಹಲವು ಮಾರ್ಗಗಳಿವೆ. ಕೆಲವು ಕಾರ್ಯವಿಧಾನಗಳು ಮತ್ತು ಗಿಡಮೂಲಿಕೆಗಳಿವೆ. ಇದಕ್ಕೆ ಅದರದ್ದೇ ಆದ ಕಾರ್ಯವಿಧಾನಗಳು ಇವೆ ಮತ್ತು ತಜ್ಞರ ಮೇಲ್ವಿಚಾರಣೆಯಲ್ಲಿ ಮಾತ್ರ ನಿರ್ವಹಿಸಬೇಕು. ಇನ್ನು ಡಾ. ಯಾಸ್ಮಿನ್ ಹೇಳಿದಂತೆ ಅವುಗಳಲ್ಲಿ ಕೆಲವು ಇಲ್ಲಿವೆ:

  • ಅಭಂಗ (ಎಣ್ಣೆಯಿಂದ ಬಾಡಿ ಮಸಾಜ್)
  • ಚಕ್ಷು ತರ್ಪನಾ (ಔಷಧೀಯ ಎಣ್ಣೆಯಿಂದ ಕಣ್ಣುಗಳನ್ನು ತೇವಗೊಳಿಸುವುದು)
  • ಶಿರೋ ಲೇಪಮ್ (ತಲೆಗೆ ಗಿಡಮೂಲಿಕೆ ಪೇಸ್ಟ್ ಚಿಕಿತ್ಸೆ)
  • ಮುಖ ಲೇಪಂ (ಮುಖಕ್ಕೆ ಗಿಡಮೂಲಿಕೆ ಪೇಸ್ಟ್ ಚಿಕಿತ್ಸೆ)
  • ಶಿರೋಧರ (ಔಷಧೀಯ ಎಣ್ಣೆಯನ್ನು ಹಣೆಯ ಮೇಲೆ ಸುರಿಯುವುದು)
  • ಶಿರೋಬಸ್ತಿ (ಔಷಧೀಯ ಎಣ್ಣೆಯನ್ನು ತಲೆಯ ಸುತ್ತಲೂ ಸುರಿಯುವುದು-ಸ್ವಲ್ಪ ಸಮಯದವರೆಗೆ ನಿಲ್ಲುವಂತೆ ಮಾಡುವುದು)
  • ಪಾದ ಅಭಂಗ (ಎಣ್ಣೆಯಿಂದ ಕಾಲು ಮಸಾಜ್)

ಶುದ್ಧೀಕರಣ ಅಥವಾ ನಿರ್ವಿಶೀಕರಣ:ರಾತ್ರಿ ವೇಳೆ ಅರ್ಧ ಗ್ಲಾಸ್ ಹಾಲಿನಲ್ಲಿ ಎರಾಂಡ ತೈಲಾ (ಕ್ಯಾಸ್ಟರ್ ಆಯಿಲ್) 10-20 ಮಿಲಿ ಬಳಸಿ ಸೇವಿಸಬೇಕು.

ಗಿಡಮೂಲಿಕೆಗಳು: ನಿದ್ರಾಹೀನತೆಯ ಸಮಸ್ಯೆಯನ್ನು 7-14 ದಿನಗಳಲ್ಲಿ ಪರಿಹರಿಸಲು ಸಹಾಯ ಮಾಡುವ ಅನೇಕ ಗಿಡಮೂಲಿಕೆಗಳಿವೆ. ಕೆಲವು ಗಿಡಮೂಲಿಕೆಗಳು ಅಶ್ವಗಂಧ, ಜಟಮಾನ್ಸಿ, ಬ್ರಾಹ್ಮಿ, ಮಂಡೂಕಪರ್ಣಿ, ಮಮ್ಸ್ಯಾಡಿ ಕ್ವಾಥಾ, ಸರ್ಪಗಂಧತಿ ವತಿ, ಇತ್ಯಾದಿ.

ಮಾನಸಿಕ್ ಉಪಚಾರ್: ಮನಸ್ಸನ್ನು ಶಾಂತಗೊಳಿಸುವ ಪರಿಹಾರಗಳನ್ನು ಮಾನಸಿಕ್ ಉಪಚಾರ್ ಸೂಚಿಸುತ್ತದೆ. ಆಹ್ಲಾದಕರ ವಾಸನೆ, ಧ್ವನಿ ಅಥವಾ ಸ್ಪರ್ಶ, ಸಕಾರಾತ್ಮಕ ಮತ್ತು ಆಹ್ಲಾದಕರ ಆಲೋಚನೆಗಳನ್ನು ಹುಟ್ಟುಹಾಕುವುದು, ತೃಪ್ತಿಯ ಭಾವನೆ ಇತ್ಯಾದಿ. ಇದಲ್ಲದೇ, ಯೋಗ ಮತ್ತು ಧ್ಯಾನವು ಒತ್ತಡವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಒತ್ತಡ ನಿದ್ರಾಹೀನತೆಗೆ ಪ್ರಮುಖ ಕಾರಣವಾಗಿದೆ. ಹೊರಾಂಗಣದಲ್ಲಿ ಸ್ವಲ್ಪ ಸಮಯ ಕಳೆಯಿರಿ. ಅಲ್ಲದೇ, ಬ್ರಹ್ಮಚಾರ್ಯ ಅಥವಾ ಶಕ್ತಿ ನಿರ್ವಹಣೆಯನ್ನು ಅನುಸರಿಸುವುದು ಧನಾತ್ಮಕ ಪರಿಣಾಮ ಬೀರುತ್ತದೆ.

ABOUT THE AUTHOR

...view details