ಕರ್ನಾಟಕ

karnataka

ಭಾರತದಿಂದ ಕೊರೊನಾ ಲಸಿಕೆ ರಫ್ತು ಪುನಾರಂಭ: ನ.30 ರಿಂದ ಕೋವಾಕ್ಸ್ ಆಮದಿಗೆ ಕೆನಡಾ ಅನುಮೋದನೆ

By

Published : Nov 27, 2021, 2:09 PM IST

ಏಪ್ರಿಲ್‌ನಲ್ಲಿ ಕೆಲವು ಆಫ್ರಿಕನ್ ಮತ್ತು ಇತರ ಕಡಿಮೆ ಆದಾಯದ ದೇಶಗಳಿಗೆ ಸಣ್ಣ ಪ್ರಮಾಣದ ಲಸಿಕೆಗಳನ್ನು ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಕೊನೆಯದಾಗಿ 2.568 ಲಕ್ಷ ಲಸಿಕೆಗಳನ್ನು ಏಪ್ರಿಲ್ 16 ರಂದು ಸಿರಿಯಾಕ್ಕೆ ಕಳುಹಿಸಲಾಗಿದೆ ಎಂದು ETV ಭಾರತ್ ಉಪ ಸುದ್ದಿ ಸಂಪಾದಕ ಕೃಷ್ಣಾನಂದ್ ತ್ರಿಪಾಠಿ ತಿಳಿಸಿದ್ದಾರೆ.

India resumes vaccine export, Canada approves Covax for entry from Nov 30
ಭಾರತದಿಂದ ಕೊರೊನಾ ಲಸಿಕೆ ರಫ್ತು ಪುನಾರಂಭ

ನವದೆಹಲಿ:ಕೊರೊನಾ ಪ್ರಕರಣಗಳ ತೀವ್ರ ಕುಸಿತದ ನಂತರ 7 ತಿಂಗಳು ಕೋವಿಡ್ ಲಸಿಕೆಗಳ ರಫ್ತನ್ನು ಸ್ಥಗಿತಗೊಂಡಿದ್ದ ಭಾರತವು ಈಗ ಲಸಿಕೆಗಳ ರಫ್ತನ್ನು ಪುನರಾರಂಭಿಸಿದೆ. ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ , ಪರಿಮಾಣದ ಪ್ರಕಾರ ವಿಶ್ವದ ಅತಿದೊಡ್ಡ ಲಸಿಕೆ ತಯಾರಕ, ಲಸಿಕೆ ರಫ್ತು ಪ್ರಾರಂಭವಾಗಿದೆ ಎಂದು ಶುಕ್ರವಾರ ಪ್ರಕಟಿಸಿದೆ.

ಸೀರಮ್ ಇನ್‌ಸ್ಟಿಟ್ಯೂಟ್​​ನಿಂದ ಬಹು ನಿರೀಕ್ಷಿತ COVAX ಪೂರೈಕೆಗಳು ಇಂದು ಪುನರಾರಂಭಗೊಳ್ಳಲಿವೆ ಎಂದು ಘೋಷಿಸಲು ನನಗೆ ಸಂತೋಷವಾಗಿದೆ" ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದರ್ ಪೂನಾವಾಲಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಪ್ರಪಂಚದಲ್ಲಿ ಮತ್ತು ವಿಶೇಷವಾಗಿ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಲಸಿಕೆ ಪೂರೈಕೆ ಸಮಾನತೆಯನ್ನು ಮರುಸ್ಥಾಪಿಸುವಲ್ಲಿ ಇದು ಬಹಳ ಪ್ರಯೋಜನಕಾರಿ ಎಂದು ಪೂನಾವಾಲಾ ಹೇಳಿದ್ದಾರೆ.

ಈ ವರ್ಷದ ಮಾರ್ಚ್‌ನಲ್ಲಿ, ಹೊಸ ದೈನಂದಿನ ಪ್ರಕರಣಗಳ ಸಂಖ್ಯೆ ದಿನಕ್ಕೆ 2,00,000ಕ್ಕೆ ಇಳಿದ ಕಾರಣ ಕೇಂದ್ರ ಸರ್ಕಾರವು ಲಸಿಕೆ ರಫ್ತನ್ನು ಸ್ಥಗಿತಗೊಳಿಸಿತ್ತು. ಏಪ್ರಿಲ್‌ನಲ್ಲಿ ಕೆಲವು ಆಫ್ರಿಕನ್ ಮತ್ತು ಇತರ ಕಡಿಮೆ - ಆದಾಯದ ದೇಶಗಳಿಗೆ ಸಣ್ಣ ಪ್ರಮಾಣದ ಲಸಿಕೆಗಳನ್ನು ರಫ್ತು ಮಾಡಲು ಸರ್ಕಾರವು ಅನುಮತಿಸಿದ್ದರೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿಯ ಪ್ರಕಾರ, ಕೊನೆಯದಾಗಿ 2.568 ಲಕ್ಷ ಲಸಿಕೆಗಳನ್ನು ಏಪ್ರಿಲ್ 16 ರಂದು ಸಿರಿಯಾಕ್ಕೆ ಕಳುಹಿಸಲಾಗಿದೆ.

ಕೋವಾಕ್ಸಿನ್​ಗೆ ಕೆನಡಾ ಒಪ್ಪಿಗೆ:

ಕೋವಿಡ್ ಲಸಿಕೆ ರಫ್ತು ಪುನರಾರಂಭದ ಬಳಿಕ ಭಾರತ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಾಕ್ಸಿನ್ ಅನ್ನು ತನ್ನ ದೇಶಕ್ಕೆ ಅಗತ್ಯವಿರುವವರಿಗೆ ಆಮದುಮಾಡಿಕೊಳ್ಳಲು ಅನುಮೋದಿತ ಲಸಿಕೆಗಳ ಪಟ್ಟಿಯಲ್ಲಿ ಸೇರಿಸಲು ಕೆನಡಾ ನಿರ್ಧರಿಸಿದೆ.

ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಪುಣೆ ಸಹಭಾಗಿತ್ವದಲ್ಲಿ ಕೋವಾಕ್ಸಿನ್ ಅನ್ನು ಅಭಿವೃದ್ಧಿಪಡಿಸಿದ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್, ಕೆನಡಾಕ್ಕೆ ಪ್ರಯಾಣಿಸುವವರಿಗೆ ಅನುಮೋದಿತ ಲಸಿಕೆಗಳ ಪಟ್ಟಿಯಲ್ಲಿ ತನ್ನ ಕೋವಾಕ್ಸಿನ್ ಅನ್ನು ಸೇರಿಸಲಾಗಿದೆ ಎಂದು ಘೋಷಿಸಿದೆ.

ನವೆಂಬರ್ 30 ರಿಂದ ಎರಡು ಡೋಸ್ ಕೋವಾಕ್ಸಿನ್ ತೆಗೆದುಕೊಂಡ ಪ್ರಯಾಣಿಕರಿಗೆ ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಮತ್ತು ಸಿನೋಫಾರ್ಮ್ ಮತ್ತು ಸಿನೋವಾಕ್ ತಯಾರಿಸಿದ ಎರಡು ಚೈನೀಸ್ ಲಸಿಕೆಗಳನ್ನು ಸ್ವೀಕರಿಸಲಾಗುವುದು ಎಂದು ಕೆನಡಾ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ.

ಈ ತಿಂಗಳ ಆರಂಭದಲ್ಲಿ, ವಿಶ್ವ ಆರೋಗ್ಯ ಸಂಸ್ಥೆಯು ತುರ್ತು ಬಳಕೆಗಾಗಿ ಅನುಮೋದಿತ ಕೋವಿಡ್ ಲಸಿಕೆಗಳ ಪಟ್ಟಿಯಲ್ಲಿ ಕೋವ್ಯಾಕ್ಸಿನ್​(Covaxin) ಅನ್ನು ಅನುಮೋದಿಸಿತು.

ABOUT THE AUTHOR

...view details