ಕರ್ನಾಟಕ

karnataka

ಇಂದು ಸಹ 20 ಸಾವಿರದ ಗಡಿ ದಾಟಿದ ಕೋವಿಡ್​ ಪ್ರಕರಣ.. 200 ಕೋಟಿಯತ್ತ​​​ ಲಸಿಕಾಕರಣ!

By

Published : Jul 16, 2022, 10:38 AM IST

ಕಳೆದ ದಿನವೂ ಹೊಸ ಕೊರೊನಾ ಪ್ರಕರಣಗಳು 20 ಸಾವಿರದ ಗಡಿ ದಾಟಿತ್ತು. ಆದರೆ ಇಂದು ಸಹ 20 ಸಾವಿರ ಗಡಿದಾಟಿದ್ದು, ಸಾವಿನ ಸಂಖ್ಯೆ 50 ಹೆಚ್ಚು ನಮೂದಾಗಿದೆ.

India covid reports today, India covid  recoveries report, India covid death report, India Covid vaccine report, ಭಾರತದ ಇಂದಿನ ಕೋವಿಡ್​​ ವರದಿ, ಭಾರತ ಕೊರೊನಾ ಗುಣಮುಖರಾದವರ ವರದಿ, ಭಾರತ ಕೋವಿಡ್​ನಿಂದ ಸಾವನ್ನಪ್ಪಿದ ವರದಿ, ಭಾರತ ಲಸಿಕೆ ವರದಿ,
ಇಂದು ಸಹ 20 ಸಾವಿರದ ಗಡಿ ದಾಟಿದ ಕೋವಿಡ್​ ಪ್ರಕರಣಗಳು

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 20,044 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. 56 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 5,25,660ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಸದ್ಯ ದೇಶದಲ್ಲಿ 1,40,760 ಸಕ್ರಿಯ ಪ್ರಕರಣಗಳಿವೆ. ಕಳೆದ 24 ಗಂಟೆಯಲ್ಲಿ 18,301 ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,30,63,651ಕ್ಕೆ ಏರಿದೆ. ಸಾವಿನ ಪ್ರಮಾಣ ಶೇ.1.20 ರಷ್ಟಿದೆ. ರಾಷ್ಟ್ರೀಯ ಕೋವಿಡ್ ಚೇತರಿಕೆ ದರ ಶೇ. 98.48 ರಷ್ಟಿದೆ.

ಓದಿ:ಕೋವಿಡ್ ಲಸಿಕಾ ಅಮೃತ ಮಹೋತ್ಸವ ಅಭಿಯಾನ ಇಂದಿನಿಂದ ಆರಂಭ : ಸಚಿವ ಡಾ. ಕೆ ಸುಧಾಕರ್

ದೈನಂದಿನ ಪಾಸಿಟಿವಿಟಿ ದರ ಶೇ. 4.44 ಮತ್ತು ಸಾಪ್ತಾಹಿಕ ಪಾಸಿಟಿವಿಟಿ ದರ ಶೇ.4.30ರಷ್ಟಿದೆ. ರಾಷ್ಟ್ರವ್ಯಾಪಿ ಕೋವಿಡ್-19 ವ್ಯಾಕ್ಸಿನೇಷನ್ ಡ್ರೈವ್ ಅಡಿಯಲ್ಲಿ ಈವರೆಗೆ 199.71 ಕೋಟಿ ಲಸಿಕೆ ನೀಡಲಾಗಿದೆ.

ABOUT THE AUTHOR

...view details