ಕರ್ನಾಟಕ

karnataka

ದೇಶದಲ್ಲಿ ಏಳು ತಿಂಗಳಲ್ಲೇ ಅತ್ಯಂತ ಕಡಿಮೆ ಸೋಂಕಿತರು ಪತ್ತೆ

By

Published : Oct 10, 2021, 10:21 AM IST

ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 18,166 ಸೋಂಕಿತರು ಪತ್ತೆಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

India reports 18,166 new COVID cases in the last 24 hours
ದೇಶದಲ್ಲಿ ಏಳು ತಿಂಗಳಲ್ಲೇ ಅತ್ಯಂತ ಕಡಿಮೆ ಸೋಂಕಿತರು ಪತ್ತೆ

ನವದೆಹಲಿ:ದೇಶದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಕಳೆದೊಂದು ದಿನದಲ್ಲಿ 18,166 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ. ಕಳೆದ ಏಳು ತಿಂಗಳಲ್ಲೇ ಇದು ಅತ್ಯಂತ ಕಡಿಮೆ ಸಂಖ್ಯೆಯ ಕೋವಿಡ್ ವರದಿಯಾಗಿದೆ.

ದೇಶದಲ್ಲಿ ಕೊರೊನಾ, ಕೊರೊನಾ ಸಂಬಂಧಿ ವಿಚಾರಗಳ ಅಪ್ಡೇಟ್​​ ಹೀಗಿದೆ:

  • ಕಳೆದ 24 ಗಂಟೆಯಲ್ಲಿ 214 ಮಂದಿ ಸಾವನ್ನಪ್ಪಿದ್ದಾರೆ. 23,624 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
  • ಈವರೆಗೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 4,50,589ಕ್ಕೆ ಏರಿಕೆಯಾಗಿದೆ.
  • ಕೊರೊನಾದಿಂದ ಒಟ್ಟು ಗುಣಮುಖರಾದವರು ಸಂಖ್ಯೆ ಶೇಕಡಾ 97.99ರಷ್ಟು ಅಥವಾ 3,32,71,915 ತಲುಪಿದೆ.
  • ಒಟ್ಟು ಸಕ್ರಿಯ ಪ್ರಕರಣಗಳು ದೇಶದಲ್ಲಿ ಶೇಕಡಾ 0.68ರಷ್ಟಿದೆ.
  • ಸದ್ಯ ದಿನಕ್ಕೆ ಶೇಕಡಾ 1.42ರಷ್ಟು ಮಂದಿ ಕೊರೊನಾ ಸೋಂಕಿಗೆ ಗುರಿಯಾಗುತ್ತಿದ್ದಾರೆ.
  • ಈವರೆಗೆ ದೇಶದಲ್ಲಿ 94,70,10,175 (94 ಕೋಟಿ) ಮಂದಿಗೆ ಕೋವಿಡ್​ ವ್ಯಾಕ್ಸಿನೇಷನ್ ಮಾಡಲಾಗಿದೆ.
  • ಶನಿವಾರದ ಅಂತ್ಯದವರೆಗೆ ದೇಶದಲ್ಲಿ 58,25,95,693 (58 ಕೋಟಿ) ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ
  • ಶನಿವಾರ ಒಂದೇ ದಿನ 12,83,212 ಮಂದಿಗೆ ಸೋಂಕು ಪರೀಕ್ಷೆ ಮಾಡಲಾಗಿದೆ.

ABOUT THE AUTHOR

...view details