ಕರ್ನಾಟಕ

karnataka

ದೇಶದಲ್ಲಿ ಹೊಸದಾಗಿ ಎಂಟೂವರೆ ಸಾವಿರ ಸೋಂಕಿತರು ಪತ್ತೆ, 415 ಸಾವು

By

Published : Dec 4, 2021, 12:19 PM IST

ದೇಶದಲ್ಲಿ ಶುಕ್ರವಾರ ಒಂದೇ ದಿನ 12,52,596 ಸ್ಯಾಂಪಲ್​​ಗಳನ್ನು ಪರೀಕ್ಷಿಸಲಾಗಿದೆ. ಈವರೆಗೆ 64 ಕೋಟಿ ಸ್ಯಾಂಪಲ್​ಗಳ ಪರೀಕ್ಷೆ ನಡೆಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ..

India records 8,603 new COVID-19 cases, 415 deaths
ದೇಶದಲ್ಲಿ ಹೊಸದಾಗಿ ಎಂಟೂವರೆ ಸಾವಿರ ಸೋಂಕಿತರು ಪತ್ತೆ, 415 ಸಾವು

ನವದೆಹಲಿ :ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 8,603 ಕೋವಿಡ್ ಕೇಸ್​ ಪತ್ತೆಯಾಗಿವೆ. ನಿನ್ನೆ ಒಂದೇ ದಿನ 415 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ದೇಶದ ಸಕ್ರಿಯ ಸೋಂಕಿತರ ಸಂಖ್ಯೆ ಪ್ರಸ್ತುತ 99,974 ಆಗಿದೆ. ಸಕ್ರಿಯ ಪ್ರಕರಣಗಳು ಒಟ್ಟು ಪ್ರಕರಣಗಳಲ್ಲಿ ಶೇ.1ಕ್ಕಿಂತ ಕಡಿಮೆಯಿದೆ. ಮಾರ್ಚ್ 2020ರಿಂದ ಇದು ಅತ್ಯಂತ ಕಡಿಮೆಯಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕೃತ ಹೇಳಿಕೆ ನೀಡಿದೆ.

ಒಂದೇ ದಿನದಲ್ಲಿ 8,190 ಮಂದಿ ಕೋವಿಡ್​ನಿಂದ ಚೇತರಿಕೆ ಕಂಡಿದ್ದಾರೆ. ಈವರೆಗೆ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 3,40,53,856ಕ್ಕೆ ಏರಿಕೆಯಾಗಿದೆ. ಅಂದರೆ ಶೇ.98.35 ಮಂದಿ ಈವರೆಗೆ ಚೇತರಿಕೆ ಕಂಡಿದ್ದಾರೆ. ಒಂದು ದಿನದಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವ ಶೇ.0.69ರಷ್ಟು ಮಂದಿಯಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದೆ.

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಪ್ರಕಾರ, ಡಿಸೆಂಬರ್ 3ರಂದು 12,52,596 ಸ್ಯಾಂಪಲ್​​ಗಳನ್ನು ಪರೀಕ್ಷಿಸಲಾಗಿದೆ. ಈವರೆಗೆ 64,60,26,786 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಅದರೊಂದಿಗೆ ಇದುವರೆಗೆ 126.53 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.

ಇದನ್ನೂ ಓದಿ:12.5 ಕೋಟಿ ಜನರು 2ನೇ ಡೋಸ್​ ಕೋವಿಡ್ ಲಸಿಕೆ ಪಡೆದಿಲ್ಲ: ಕೇಂದ್ರ ಸರ್ಕಾರದ ಮಾಹಿತಿ

ABOUT THE AUTHOR

...view details