ಕರ್ನಾಟಕ

karnataka

ಭಾರತದಲ್ಲಿ ಮುಂದಿನ ತಿಂಗಳು ಕೋವಿಡ್​ ಉತ್ತುಂಗಕ್ಕೆ.. ದಿನಕ್ಕೆ 5ಲಕ್ಷ ಕೇಸ್​ ಸಾಧ್ಯತೆ: ಶಾಕಿಂಗ್​ ಕೊಟ್ಟ ಆರೋಗ್ಯ ತಜ್ಞ!

By

Published : Jan 8, 2022, 8:10 AM IST

ದೇಶದಲ್ಲಿ ಮುಂದಿನ ತಿಂಗಳ ವೇಳೆಗೆ ನಿತ್ಯ ಐದು ಲಕ್ಷ ಪ್ರಕರಣಗಳು ವರದಿಯಾಗುವ ನಿರೀಕ್ಷೆ ಇದೆ ಎಂದು ಅಮೆರಿಕ ಮೂಲದ ಆರೋಗ್ಯ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.

peak of the third wave in India  third wave of corona in India  five lakh cases during the peak of the third wave in India  Dr Christopher Murray  Institute for Health Metrics & Evaluation director  third wave of corona in India  ಭಾರತವು ಕೋವಿಡ್​ ಪ್ರಕರಣಗಳಲ್ಲಿ ಉತ್ತುಂಗಕ್ಕೇರಲಿದೆ ಎಂದ ಅಮೆರಿಕ  ಶಾಕಿಂಗ್​ ಹೇಳಿಕೆ ನೀಡಿದ ಅಮೆರಿಕಾದ ಆರೋಗ್ಯ ತಜ್ಞ  ಭಾರತದಲ್ಲಿ ಮೂರನೆ ಅಲೆ ಆರಂಭ
ಶಾಕಿಂಗ್​ ಹೇಳಿಕೆ ನೀಡಿದ ಆರೋಗ್ಯ ತಜ್ಞ

ನವದೆಹಲಿ:ಭಾರತದಲ್ಲಿ ಕೊರೊನಾ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಲೇ ಇವೆ. ಕೊರೊನಾ ಸೋಂಕಿತರ ಹೊಸ ಪ್ರಕರಣಗಳು ನಿತ್ಯ ಹೊರಬರುತ್ತಿವೆ. ಕೊರೊನಾ ಹೊಸ ರೂಪಾಂತರವಾದ ಓಮಿಕ್ರಾನ್‌ಗೆ ಸಂಬಂಧಿಸಿದಂತೆ ಸರ್ಕಾರವು ನಿರಂತರವಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಈ ಮಧ್ಯೆ ಆರೋಗ್ಯ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ ಸಂಸ್ಥೆಯ ನಿರ್ದೇಶಕರು ಶಾಕಿಂಗ್​ ಸುದ್ದಿ ಸಹ ಕೊಟ್ಟಿದ್ದಾರೆ.

ಅಮೆರಿಕ ಆರೋಗ್ಯ ಮೆಟ್ರಿಕ್ಸ್ ಮತ್ತು ಮೌಲ್ಯಮಾಪನ ಸಂಸ್ಥೆಯ ನಿರ್ದೇಶಕ ಡಾ. ಕ್ರಿಸ್ಟೋಫರ್ ಮುರ್ರೆ ಹೇಳಿಕೆ ಪ್ರಕಾರ, ಭಾರತದಲ್ಲಿ, ಮುಂದಿನ ತಿಂಗಳಲ್ಲಿ ಗರಿಷ್ಠ 5 ಲಕ್ಷ ಪ್ರಕರಣಗಳು ಬರಬಹುದು ಎಂದು ಹೇಳಿದ್ದಾರೆ. ಒಮಿಕ್ರಾನ್ ಕಡಿಮೆ ಗಂಭೀರತೆ ಹೊಂದಿದೆ ಹಾಗೂ ಕಡಿಮೆ ಸಂಖ್ಯೆಯಲ್ಲಿ ಜನ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದು ಇವರು ಮುನ್ಸೂಚನೆ ನೀಡಿದ್ದಾರೆ.

ಓದಿ:National Water Awards 2020: ಕರ್ನಾಟಕಕ್ಕೆ ಒಲಿದ ಎರಡು ಪ್ರಶಸ್ತಿಗಳು!

ಒಮಿಕ್ರಾನ್​ ಹರಡುವುದನ್ನು ತಡೆಗಟ್ಟುವ ಹಿನ್ನೆಲೆ ಹಲವಾರು ರಾಜ್ಯಗಳು ದಿಟ್ಟ ಹೆಜ್ಜೆಗಳು ಇಟ್ಟಿವೆ . ಕರ್ನಾಟಕ, ದೆಹಲಿ, ಮಹಾರಾಷ್ಟ್ರ ಸೇರಿದಂತೆ ಅನೇಕ ರಾಜ್ಯಗಳು ನೈಟ್​ ಕರ್ಫ್ಯೂ ಸೇರಿದಂತೆ ಅನೇಕ ಕಟ್ಟು ನಿಯಮಗಳು ಜಾರಿಗೆ ತಂದಿವೆ.

ABOUT THE AUTHOR

...view details