ಕರ್ನಾಟಕ

karnataka

72 ಗಂಟೆಗಳಲ್ಲಿ ಬಿಜೆಪಿಯ 14 ಶಾಸಕರು, ಸಚಿವರ ರಾಜೀನಾಮೆ: ಕೇಸರಿ ಪಕ್ಷಕ್ಕೆ ಮುಳುವಾಗುತ್ತಾ ಒಬಿಸಿ ವೋಟ್‌ಬ್ಯಾಂಕ್?

By

Published : Jan 13, 2022, 7:45 PM IST

UP Assembly Election 2022
UP Assembly Election 2022 ()

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮತ್ತೊಂದು ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿರುವ ಬಿಜೆಪಿಗೆ ಈ ಸಲ ಒಬಿಸಿ ಹಾಗೂ ಬ್ರಾಹ್ಮಣ ಸಮುದಾಯದ ವೋಟ್​​ ಮುಳುವಾಗುವ ಎಲ್ಲ ಲಕ್ಷಣ ಗೋಚರಿಸುತ್ತಿದೆ.

ಲಖನೌ(ಉತ್ತರ ಪ್ರದೇಶ):ದೇಶದಅತಿ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ಘೋಷಣೆಯಾದಾಗಿನಿಂದಲೂ ರಾಜಕೀಯ ಚಟುವಟಿಕೆ ಬಿರುಸುಗೊಂಡಿದ್ದು, ಪಕ್ಷಾಂತರ ಪರ್ವ ಜೋರಾಗಿದೆ. ಪ್ರಮುಖವಾಗಿ ಆಡಳಿತ ಪಕ್ಷ ಬಿಜೆಪಿಗೆ ಪ್ರತಿದಿನ ಶಾಕ್ ಮೇಲೆ ಶಾಕ್ ಒದಗಿ ಬರುತ್ತಿದ್ದು, ಪ್ರಮುಖ ಮುಖಂಡರು ಸೇರಿದಂತೆ ಅನೇಕ ಶಾಸಕರು, ಸಚಿವರು ಬೇರೆ ಬೇರೆ ಪಕ್ಷಗಳಿಗೆ ಜಂಪ್​ ಆಗ್ತಿದ್ದಾರೆ.

ಯೋಗಿ ಆದಿತ್ಯನಾಥ್​​ ಕ್ಯಾಬಿನೆಟ್​ನಲ್ಲಿ ಪ್ರಮುಖ ಸಚಿವರಾಗಿದ್ದ ಸ್ವಾಮಿ ಪ್ರಸಾದ್ ಮೌರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಬಿಜೆಪಿಯಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಕಳೆದ 72 ಗಂಟೆಗಳಲ್ಲಿ ಅನೇಕ ಸಚಿವರು ಸೇರಿದಂತೆ 14 ಶಾಸಕರು ಪಕ್ಷ ತೊರೆದಿದ್ದಾರೆ. ಇವರೆಲ್ಲರೂ ಪ್ರಮುಖವಾಗಿ ಒಬಿಸಿ ಹಾಗೂ ಬ್ರಾಹ್ಮಣ ಸಮುದಾಯದವರು ಅನ್ನೋದು ಇಲ್ಲಿ ಗಮನಾರ್ಹ.

ಬಿಜೆಪಿ ತೊರೆದವರ ವಿವರ:

  • ಸ್ವಾಮಿ ಪ್ರಸಾದ್ ಮೌರ್ಯ
  • ಬ್ರಿಜೇಶ್​ ಕುಮಾರ್​ ಪ್ರಜಾಪತಿ
  • ಭಗವತಿ ಸಾಗರ್​​ ಪ್ರಸಾದ್
  • ವಿನಯ್​​ ಶೌಖ್ಯ
  • ರೋಶನ್ ಲಾಲ್​ ವರ್ಮಾ
  • ಧಾರಾ ಸಿಂಗ್​ ಚೌಹಾಣ್​
  • ಮುಕೇಶ್​ ವರ್ಮಾ
  • ಧರಂ ಸಿಂಗ್​ ಸೈನಿ
  • ಓಂ ಪ್ರಕಾಶ್​ ರಾಜಬರ್​

2017ರ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿ ಸರ್ಕಾರ ರಚಿಸಿದ್ದ ಬಿಜೆಪಿಗೆ ಇದೀಗ ಪಕ್ಷಾಂತರ ಪರ್ವ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ. ಇದರ ಬಗ್ಗೆ ಬಿಜೆಪಿ ಹೈಕಮಾಂಡ್​​ ಆಗಲಿ ಅಥವಾ ಯೋಗಿ ಆದಿತ್ಯನಾಥ್ ಆಗಲಿ​ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ:ಯಾವುದೇ ಕಾರಣಕ್ಕೂ ಗಾಬರಿಯಾಗ್ಬೇಡಿ, ಕೋವಿಡ್ ವಿರುದ್ಧ ಲಸಿಕೆ ಅತ್ಯುತ್ತಮ ಅಸ್ತ್ರ: ಮೋದಿ

150ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಸ್ವಾಮಿ ಪ್ರಸಾದ್ ಮೌರ್ಯ ಪ್ರಭಾವ:

ಈ ಹಿಂದೆ ಬಿಜೆಪಿ ಸೇರಿದ್ದ ಸ್ವಾಮಿ ಪ್ರಾಸಾದ್ ಮೌರ್ಯ ಅತಿ ಹೆಚ್ಚಿನ ಕ್ಷೇತ್ರಗಳ ಮೇಲೆ ಹಿಡಿತ ಹೊಂದಿದ್ದು, ಇದೀಗ ಪಕ್ಷ ತೊರೆದಿರುವುದು ಬಿಜೆಪಿಗೆ ದೊಡ್ಡ ಹೊಡೆತ ನೀಡುವ ಸಾಧ್ಯತೆ ಕಾಣುತ್ತಿದೆ. ಇವರ ಹಿಂದೆ ದೊಡ್ಡ ರಾಜಕೀಯ ಮುಖಂಡರ ದಂಡೇ ಇದ್ದು, ಅವರೆಲ್ಲರೂ ಇದೀಗ ಒಬ್ಬೊಬ್ಬರಾಗಿ ಸಮಾಜವಾದಿ ಪಕ್ಷ ಸೇರುತ್ತಿರುವ ಕಾರಣ, ಈ ಸಲದ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಸವಾಲು ಎದುರಿಸಬೇಕಿದೆ.

ABOUT THE AUTHOR

...view details