ಕರ್ನಾಟಕ

karnataka

'ಅತ್ಯುತ್ತಮ ಸಂಶೋಧನಾ ಸಂಸ್ಥೆ' ಪಟ್ಟ ಪಡೆದ IISc ಬೆಂಗಳೂರು..

By

Published : Sep 9, 2021, 3:29 PM IST

IISc ಬೆಂಗಳೂರು

ಕೇಂದ್ರ ಶಿಕ್ಷಣ ಸಚಿವಾಲಯ ಇಂದು 2021ನೇ ಸಾಲಿನ ಎನ್‌ಐಆರ್‌ಎಫ್ ಶ್ರೇಯಾಂಕ ಪ್ರಕಟಿಸಿದ್ದು, ಬೆಂಗಳೂರಿನಲ್ಲಿರುವ ಭಾರತದ ಏಕೈಕ ಭಾರತೀಯ ವಿಜ್ಞಾನ ಸಂಸ್ಥೆ (IISc)ಯು ಅತ್ಯುತ್ತಮ ಸಂಶೋಧನಾ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ.

ನವದೆಹಲಿ/ಬೆಂಗಳೂರು: ಭಾರತದ ಪ್ರಮುಖ ಸ್ನಾತಕೋತ್ತರ, ಸಂಶೋಧನೆ ಹಾಗೂ ಉಚ್ಚ ಶಿಕ್ಷಣ ಸಂಸ್ಥೆಯಾಗಿ ಹೆಸರುವಾಸಿಯಾಗಿರುವ ಭಾರತೀಯ ವಿಜ್ಞಾನ ಸಂಸ್ಥೆ (IISc)ಯು ಅತ್ಯುತ್ತಮ ಸಂಶೋಧನಾ ಸಂಸ್ಥೆ ಎಂಬ ಬಿರುದಿಗೆ ಪಾತ್ರವಾಗಿದೆ.

ಕೇಂದ್ರ ಶಿಕ್ಷಣ ಸಚಿವಾಲಯ ಇಂದು 2021ನೇ ಸಾಲಿನ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (NIRF) ಪ್ರಕಟಿಸಿದ್ದು, ಎಂಟು ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (IIT) ಹಾಗೂ ಎರಡು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು(NIT) ದೇಶದ ಅಗ್ರ ಹತ್ತು ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಸ್ಥಾನ ಪಡೆದಿವೆ.

ಎನ್‌ಐಆರ್‌ಎಫ್ ಶ್ರೇಯಾಂಕ

ಈ ರ‍್ಯಾಂಕಿಂಗ್​ನಲ್ಲಿ ಬೆಂಗಳೂರಿನಲ್ಲಿರುವ ಭಾರತದ ಏಕೈಕ ಭಾರತೀಯ ವಿಜ್ಞಾನ ಸಂಸ್ಥೆಯು ಅತ್ಯುತ್ತಮ ಸಂಶೋಧನಾ ಸಂಸ್ಥೆ ಎಂಬ ಸ್ಥಾನ ಪಡೆದಿದ್ದು, ಮದ್ರಾಸ್​ನ ಭಾರತೀಯ ತಂತ್ರಜ್ಞಾನ ಸಂಸ್ಥೆಯು ದೇಶದ ಅತ್ಯುತ್ತಮ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಹಮದಾಬಾದ್​ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಅತ್ಯುತ್ತಮ ಬಿ-ಸ್ಕೂಲ್ ಎಂಬ ಬಿರುದು ಪಡೆದಿದ್ದು, ನವದೆಹಲಿಯ ಜಾಮಿಯಾ ಹಮ್ದರ್ದ್ ವಿಶ್ವವಿದ್ಯಾಲಯವನ್ನು ಫಾರ್ಮಸಿ ಅಧ್ಯಯನಕ್ಕಾಗಿ ಉನ್ನತ ಸಂಸ್ಥೆಯಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ಘೋಷಿಸಿದ್ದಾರೆ.

ಎನ್‌ಐಆರ್‌ಎಫ್ ಶ್ರೇಯಾಂಕ

ಕಾಲೇಜುಗಳ ವಿಭಾಗಕ್ಕೆ ಬಂದರೆ, ದೆಹಲಿಯ ಮಿರಾಂಡಾ ಹೌಸ್ ಮೊದಲ ರ‍್ಯಾಂಕ್​, ದೆಹಲಿಯ ಲೇಡಿ ಶ್ರೀ ರಾಮ್ ಮಹಿಳಾ ಕಾಲೇಜು ಎರಡನೇ ಹಾಗೂ ಚೆನ್ನೈನ ಲೊಯೊಲಾ ಕಾಲೇಜು ಮೂರನೇ ಸ್ಥಾನ ಪಡೆದಿದೆ.

ಎನ್‌ಐಆರ್‌ಎಫ್ ಶ್ರೇಯಾಂಕ

ಎನ್‌ಐಆರ್‌ಎಫ್ ಶ್ರೇಯಾಂಕದ ಪ್ರಕಾರ, ದೆಹಲಿಯ ಏಮ್ಸ್​ - ವೈದ್ಯಕೀಯ ಕಾಲೇಜುಗಳಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ನಂತರದ ಸ್ಥಾನದಲ್ಲಿ ಚಂಡೀಗಢದ ಪಿಜಿಐಎಂಇಆರ್ ಹಾಗೂ ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು ಇದೆ.

ಎನ್‌ಐಆರ್‌ಎಫ್ ಶ್ರೇಯಾಂಕ

ABOUT THE AUTHOR

...view details