ಕರ್ನಾಟಕ

karnataka

ಅಗ್ನಿಪಥ್ ಯೋಜನೆಯಡಿ ವಾಯುಪಡೆಗೆ ದಾಖಲೆಯ 7.5 ಲಕ್ಷ ಅರ್ಜಿ ಸಲ್ಲಿಕೆ!

By

Published : Jul 6, 2022, 11:49 AM IST

"ಅಗ್ನಿಪತ್" ನೇಮಕಾತಿ ಯೋಜನೆಯಡಿ ಏಳುವರೆ ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಭಾರತೀಯ ವಾಯುಪಡೆ (ಐಎಎಫ್) ತಿಳಿಸಿದೆ.

ಅಗ್ನಿವೀರ್
ಅಗ್ನಿವೀರ್

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಗ್ನಿಪಥ್ ನೇಮಕಾತಿ ಯೋಜನೆಯಡಿ ಇಲ್ಲಿಯವರೆಗೆ 7,49,899 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ಭಾರತೀಯ ವಾಯುಪಡೆ (ಐಎಎಫ್) ತಿಳಿಸಿದೆ. ನೋಂದಣಿ ಪ್ರಕ್ರಿಯೆಯು ಜೂನ್ 24 ರಂದು ಪ್ರಾರಂಭವಾಗಿದ್ದು, ಮಂಗಳವಾರ ಕೊನೆಗೊಂಡಿದೆ.

ಜೂನ್ 14ರಂದು ಯೋಜನೆ ಘೋಷಣೆಯಾದ ನಂತರ ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿದ್ದವು. ಸುಮಾರು ಒಂದು ವಾರ ಪ್ರತಿಭಟನೆಗಳು ನಡೆದು, ಪ್ರತಿಪಕ್ಷಗಳು ಸತತವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು. ಈ ಯೋಜನೆಯಲ್ಲಿ ಪಿಂಚಣಿ ಹಾಗೂ ಸೇವಾ ಭದ್ರತೆ ಇಲ್ಲ ಎಂಬ ಕಾರಣದಿಂದ ಭಾರಿ ಪ್ರತಿಭಟನೆ ವ್ಯಕ್ತವಾಗಿತ್ತು. ಬಿಹಾರದಲ್ಲಿ ಭಾರಿ ಹಿಂಸಾಚಾರವೂ ನಡೆದಿತ್ತು. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಸೇನೆ ಸೇರುವ ವಯೋಮಿತಿಯನ್ನು 21 ರಿಂದ 23ಕ್ಕೇರಿಸಿ ಆದೇಶ ಹೊರಡಿಸಿತ್ತು.

ನಾಲ್ಕು ವರ್ಷಗಳ ಮಿತಿಯೊಂದಿಗೆ ಈ ಸೇವೆಯಲ್ಲಿ ಆಯ್ಕೆಯಾದವರಿಗೆ ತಾಂತ್ರಿಕ ಕೌಶಲ್ಯದ ಜೊತೆಗೆ ಶಿಸ್ತಿನ ತರಬೇತಿ ನೀಡಲಾಗುತ್ತದೆ. ರಕ್ಷಣಾ ಪಡೆಗಳಲ್ಲಿ ಸೇವೆ ಪೂರ್ಣಗೊಳಿಸಿದ ನಂತರ ಉತ್ತಮ ಹಣಕಾಸು ಪ್ಯಾಕೇಜ್ ಮತ್ತು ಅಂತಿಮ ಹಂತದಲ್ಲಿ ಆಯ್ಕೆಯಾದ ಶೇ.25ರಷ್ಟು ಪ್ರತಿಭಾವಂತರಿಗೆ ಶಾಶ್ವತ ಆಯೋಗದಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ನೀಡಲಾಗುತ್ತದೆ ಎಂದು ಕೇಂದ್ರ ಸ್ಪಷ್ಟಪಡಿಸಿತ್ತು.

ಅಗ್ನಿಪಥ್ ಯೋಜನೆಯಡಿ ಸಶಸ್ತ್ರ ಪಡೆಗೆ ಸೇರ್ಪಡೆಗೊಂಡ ಅಗ್ನಿವೀರರಿಗೆ ರಾಜ್ಯ ಪೊಲೀಸ್ ಪಡೆಗಳಲ್ಲಿ ನೇಮಕಾತಿಗೆ ಆದ್ಯತೆ ನೀಡಲಾಗುವುದು ಎಂದು ಬಿಜೆಪಿ ಆಡಳಿತದ ಹಲವು ರಾಜ್ಯಗಳು ಘೋಷಿಸಿವೆ.

ಇದನ್ನೂ ಓದಿ:ಅಗ್ನಿಪಥ್ ದಗೆಯ ನಡುವೆ ಜೂನ್ 24 ರಿಂದ ಸೇನಾಪಡೆ ನೇಮಕಾತಿ ಶುರು..

ABOUT THE AUTHOR

...view details