ಕರ್ನಾಟಕ

karnataka

ಗಲಾಟೆ ತಾಳಲಾರದೆ ತವರು ಸೇರಿದ್ದ ಗರ್ಭಿಣಿ ಪತ್ನಿಗೆ ಚಾಕು ಇರಿದ ಪಾಪಿ ಪತಿ

By

Published : Jun 15, 2021, 7:43 PM IST

ಚಾಕುವಿನಿಂದ ಇರಿದ ಪಾಪಿ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಕುಟುಂಬಸ್ಥರು ಆಕೆಯನ್ನ ಇಲ್ಲಿನ ಮಹಿಳಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಆದರೆ, ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ..

husband-stabs-pregnant-wife-in-surguja
ಚಾಕು ಇರಿದ ಪಾಪಿ ಪತಿ

ಸರ್ಗುಜಾ (ಛತ್ತೀಸ್​​ಗಢ) :ಗರ್ಭಿಣಿ ಪತ್ನಿಗೆ ಪತಿ ಚಾಕುವಿನಿಂದ ಇರಿದಿರುವ ಅಮಾನವೀಯ ಘಟನೆ ಛತ್ತೀಸ್​​​ಗಢದ ಸರ್ಗುಜಾ ಜಿಲ್ಲೆಯ ಸೀತಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪತಿ-ಪತ್ನಿಯ ನಡುವೆ ಗಲಾಟೆ ನಡೆದು ಈ ವೇಳೆ ಜಗಳ ತಾರಕಕ್ಕೇರಿದೆ. ಪತ್ನಿ ಗರ್ಭಿಣಿ ಎಂಬುದನ್ನೂ ಲೆಕ್ಕಿಸದೆ ಚಾಕು ಇರಿದಿದ್ದಾನೆ. ಹೊಟ್ಟೆಯ ಭಾಗಕ್ಕೆ ಚಾಕು ಹಾಕಿದ್ದರಿಂದ ರಕ್ತಸ್ರಾವವಾಗಿತ್ತು. ತಕ್ಷಣವೇ ಆಕೆಯನ್ನ ಹತ್ತಿರದ ಆಸ್ಪತ್ರೆಗೆ ದಾಖಲಾಗಿಸಲಾಗಿದ್ದು, ಐಸಿಯುನಲ್ಲಿ ಆಕೆ ಚಿಕಿತ್ಸೆ ಪಡೆಯುತ್ತಿದ್ದಾಳೆ.

ತವರು ಸೇರಿದ್ದ ಪತ್ನಿಯ ಮೇಲೆ ಪತಿ ಸಿಟ್ಟು

ಸೀತಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬನ್ನೀಪುರ್ ಗ್ರಾಮದ ನಿವಾಸಿ ರಮಿಲಾ ಕೊರ್ವಾ ಪತಿಯ ಗಲಾಟೆ ತಾಳಲಾರದೆ ತವರು ಮನೆ ಸೇರಿದ್ದಳು. ಇದರಿಂದ ಕೋಪಗೊಂಡಿದ್ದ ಪತಿ ತವರು ಮನೆಗೆ ಬಂದು ಆಕೆಯನ್ನು ಮನೆಯಿಂದ ಹೊರಗೆಳೆದಿದ್ದಾನೆ. ಈ ವೇಳೆ ದಂಪತಿಯ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಜಗಳ ತಾರಕಕ್ಕೇರಿದಾಗ ಚಾಕುವಿನಿಂದ ಇರಿದಿದ್ದಾನೆ.

ಚಾಕುವಿನಿಂದ ಇರಿದ ಪಾಪಿ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಕುಟುಂಬಸ್ಥರು ಆಕೆಯನ್ನ ಇಲ್ಲಿನ ಮಹಿಳಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಆದರೆ, ಮಹಿಳೆಯ ಸ್ಥಿತಿ ಗಂಭೀರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ.

ಓದಿ:ಅರಸೀಕೆರೆ: ಅಕ್ರಮ ಸಂಬಂಧ ಹಿನ್ನೆಲೆ ಹೆಂಡತಿ-ಅತ್ತೆಯ ಬರ್ಬರ ಹತ್ಯೆ

ABOUT THE AUTHOR

...view details