ಕರ್ನಾಟಕ

karnataka

ಗಣೇಶೋತ್ಸವ 2023; ಗೃಹಸಚಿವ ಅಮಿತ್ ಶಾ ಶನಿವಾರ ಮುಂಬೈಗೆ ಭೇಟಿ

By ETV Bharat Karnataka Team

Published : Sep 22, 2023, 2:33 PM IST

ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಮುಂಬೈಗೆ ಭೇಟಿ ನೀಡಲಿದ್ದಾರೆ.

Home Minister Amit Shah Likely To Visit Mumbai
Home Minister Amit Shah Likely To Visit Mumbai

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಮುಂಬೈನ ಲಾಲ್​ಬಾಗ್​ಚಾ ರಾಜಾ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿರುವ ಪೆಂಡಾಲ್​ಗೆ ಭೇಟಿ ನೀಡುವ ನಿರೀಕ್ಷೆಯಿದೆ. ಗಣೇಶ ಆರತಿಗಾಗಿ ಬಾಂದ್ರಾದಲ್ಲಿರುವ ನಗರ ಬಿಜೆಪಿ ಮುಖ್ಯಸ್ಥ ಆಶಿಶ್ ಶೆಲಾರ್ ಅವರ ಮನೆಗೆ ಕೂಡ ಅಮಿತ್ ಶಾ ಭೇಟಿ ನೀಡಲಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಮನೆಗಳಿಗೆ ಭೇಟಿ ನೀಡಿ ಗಣೇಶನ ದರ್ಶನ ಪಡೆಯಲಿದ್ದಾರೆ. ಕೇಂದ್ರ ಗೃಹಸಚಿವರ ಆಗಮನದ ಹಿನ್ನೆಲೆಯಲ್ಲಿ ನಗರದಾದ್ಯಂತ ವಿಶೇಷ ಪೊಲೀಸ್ ಬಂದೋಬಸ್ತ್ ಗೆ ಆದೇಶಿಸಲಾಗಿದೆ.

ವರದಿಗಳ ಪ್ರಕಾರ, ಶನಿವಾರ ಮಧ್ಯಾಹ್ನ 3: 30 ಕ್ಕೆ ಅಮಿತ್ ಶಾ ಅವರು ಲಾಲ್​ಬಾಗ್​ಚಾ ರಾಜಾ ಗಣೇಶನ ದರ್ಶನ ಪಡೆಯುವ ಮೂಲಕ ತಮ್ಮ ಮುಂಬೈ ಭೇಟಿಯನ್ನು ಪ್ರಾರಂಭಿಸಲಿದ್ದಾರೆ. ಅಮಿತ್ ಶಾ ಸುಮಾರು 25 ನಿಮಿಷಗಳ ಕಾಲ ಇಲ್ಲಿ ಇರಲಿದ್ದಾರೆ. ಅಮಿತ್ ಶಾ ಮತ್ತು ಅವರ ಕುಟುಂಬವು ಲಾಲ್​ಬಾಗ್​ಚಾ ರಾಜಾ ಗಣೇಶನ ದರ್ಶನ ಪಡೆಯುತ್ತಿರುವುದು ಇದೇ ಮೊದಲ ಸಲವಲ್ಲ. ಕಳೆದ ಹಲವಾರು ವರ್ಷಗಳಿಂದ ಅವರು ಈ ಸಂಪ್ರದಾಯ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಲಾಲ್​ಬಾಗ್​ಚಾ ರಾಜಾ ಗಣೇಶನ ಆಶೀರ್ವಾದ ಪಡೆದ ನಂತರ ಅಮಿತ್ ಶಾ ಬಿಜೆಪಿ ನಾಯಕರ ಮನೆಗಳಿಗೆ ಭೇಟಿ ನೀಡಲಿದ್ದಾರೆ.

ಸಚಿವ ಅಮಿತ್ ಶಾ ಅವರು ಮುಂಬೈ ವಿಶ್ವವಿದ್ಯಾಲಯದ ಕೋಟೆ ಕ್ಯಾಂಪಸ್​ನಲ್ಲಿರುವ ಸರ್ ಕೌವಾಸ್​ಜೀ ಜಹಾಂಗೀರ್ ಘಟಿಕೋತ್ಸವ ಸಭಾಂಗಣದಲ್ಲಿ ಲಕ್ಷ್ಮಣರಾವ್ ಇನಾಂದಾರ್ ಸ್ಮಾರಕ ಉಪನ್ಯಾಸದಲ್ಲಿ ಭಾಗವಹಿಸಲಿದ್ದಾರೆ. ಗುಜರಾತ್​ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್​ಎಸ್​ಎಸ್​​) ಸ್ಥಾಪಕರಲ್ಲಿ ಒಬ್ಬರಾದ ಇನಾಂದಾರ್ ಅವರು ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶಕರಾಗಿದ್ದರು.

ಆರ್​ಎಸ್​​ಎಸ್​ನ ವಕೀಲ್ ಸಾಹೇಬ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಇನಾಂದಾರ್ ಅವರು ಸ್ಥಾಪಿಸಿದ ಸಹಕಾರಿ ಮತ್ತು ಸಹಕಾರಿ ಸಂಸ್ಥೆಗಳ ಅಖಿಲ ಭಾರತ ಸಂಸ್ಥೆಯಾದ ಸಹಕಾರ ಭಾರತಿ ಸಹಯೋಗದೊಂದಿಗೆ ವಿಶ್ವವಿದ್ಯಾಲಯವು ಸ್ಮಾರಕ ಉಪನ್ಯಾಸವನ್ನು ಆಯೋಜಿಸಿದೆ.

ಗೃಹಸಚಿವ ಅಮಿತ್ ಶಾ ಅವರ ಮುಂಬೈ ಪ್ರವಾಸ ವೇಳಾಪಟ್ಟಿ ಹೀಗಿದೆ:

ಮಧ್ಯಾಹ್ನ 2 ಗಂಟೆ: ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮನ

ಮಧ್ಯಾಹ್ನ 3 ಗಂಟೆ: ಲಾಲ್​ಬಾಗ್​ಚಾ ರಾಜಾ ಗಣೇಶನ ದರ್ಶನ

ಮಧ್ಯಾಹ್ನ 3:50 ರಿಂದ 4: ಮುಖ್ಯಮಂತ್ರಿಗಳ ಅಧಿಕೃತ ನಿವಾಸ ವರ್ಷಾದಲ್ಲಿ ಗಣೇಶನ ದರ್ಶನ

ಸಂಜೆ 4 ರಿಂದ 4:15: ಸಾಗರ್​ನಲ್ಲಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿ ಗಣೇಶನ ದರ್ಶನ

ಸಂಜೆ 4:30: ಬಾಂದ್ರಾದಲ್ಲಿ ಆಶಿಶ್ ಶೆಲಾರ್ ನೇತೃತ್ವದಲ್ಲಿ ಸಾರ್ವಜನಿಕ ಗಣೇಶ ದರ್ಶನ

ಸಂಜೆ 5:30 ರಿಂದ 7: ಮುಂಬೈ ವಿಶ್ವವಿದ್ಯಾಲಯದಲ್ಲಿ ಲಕ್ಷ್ಮಣ್ ರಾವ್ ಇನಾಂದಾರ್ ಸ್ಮಾರಕ ಉಪನ್ಯಾಸದಲ್ಲಿ ಹಾಜರಾತಿ

ಸಂಜೆ 7 ಗಂಟೆಗೆ ದೆಹಲಿಗೆ ನಿರ್ಗಮನ

ಇದನ್ನೂ ಓದಿ : ನಾರಿ ಶಕ್ತಿ ವಂದನ ಅಧಿನಿಯಮ್ ನವಭಾರತದ ಪ್ರಜಾಪ್ರಭುತ್ವ ಬದ್ಧತೆಯ ಸಂಕೇತ: ಪ್ರಧಾನಿ ಮೋದಿ

ABOUT THE AUTHOR

...view details