ಕರ್ನಾಟಕ

karnataka

Republic Day: ಲಡಾಖ್​ನಲ್ಲಿ ಕೊರೆಯುವ ಚಳಿಯಲ್ಲಿ ಐಟಿಬಿಪಿಯಿಂದ ಗಣರಾಜ್ಯೋತ್ಸವ ಆಚರಣೆ

By

Published : Jan 26, 2022, 8:48 AM IST

Updated : Jan 26, 2022, 8:55 AM IST

ಭಾರತ 75 ವರ್ಷದ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದು, ಇದೇ ವೇಳೆ 73ನೇ ಗಣರಾಜ್ಯೋತ್ಸವವನ್ನು ದೇಶದ ವಿವಿಧೆಡೆಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ.

Himveers of Indo-Tibetan Border Police celebrate  Republic Day
ಲಡಾಖ್​ನಲ್ಲಿ ಕೊರೆಯುವ ಚಳಿಯಲ್ಲಿ ಐಟಿಬಿಪಿಯಿಂದ ಗಣರಾಜ್ಯೋತ್ಸವ ಆಚರಣೆ

ನವದೆಹಲಿ: ಭಾರತದ ಗಣರಾಜ್ಯೋತ್ಸವ ಸಂಭ್ರಮ ಎಲ್ಲೆಡೆಯೂ ಆವರಿಸಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮತ್ತು ದ್ವೀಪ ಪ್ರದೇಶಗಳಲ್ಲೂ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತಿರುವುದು ಮಾತ್ರವಲ್ಲದೇ ಹಿಮಾಲಯದಲ್ಲೂ ಭಾರಿ ಚಳಿಯಲ್ಲಿ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ.

ಲಡಾಖ್ ಗಡಿಯಲ್ಲಿ ಇಂಡೋ-ಟಿಬೇಟನ್ ಬಾರ್ಡರ್ ಪೊಲೀಸ್​ನ (ಐಟಿಬಿಪಿ) ಹಿಮವೀರ್​ ತಂಡ ಸುಮಾರು 15 ಸಾವಿರ ಅಡಿಯಷ್ಟು ಎತ್ತರದಲ್ಲಿ ಗಣರಾಜ್ಯೋತ್ಸವವನ್ನು ಆಚರಣೆ ಮಾಡಿದ್ದಾರೆ. ಅಲ್ಲಿರೋದು -35 ಡಿಗ್ರಿ ಸೆಂಟಿಗ್ರೇಡ್ ತಾಪಮಾನ. ಕೊರೆಯುವ ಚಳಿಯಲ್ಲಿಯೂ ತ್ರಿವರ್ಣ ಧ್ವಜ ಹಿಡಿದು ಐಟಿಬಿಪಿ ಸಿಬ್ಬಂದಿ ಪರೇಡ್ ನಡೆಸಿರುವುದು ಮೈ ನವಿರೇಳಿಸುವಂತಿದೆ.

ಲಡಾಖ್​ನಲ್ಲಿ ಗಣರಾಜ್ಯೋತ್ಸವ

ಇದರ ಜೊತೆಗೆ ಐಟಿಬಿಪಿ ಹಮ್ ಹಿಂದೂಸ್ತಾನಿ ಹೇ.. ಸೈನಿಕ್ ತೂಫಾನಿ ಹೇ (ನಾವು ಭಾರತೀಯರು, ಸೈನಿಕರು ಬಿರುಗಾಳಿ) ಎಂಬ ಹಾಡನ್ನು ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೇ ಹಿಮಾಚಲ ಪ್ರದೇಶದಲ್ಲೂ ಐಟಿಪಿಬಿ ಗಣರಾಜ್ಯೋತ್ಸವ ಆಚರಣೆ ಮಾಡಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 26, 2022, 8:55 AM IST

ABOUT THE AUTHOR

...view details