ಕರ್ನಾಟಕ

karnataka

5 ವರ್ಷದ ಮಕ್ಕಳಿಗೆ ಮಾಸ್ಕ್​ ಬೇಕಿಲ್ಲ, ಸ್ಟಿರಾಯ್ಡ್​ ಬಳಕೆ ಕಡಿತಗೊಳಿಸಿ.. ಕೇಂದ್ರದಿಂದ ಕೊರೊನಾ ಮಾರ್ಗಸೂಚಿ ಪರಿಷ್ಕರಣೆ

By

Published : Jan 21, 2022, 8:39 PM IST

ಲಕ್ಷಣ ರಹಿತ ಮತ್ತು ಸೌಮ್ಯ ಗುಣಲಕ್ಷಣಗಳುಳ್ಳ ಪ್ರಕರಣಗಳಲ್ಲಿ ಆ್ಯಂಟಿಬಾಡಿಯನ್ನು ನೀಡುವ ಅಗತ್ಯವಿಲ್ಲ. ನೀಡುವುದಾದಲ್ಲಿ ಸ್ಟಿರಾಯ್ಡ್‌ಗಳನ್ನು ಸರಿಯಾದ ಪ್ರಮಾಣದಲ್ಲಿ, ಅವಧಿಗೆ ಮಾತ್ರ ಬಳಸಬೇಕು ಎಂದು ಸೂಚಿಸಿದೆ..

covid guideline
ಕೊರೊನಾ ಮಾರ್ಗಸೂಚಿ ಪರಿಷ್ಕರಣೆ

ನವದೆಹಲಿ :ಕೋವಿಡ್​ ಸೋಂಕಿನ ತೀವ್ರತೆಯ ಮಧ್ಯೆಯೂ ಕೇಂದ್ರ ಸರ್ಕಾರ ಮಾರ್ಗಸೂಚಿಯಲ್ಲಿ ಕೆಲ ಬದಲಾವಣೆ ಮಾಡಿದೆ. 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮಾಸ್ಕ್​ ಅಗತ್ಯವಿಲ್ಲ. ಕೋವಿಡ್​ ವಿರುದ್ಧ ಪ್ರತಿಕಾಯ ಸೃಷ್ಟಿಗೆ ಆ್ಯಂಟಿಬಾಡಿ (ಸ್ಟಿರಾಯ್ಡ್​) ನೀಡುವುದನ್ನು ನಿಲ್ಲಿಸಿ ಎಂದು ಸಲಹೆ ನೀಡಿದೆ.

ಮಕ್ಕಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೋವಿಡ್‌ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದೆ. 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಮಾಸ್ಕ್‌ ಕಡ್ಡಾಯವಲ್ಲ. 6ರಿಂದ 11 ವರ್ಷದ ಮಕ್ಕಳಿಗೆ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಪಾಲಕರ ನಿಗಾದಲ್ಲಿ ಮಾಸ್ಕ್‌ ಹಾಕಬೇಕು. 12 ರಿಂದ 18 ವರ್ಷದ ಮಕ್ಕಳು ಎಲ್ಲರಂತೆ ಮಾಸ್ಕ್‌ ಹಾಕಬೇಕು ಎಂದು ಸೂಚಿಸಿದೆ.

ಕೊರೊನಾ, ಒಮಿಕ್ರಾನ್ ಸೋಂಕಿನ ತೀವ್ರತೆ ಎಷ್ಟೇ ಇದ್ದರೂ 18 ವರ್ಷದೊಳಗಿನ ಮಕ್ಕಳಿಗೆ, ರೋಗ ನಿರೋಧಕ ಸೃಷ್ಟಿಗೆ ಪೂರಕವಾದ ಆ್ಯಂಟಿಬಾಡಿ(ಸ್ಟಿರಾಯ್ಡ್​) ಔಷಧಗಳನ್ನು ಬಳಸಬಾರದು ಎಂದು ಕೇಂದ್ರ ತಿಳಿಸಿದೆ. ಒಂದು ವೇಳೆ ಸ್ಟಿರಾಯ್ಡ್ ಬಳಕೆ ಅನಿವಾರ್ಯವಾದಲ್ಲಿ ಅದನ್ನು 10 ರಿಂದ 14 ದಿನಕ್ಕೆ ಮಾತ್ರ ಸೀಮಿತಗೊಳಿಸಿ ಎಂದು ತಾಕೀತು ಮಾಡಿದೆ.

ಲಕ್ಷಣ ರಹಿತ ಮತ್ತು ಸೌಮ್ಯ ಗುಣಲಕ್ಷಣಗಳುಳ್ಳ ಪ್ರಕರಣಗಳಲ್ಲಿ ಆ್ಯಂಟಿಬಾಡಿಯನ್ನು ನೀಡುವ ಅಗತ್ಯವಿಲ್ಲ. ನೀಡುವುದಾದಲ್ಲಿ ಸ್ಟಿರಾಯ್ಡ್‌ಗಳನ್ನು ಸರಿಯಾದ ಪ್ರಮಾಣದಲ್ಲಿ, ಅವಧಿಗೆ ಮಾತ್ರ ಬಳಸಬೇಕು ಎಂದು ಸೂಚಿಸಿದೆ.

ಇದನ್ನೂ ಓದಿ:ರಾಜ್ಯದಲ್ಲಿಂದು 48,049 ಜನರಿಗೆ ತಗುಲಿದ ಕೋವಿಡ್​... 18,115 ಮಂದಿ ಚೇತರಿಕೆ

ABOUT THE AUTHOR

...view details