ಕರ್ನಾಟಕ

karnataka

ರಷ್ಯಾ ದಾಳಿ ವಿರೋಧಿಸಿದ ಯುರೋಪಿಯನ್ ಒಕ್ಕೂಟ

By

Published : Feb 25, 2022, 9:18 PM IST

ರಷ್ಯಾದ ಒಕ್ಕೂಟದ ಅಪ್ರಚೋದಿತ ಮತ್ತು ನ್ಯಾಯಸಮ್ಮತವಲ್ಲದ ಮಿಲಿಟರಿ ದಾಳಿಯನ್ನು ಯುರೋಪಿಯನ್ ಒಕ್ಕೂಟ ಪ್ರಬಲವಾಗಿ ವಿರೋಧಿಸಿದೆ.

European missions in India stand in solidarity with Ukrainian envoy
ಯುರೋಪಿಯನ್ ರಾಷ್ಟ್ರಗಳ ಒಕ್ಕೂಟ ವಿರೋಧ

ನವದೆಹಲಿ: ಭಾರತದಲ್ಲಿನ ಯುರೋಪಿಯನ್ ರಾಷ್ಟ್ರಗಳ ಒಕ್ಕೂಟದ ಮುಖ್ಯಸ್ಥರು ಶುಕ್ರವಾರ ತಮ್ಮ ಉಕ್ರೇನಿಯನ್ ಕೌಂಟರ್‌ಪಾರ್ಟ್‌ನೊಂದಿಗೆ ಐಕಮತ್ಯ ವ್ಯಕ್ತಪಡಿಸಿದರು. ಉಕ್ರೇನ್​ ಮೇಲೆ ರಷ್ಯಾದ ದಾಳಿ ನ್ಯಾಯ ಸಮ್ಮತವಲ್ಲ ಎಂದು ಖಂಡಿಸಿದರು.

ಭಾರತ ಮತ್ತು ಭೂತಾನ್‌ನ ಯುರೋಪಿಯನ್ ಒಕ್ಕೂಟದ ರಾಯಭಾರಿ ಉಗೊ ಅಸ್ಟುಟೊ, ಯುರೋಪಿಯನ್ ಒಕ್ಕೂಟ ಮತ್ತು ಅದರ ಸದಸ್ಯ ರಾಷ್ಟ್ರಗಳು ಭಾರತದಲ್ಲಿ ಉಕ್ರೇನಿಯನ್ ರಾಯಭಾರಿ ಇಗೊರ್ ಪೊಲಿಖಾ ಅವರೊಂದಿಗೆ ಒಗ್ಗಟ್ಟಿನಲ್ಲಿ ನಿಂತಿವೆ ಎಂದು ಹೇಳಿದರು.

ರಷ್ಯಾದ ಒಕ್ಕೂಟದ ಅಪ್ರಚೋದಿತ ಮತ್ತು ನ್ಯಾಯಸಮ್ಮತವಲ್ಲದ ಮಿಲಿಟರಿ ದಾಳಿಯನ್ನು ಯುರೋಪಿಯನ್ ಒಕ್ಕೂಟ ಪ್ರಬಲವಾಗಿ ವಿರೋಧಿಸುತ್ತದೆ. ಯುರೋಪಿಯನ್ ಒಕ್ಕೂಟ ಉಕ್ರೇನ್ ಮತ್ತು ಅದರ ಜನರೊಂದಿಗೆ ಇದೆ ಎಂದು ಯುರೋಪಿಯನ್ ಒಕ್ಕೂಟದ ರಾಯಭಾರಿ ಉಗೊ ಅಸ್ಟುಟೊ ಹೇಳಿದರು.

ಈ ಕರಾಳ ಸಮಯದಲ್ಲಿ, ಯುರೋಪಿಯನ್ ಯೂನಿಯನ್ ಉಕ್ರೇನ್ ಮತ್ತು ಅದರ ಜನರೊಂದಿಗೆ ಒಟ್ಟಿಗೆ ನಿಂತಿದೆ. ನಾವು ಎದುರಿಸುತ್ತಿರುವುದು ಸಾರ್ವಭೌಮ, ಸ್ವತಂತ್ರ ದೇಶದ ವಿರುದ್ಧ ರಷ್ಯಾದ ನಾಯಕತ್ವದ ಅಭೂತಪೂರ್ವ ಆಕ್ರಮಣಕಾರಿ ಕೃತ್ಯವಾಗಿದೆ ಎಂದು ಯುರೋಪಿಯನ್ ಕಮಿಷನ್ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಹೇಳಿದರು.

ಇದನ್ನೂ ಓದಿ:ಉಕ್ರೇನ್​ನಿಂದ ಪಾರಾಗಲು 8 ಕಿ.ಮೀ. ನಡೆದು ಪೋಲೆಂಡ್ ಗಡಿಗೆ ಬಂದ 40 ಭಾರತೀಯ ವಿದ್ಯಾರ್ಥಿಗಳು


ABOUT THE AUTHOR

...view details