ಕರ್ನಾಟಕ

karnataka

ಮದ್ಯ ಸೇವನೆ ವಯಸ್ಸನ್ನು 25ರಿಂದ 21ಕ್ಕೆ ಇಳಿಸಿದ ಹರಿಯಾಣ ಸರ್ಕಾರ

By

Published : Dec 23, 2021, 7:38 AM IST

ರಾಷ್ಟ್ರ ರಾಜಧಾನಿ ದೆಹಲಿಯೂ ಕೂಡಾ ಮದ್ಯಸೇವನೆಯ ವಯಸ್ಸಿನ ಮಿತಿಯನ್ನು ಕಡಿಮೆ ಮಾಡಿದ್ದು, ಇದೇ ಮಾರ್ಗವನ್ನು ಹರಿಯಾಣದಲ್ಲಿರುವ ಬಿಜೆಪಿ ಸರ್ಕಾರ ಅನುಸರಿಸಿದೆ.

Haryana government has reduced the drinking age from 25 years to 21 years
ಮದ್ಯ ಸೇವನೆ ವಯಸ್ಸನ್ನು 25ರಿಂದ 21ಕ್ಕೆ ಇಳಿಸಿದ ಹರಿಯಾಣ ಸರ್ಕಾರ

ಚಂಡೀಗಢ: ಹರಿಯಾಣ ಸರ್ಕಾರವು ಅಸ್ತಿತ್ವದಲ್ಲಿರುವ ಅಬಕಾರಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಮದ್ಯಸೇವನೆ ವಯಸ್ಸನ್ನು 25 ವರ್ಷದಿಂದ 21 ವರ್ಷಕ್ಕೆ ಇಳಿಸಿದೆ. ಹರಿಯಾಣ ವಿಧಾನಸಭೆಯು ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಬುಧವಾರ ಹರಿಯಾಣ ಅಬಕಾರಿ (ತಿದ್ದುಪಡಿ)- 2021 ಮಸೂದೆಯನ್ನು ಅಂಗೀಕರಿಸಲಾಗಿದೆ.

ಈ ಹಿಂದೆ ಹರಿಯಾಣದಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗೆ ಮದ್ಯ ಖರೀದಿಸಲು ಅಥವಾ ಮಾರಾಟ ಮಾಡಲು ಅವಕಾಶವಿರಲಿಲ್ಲ. ಈ ಕಾಯ್ದೆಯ ತಿದ್ದುಪಡಿಯಿಂದಾಗಿ 21 ವರ್ಷ ಮೇಲ್ಪಟ್ಟವರು ಮದ್ಯ ಖರೀದಿಸಲು, ಮಾರಾಟ ಮಾಡಲು ಮತ್ತು ಸೇವನೆಗೆ ಅವಕಾಶ ಕಲ್ಪಿಸಲಾಗಿದೆ.

2021-22ನೇ ಸಾಲಿಗೆ ಅಬಕಾರಿ ನೀತಿಯನ್ನು ರೂಪಿಸುವ ಸಮಯದಲ್ಲಿ, ಕೆಲವು ರಾಜ್ಯಗಳು ಕಡಿಮೆ ವಯಸ್ಸನ್ನು ಸೂಚಿಸಿರುವ ಕಾರಣದಿಂದ ವಯಸ್ಸಿನ ಮಿತಿಯನ್ನು 25 ವರ್ಷದಿಂದ 21 ವರ್ಷಕ್ಕೆ ಇಳಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಇತ್ತೀಚೆಗೆ ರಾಷ್ಟ್ರ ರಾಜಧಾನಿ ದೆಹಲಿಯೂ ಕೂಡಾ ಮದ್ಯಸೇವನೆಯ ವಯಸ್ಸಿನ ಮಿತಿಯನ್ನು 21ವರ್ಷಕ್ಕೆ ಇಳಿಸಿತ್ತು. 21 ವರ್ಷಕ್ಕೆ ವ್ಯಕ್ತಿ ತರ್ಕಬದ್ಧವಾಗಿ ಯೋಚನೆ ಮಾಡುವ ಸಾಮರ್ಥ್ಯವಿದ್ದು, ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳೂ ಬದಲಾಗಿವೆ ಎಂಬ ಅಭಿಪ್ರಾಯಕ್ಕೆ ಸರ್ಕಾರ ಬಂದಿದೆ.

ಹರಿಯಾಣ ಅಬಕಾರಿ ಕಾಯ್ದೆ-1914ರಲ್ಲಿ ಬರುವ 27, 29, 30 ಮತ್ತು 62ನೇ ಸೆಕ್ಷನ್​ಗಳಿಗೆ ತಿದ್ದುಪಡಿ ಮಾಡಲಾಗಿದ್ದು, ಮೂಲಕ 21 ವರ್ಷಕ್ಕೆ ಕನಿಷ್ಠ ವಯೋಮಿತಿಯನ್ನು ಅಂಗೀಕಾರ ಮಾಡಲಾಗಿದೆ. ಒಂದು ವೇಳೆ ಇದಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳು ಮದ್ಯಸೇವನೆ, ಮಾರಾಟ, ಖರೀದಿಯಲ್ಲಿ ಪಾಲ್ಗೊಂಡರೆ ಜೈಲು ಅಥವಾ 50 ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ.

ಇದನ್ನೂ ಓದಿ:ಪೊಲೀಸರ ಮಿಂಚಿನ ಕಾರ್ಯಾಚರಣೆ.. ₹21 ಕೋಟಿ ಮೌಲ್ಯದ ಹೆರಾಯಿನ್ ಜಪ್ತಿ, ಆರು ಮಂದಿ ಅಂದರ್​

ABOUT THE AUTHOR

...view details