ಕರ್ನಾಟಕ

karnataka

ಧಾರಾಕಾರ ಮಳೆಗೆ ಗುಂಡಿಮಯವಾದ ಗುಜರಾತ್​​ ರಸ್ತೆ: ಫೋಟೋಗಳಿವೆ ನೋಡಿ

By

Published : Jul 17, 2022, 10:03 AM IST

ಗುಜರಾತ್​ನಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯವ್ಯಸ್ತವಾಗಿದೆ. ರಾಷ್ಟ್ರೀಯ ಹೆದ್ದಾರಿ 48 ಮಳೆಗೆ ಸಂಪೂರ್ಣ ಹಾಳಾಗಿದ್ದು, ಗುಂಡಿಮಯವಾಗಿದೆ. ಇದರಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆ ತೊಂದರೆಯಾಗಿದೆ.

ಭಾರೀ ಮಳೆಗೆ ಗುಂಡಿಮಯವಾದ ಗುಜರಾತ್​​ ರಸ್ತೆ
ಭಾರೀ ಮಳೆಗೆ ಗುಂಡಿಮಯವಾದ ಗುಜರಾತ್​​ ರಸ್ತೆ

ಗಾಂಧಿನಗರ:ದಕ್ಷಿಣ ಗುಜರಾತ್ ಮತ್ತು ಸೌರಾಷ್ಟ್ರ ಪ್ರದೇಶದ ಹಲವು ಪ್ರದೇಶಗಳಲ್ಲಿ ಜಡಿ ಮಳೆಯಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅಷ್ಟೇ ಅಲ್ಲದೇ ಪ್ರವಾಹದಂತೆ ಹರಿದ ನೀರಿನಿಂದಾಗಿ ವಾಪಿ-ಸಿಲ್ವಾಸ್ಸಾ ರಾಷ್ಟ್ರೀಯ ಹೆದ್ದಾರಿ 48 ಸಂಪೂರ್ಣ ಗುಂಡಿಮಯವಾಗಿ ಪರಿವರ್ತನೆಯಾಗಿದೆ.

ಸತತ ಒಂದು ವಾರದಿಂದ ಮಳೆ ಬಿಟ್ಟೂ ಬಿಡದೇ ಸುರಿಯುತ್ತಿದ್ದು, ಜನಜೀವನದ ಮೇಲೆ ಭಾರಿ ಪರಿಣಾಮ ಬೀರಿದೆ. ನಗರಗಳ ರಸ್ತೆಗಳು ಮಾತ್ರವಲ್ಲದೆ ರಾಷ್ಟ್ರೀಯ ಹೆದ್ದಾರಿಗಳೂ ಹಾನಿಗೀಡಾಗಿವೆ.


ಗುಜರಾತ್‌ನ ಮಳೆಪೀಡಿತ ಪ್ರದೇಶಗಳಿಂದ ಈವರೆಗೂ ಕನಿಷ್ಠ 1,300 ಜನರನ್ನು ರಕ್ಷಿಸಲಾಗಿದೆ. ಅವರಲ್ಲಿ ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ನವಸಾರಿ ಜಿಲ್ಲೆಯಿಂದ 811 ಜನರನ್ನು ಒಂದೇ ದಿನದಲ್ಲಿ ರಕ್ಷಿಸಿ ಕರೆತರಲಾಗಿದೆ. ಕೋಸ್ಟ್ ಗಾರ್ಡ್, ಎನ್‌ಡಿಆರ್‌ಎಫ್ ಮತ್ತು ಸ್ಥಳೀಯ ಈಜುಗಾರರು ರಾತ್ರಿಯಿಡೀ ಶ್ರಮಿಸಿ ಜನರನ್ನು ಪ್ರವಾಹದ ಮಧ್ಯೆ ಸುರಕ್ಷಿತವಾಗಿ ಕರೆತರಲಾಗಿದೆ.


ನವಸಾರಿಯಲ್ಲಿ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ಇನ್ನೂ ಹೆಚ್ಚಿನ ತಂಡಗಳು ಸನ್ನದ್ಧವಾಗಿವೆ. ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಕಾರ್ಯಾಚರಣೆ ಮುಂದಾಗಲಿವೆ.


ರಾಜ್ಯದ 207 ಜಲಾಶಯಗಳಲ್ಲಿ ಶನಿವಾರದವರೆಗೆ ಶೇ.50.92ರಷ್ಟು ನೀರು ಸಂಗ್ರಹವಾಗಿದೆ. ಜೀವನವಾಡಿಯಾದ ಸರ್ದಾರ್ ಸರೋವರ ಅಣೆಕಟ್ಟಿನಲ್ಲಿ 1,69,139 ಎಂಸಿಎಫ್​ಟಿ, ಅಂದರೆ ಒಟ್ಟು ಶೇಖರಣಾ ಸಾಮರ್ಥ್ಯದ 50.63 ಪ್ರತಿಶತ ನೀರು ಬಂದಿದೆ. ಇದಲ್ಲದೇ, ರಾಜ್ಯದ 206 ಜಲಾಶಯಗಳಲ್ಲಿ 3,02,397 ಎಂಸಿಎಫ್​ಟಿ (ಶೇ.54.18) ನೀರು ಹರಿದು ಬಂದಿದೆ.

ಇದನ್ನೂ ಓದಿ:ವೀಕ್ಷಣೆಗೆ ಹೋದಾಗ ಮಳೆ ನೀರಲ್ಲಿ ಮುಳುಗಿದ ಜಿಲ್ಲಾಧಿಕಾರಿ ಕಾರು: ವಿಡಿಯೋ

ABOUT THE AUTHOR

...view details