ಕರ್ನಾಟಕ

karnataka

ಗುಜರಾತ್: ಪ್ರಮುಖ ಪ್ರತಿಪಕ್ಷದ ಸ್ಥಾನಮಾನ ಒಂದೇ ಒಂದು ಸೀಟಿನಿಂದ 'ಕೈ' ತಪ್ಪುವ ಭೀತಿ

By

Published : Dec 9, 2022, 1:47 PM IST

ವಿರೋಧ ಪಕ್ಷದ ಸ್ಥಾನಮಾನ ಕಳೆದುಕೊಂಡರೆ ಕಾಂಗ್ರೆಸ್ ಒಂದು ಕಚೇರಿಯನ್ನು ಸಹ ಕಳೆದುಕೊಳ್ಳಬಹುದು. ವಿಧಾನಸಭೆಯ ಸಭೆಯ ಮೊದಲ ಮಹಡಿಯಲ್ಲಿರುವ ಮೂರು ಸಣ್ಣ ಕಚೇರಿಗಳಲ್ಲಿ ಒಂದು ಕಚೇರಿ ಪಕ್ಷಕ್ಕೆ ಸಿಗಬಹುದು. ಕಾಂಗ್ರೆಸ್ ಕಚೇರಿಯನ್ನು ಕಳೆದುಕೊಂಡರೆ, ಅಲ್ಲಿ ಕೆಲಸ ಮಾಡುವ ಕನಿಷ್ಠ 18 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬಹುದು.

ಗುಜರಾತ್: ಪ್ರಮುಖ ಪ್ರತಿಪಕ್ಷದ ಸ್ಥಾನದಿಂದ ಕಾಂಗ್ರೆಸ್ ವಂಚಿತವಾಗುವ ಸಾಧ್ಯತೆ
GUJARAT Congress is likely to lose its position as the main opposition

ಗಾಂಧಿನಗರ:2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಎದುರು ಹೀನಾಯ ಸೋಲು ಕಂಡ ಕಾಂಗ್ರೆಸ್​ ಈ ಬಾರಿ ವಿಧಾನಸಭೆಯಲ್ಲಿ ಪ್ರತಿಪಕ್ಷದ ಸ್ಥಾನಮಾನವನ್ನೂ ಕಳೆದುಕೊಳ್ಳುವ ಸಾಧ್ಯತೆಗಳಿವೆ. 15 ನೇ ಗುಜರಾತ್ ವಿಧಾನಸಭೆಯಲ್ಲಿ ದೇಶದ ಅತಿ ಹಿರಿಯ ರಾಜಕೀಯ ಪಕ್ಷ ಪ್ರತಿಪಕ್ಷದ ಸ್ಥಾನಮಾನದಿಂದ ಮತ್ತು ಅದಕ್ಕೆ ಸಂಬಂಧಿಸಿದ ಪ್ರಯೋಜನಗಳಿಂದ ವಂಚಿತವಾಗಬಹುದು.

ಗುರುವಾರ ಪ್ರಕಟವಾದ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ, 182 ಸ್ಥಾನಗಳ ಪೈಕಿ ಬಿಜೆಪಿ 156 ಸ್ಥಾನಗಳನ್ನು ಗೆದ್ದುಕೊಂಡಿತು. ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಕೇವಲ 17 ಸ್ಥಾನಗಳಿಗೆ ಸೀಮಿತವಾಗಿದೆ. ಹೊಸದಾಗಿ ಕಣದಲ್ಲಿದ್ದ ಆಮ್ ಆದ್ಮಿ ಪಕ್ಷ (ಎಎಪಿ) 5 ಸ್ಥಾನಗಳನ್ನು ಗಳಿಸುವ ಮೂಲಕ ತನ್ನ ಖಾತೆ ತೆರೆದಿದೆ.

ನಿಯಮಗಳ ಪ್ರಕಾರ, ಗುಜರಾತ್ ವಿಧಾನಸಭೆಯಲ್ಲಿ ಪ್ರಮುಖ ವಿರೋಧ ಪಕ್ಷವಾಗಿ ಅರ್ಹತೆ ಪಡೆಯಲು ಪಕ್ಷವೊಂದು ಕನಿಷ್ಠ 18 ಸ್ಥಾನಗಳನ್ನು ಪಡೆಯಬೇಕು. ಆದರೆ ಕಾಂಗ್ರೆಸ್ ಒಂದು ಸ್ಥಾನದಿಂದ ಹಿನ್ನಡೆ ಕಂಡಿದೆ. ಆದಾಗ್ಯೂ, ಸ್ವತಂತ್ರರು ಅಥವಾ ಎಎಪಿ ಶಾಸಕರ ಬೆಂಬಲವಿದ್ದರೆ ಕಾಂಗ್ರೆಸ್ ಈಗಲೂ ವಿರೋಧ ಪಕ್ಷದ ಸ್ಥಾನಮಾನ ಪಡೆಯಬಹುದು.

ವಿರೋಧ ಪಕ್ಷದ ಸ್ಥಾನಮಾನ ಕಳೆದುಕೊಂಡರೆ ಕಾಂಗ್ರೆಸ್ ಒಂದು ಕಚೇರಿಯನ್ನು ಸಹ ಕಳೆದುಕೊಳ್ಳಬಹುದು. ವಿಧಾನಸಭೆಯ ಸಭೆಯ ಮೊದಲ ಮಹಡಿಯಲ್ಲಿರುವ ಮೂರು ಸಣ್ಣ ಕಚೇರಿಗಳಲ್ಲಿ ಒಂದು ಕಚೇರಿ ಪಕ್ಷಕ್ಕೆ ಸಿಗಬಹುದು. ಕಾಂಗ್ರೆಸ್ ಕಚೇರಿಯನ್ನು ಕಳೆದುಕೊಂಡರೆ, ಅಲ್ಲಿ ಕೆಲಸ ಮಾಡುವ ಕನಿಷ್ಠ 18 ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬಹುದು.

ಗುರುವಾರದ ಫಲಿತಾಂಶಗಳಲ್ಲಿ, ಪಶ್ಚಿಮ ಬಂಗಾಳದಲ್ಲಿ ಏಳು ಬಾರಿ ಗೆಲುವು ಸಾಧಿಸಿದ್ದ ಸಿಪಿಐ (ಎಂ) ನಿರ್ಮಿಸಿದ ದಾಖಲೆಯನ್ನು ಬಿಜೆಪಿ ಸರಿಗಟ್ಟಿದೆ. ಗುಜರಾತ್‌ನಲ್ಲಿ ಒಟ್ಟು ಶೇಕಡಾ 52 ರಷ್ಟು ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಒಟ್ಟು ಅರ್ಧಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದೆ. ಚುನಾವಣಾ ಆಯೋಗದ (EC) ಪ್ರಕಾರ ಕಾಂಗ್ರೆಸ್‌ನ ಮತಗಳ ಪಾಲು ಶೇ 26.9 ರಷ್ಟಿದೆ. ಈ ಗೆಲುವಿನ ಸರಣಿಯು 2024 ರಲ್ಲಿ ಪ್ರಧಾನಿ ಮೋದಿ ಸತತ ಮೂರನೇ ಅವಧಿಗೆ ಪ್ರಧಾನಿಯಾಗುವ ಸಾಧ್ಯತೆಗಳನ್ನು ಬಲವಾಗಿಸಿದೆ.

ಇನ್ನು ಹಿಮಾಚಲ ಪ್ರದೇಶದಲ್ಲಿ ಜಯ ಸಾಧಿಸಿರುವ ಕಾಂಗ್ರೆಸ್ ಬಿಜೆಪಿಯಿಂದ ಅಧಿಕಾರ ಕಸಿದುಕೊಂಡಿದೆ. ಗುಡ್ಡಗಾಡು ರಾಜ್ಯ ಹಿಮಾಚಲದ 68 ಸದಸ್ಯ ಬಲದ ಅಸೆಂಬ್ಲಿಯಲ್ಲಿ 35 ಸ್ಥಾನಗಳನ್ನು ಪಡೆದ ಕಾಂಗ್ರೆಸ್ ಬಹುಮತವನ್ನು ದಾಟಿದೆ. 1985 ರಿಂದ ಅಧಿಕಾರದಲ್ಲಿರುವ ಪಕ್ಷ ಮತ್ತೆ ಅಧಿಕಾರಕ್ಕೆ ಬಂದ ಉದಾಹರಣೆಯೇ ಇಲ್ಲ.

ಇದನ್ನೂ ಓದಿ: ಜಾಗತಿಕ ಪತ್ರಿಕೆಗಳಲ್ಲಿ ಮೋದಿ ತವರು ಗುಜರಾತ್​​​ನಲ್ಲಿ ಬಿಜೆಪಿ​ ಐತಿಹಾಸಿಕ ವಿಜಯದ ವರದಿ

ABOUT THE AUTHOR

...view details