ಕರ್ನಾಟಕ

karnataka

ರೈತರಿಗೆ ನೀಡಿದ ಭರವಸೆಗಳನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ: ರಾಕೇಶ್ ಟಿಕಾಯತ್

By

Published : Feb 21, 2022, 8:52 PM IST

ರೈತರು ಮತ್ತು ಕೂಲಿಕಾರರ ಪ್ರಯತ್ನದಿಂದಾಗಿ ಆರ್ಥಿಕ ಹಿಂಜರಿತ ಮತ್ತು ಲಾಕ್‌ಡೌನ್ ನಡುವೆಯೂ ದೇಶದಲ್ಲಿ ಕೃಷಿ ಉತ್ಪನ್ನಗಳು ನಿರಂತರವಾಗಿ ಹೆಚ್ಚುತ್ತಿವೆ. ಹೀಗಾಗಿ ಸರ್ಕಾರವು ದೇಶದ 'ಅನ್ನದಾತ'ರ ನಂಬಿಕೆಗೆ ದ್ರೋಹ ಮಾಡಬಾರದು ಎಂದು ಹೇಳಿದ್ದಾರೆ.

Rakesh Tikait, national spokesperson and farmer leader of the Bharatiya Kisan Union BKU
http://10.10.50.80:6060//finalout3/odisha-nle/thumbnail/21-February-2022/14527518_371_14527518_1645443748232.png

ನವದೆಹಲಿ/ಗಾಜಿಯಾಬಾದ್:ಕೇಂದ್ರ ಸರ್ಕಾರ ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ (BKU) ನ ರಾಷ್ಟ್ರೀಯ ವಕ್ತಾರ ಮತ್ತು ರೈತ ನಾಯಕ ರಾಕೇಶ್ ಟಿಕಾಯತ್ ಆರೋಪಿಸಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರುವ ಅವರು, ಭಾರತ ಸರ್ಕಾರವು ಡಿಸೆಂಬರ್ 9ರ ಪತ್ರದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಈ ಕಾರಣಕ್ಕೆ ನಾವು ದೇಶಾದ್ಯಂತ ಸಂಚರಿಸಿ ಅನ್ನದಾತನ ಹಿತಾಸಕ್ತಿಗಳನ್ನು ರಕ್ಷಿಸುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ: ಕೊಲೆಯಾದ ಹರ್ಷ ಮನೆಗೆ ಸಚಿವ ನಾರಾಯಣ ಗೌಡ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

ರೈತರು ಮತ್ತು ಕೂಲಿಕಾರರ ಪ್ರಯತ್ನದಿಂದಾಗಿ, ಆರ್ಥಿಕ ಹಿಂಜರಿತ ಮತ್ತು ಲಾಕ್‌ಡೌನ್ ನಡುವೆಯೂ ದೇಶದಲ್ಲಿ ಕೃಷಿ ಉತ್ಪನ್ನಗಳು ನಿರಂತರವಾಗಿ ಹೆಚ್ಚುತ್ತಿವೆ. ಹೀಗಾಗಿ ಸರ್ಕಾರವು ದೇಶದ 'ಅನ್ನದಾತ'ನ ನಂಬಿಕೆಗೆ ದ್ರೋಹ ಮಾಡಬಾರದು ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.

ABOUT THE AUTHOR

...view details