ಕರ್ನಾಟಕ

karnataka

ಸ್ನೇಹಿತೆಯೊಂದಿಗೆ ದೈಹಿಕ ಸಂಪರ್ಕ ಹೊಂದಲು ಹಿಂದೇಟು.. ನಿರಾಕರಿಸಿದ ಪ್ರಿಯಕರನ ಮರ್ಮಾಂಗವನ್ನೇ ಕಚ್ಚಿದ ಗೆಳತಿ!

By ETV Bharat Karnataka Team

Published : Sep 26, 2023, 10:52 PM IST

ಪತ್ನಿಗೆ ಗೊತ್ತಾಗದಂತೆ ಅಕ್ರಮ ಸಂಬಂಧ ಹೊಂದಿದ್ದ ಯುವಕ, ಗೆಳತಿ ಮಾಡಿದ ಕೃತ್ಯದಿಂದ ಪೇಚಿಗೆ ಬಿದ್ದಿದ್ದಾನೆ. ಅಷ್ಟೇ ಅಲ್ಲದೇ, ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ. ಅಷ್ಟಕ್ಕೂ ಏನಾಯಿತು ಎಂಬುದನ್ನು ಮುಂದೆ ಓದಿ.

Etv Bharatಪ್ರಿಯಕರನ ಮರ್ಮಾಂಗವನ್ನೇ ಕಚ್ಚಿದ ಗೆಳತಿ
ಪ್ರಿಯಕರನ ಮರ್ಮಾಂಗವನ್ನೇ ಕಚ್ಚಿದ ಗೆಳತಿ

ಕಾನ್ಪುರ (ಉತ್ತರ ಪ್ರದೇಶ):ತನ್ನ ಸ್ನೇಹಿತೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಲಿಲ್ಲ ಎಂದು ಕೋಪಗೊಂಡ ಗೆಳತಿ, ಪ್ರಿಯಕರನ ಗುಪ್ತಾಂಗಕ್ಕೆ ಕಚ್ಚಿದ್ದಾಳೆ. ಇಂಥದ್ದೊಂದು ವಿಚಿತ್ರ ಮತ್ತು ಆಘಾತಕಾರಿ ಘಟನೆ ನಡೆದಿದ್ದು ಉತ್ತರಪ್ರದೇಶದಲ್ಲಿ. ತೀವ್ರ ಗಾಯಗೊಂಡಿರುವ ಯುವಕ ಆಸ್ಪತ್ರೆ ಪಾಲಾಗಿದ್ದಾನೆ. ಈ ಬಗ್ಗೆ ದೂರು ಕೂಡ ದಾಖಲಾಗಿದೆ.

ನಡೆದ ಘಟನೆ ಹೀಗಿದೆ:ಇಲ್ಲಿನ ಚೌಬೇಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ವ್ಯಕ್ತಿಯೊಬ್ಬರು ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ, ಅದೇ ಗ್ರಾಮದ ಮತ್ತೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. ಹೀಗಿದ್ದಾಗ ಸೋಮವಾರ ಮಧ್ಯರಾತ್ರಿ ಗೆಳತಿಯು ತನ್ನ ಪ್ರಿಯಕರನಿಗೆ ಕರೆ ಮಾಡಿ ಮನೆಗೆ ಆಹ್ವಾನಿಸಿದ್ದಾಳೆ. ಅಲ್ಲದೇ, ತನ್ನ ಇನ್ನೊಬ್ಬ ಗೆಳತಿಯನ್ನೂ ಆಕೆ ಕರೆಯಿಸಿಕೊಂಡಿದ್ದಳು. ಪ್ರಿಯಕರ ಮನೆಗೆ ಬಂದ ಬಳಿಕ ವಿಚಿತ್ರ ಬೇಡಿಕೆಯೊಂದನ್ನು ಆಕೆ ಇಟ್ಟಿದ್ದಾಳೆ.

ತನ್ನ ಇನ್ನೊಬ್ಬ ಸ್ನೇಹಿತೆಯ ಜೊತೆಗೂ ದೈಹಿಕ ಸಂಪರ್ಕ ಹೊಂದಲು ಸ್ವತಃ ಗೆಳತಿಯೇ ಆಫರ್​ ನೀಡಿದ್ದಾಳೆ. ಇದು ಯುವಕನಿಗೆ ವಿಚಿತ್ರವೆನ್ನಿಸಿ, ತಾನು ಹಾಗೆ ಮಾಡಲು ನಿರಾಕರಿಸಿದ್ದಾನೆ. ಮಾತು ಕೇಳದ ಗೆಳತಿ ಪ್ರಿಯಕರನ ಮೇಲೆ ತೀವ್ರ ಒತ್ತಡ ಹೇರಿದ್ದಾಳೆ. ಇಷ್ಟಾದರೂ ಬಗ್ಗದ ಆತ ಇನ್ನೊಬ್ಬ ಮಹಿಳೆ ಜೊತೆ ದೈಹಿಕವಾಗಿ ಬೇರೆಯಲ್ಲ ಎಂದಿದ್ದಾನೆ. ಇದು ಗೆಳತಿಯ ಪಿತ್ತ ನೆತ್ತಿಗೇರಿಸಿದೆ. ಕೋಪದಲ್ಲಿ ಗೆಳತಿ ಆಕೆಯ ಗೆಳೆಯನ ಗುಪ್ತಾಂಗವನ್ನು ಬಾಯಿಯಿಂದ ಕಚ್ಚಿದ್ದಾಳೆ.

ಗೆಳೆಯ ನೋವಿನಿಂದ ಜೋರಾಗಿ ಕೂಗಿಕೊಂಡಿದ್ದಾನೆ. ಕಚ್ಚಿದ್ದರಿಂದ ರಕ್ತ ಕೂಡ ಚಿಮ್ಮಿದೆ. ತೀವ್ರ ಘಾಸಿಗೊಂಡ ಯುವಕನ ಆರ್ತನಾದದಿಂದ ಅಕ್ಕಪಕ್ಕದವರು ಆ ಮನೆಗೆ ಬಂದಿದ್ದಾರೆ. ಘಟನೆಯಿಂದ ತೀವ್ರ ಮುಜುಗರಕ್ಕೀಡಾಗ ಯುವಕ ಅಲ್ಲಿಂದ ಓಡಿ ಹೋಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಯುವಕ ಈ ವಿಷಯವನ್ನು ಪತ್ನಿಗೆ ತಿಳಿಸಿದ್ದಾನೆ. ಈ ವಿಷಯ ಹೊರಗೆ ಗೊತ್ತಾದರೆ, ಮರ್ಯಾದೆ ಹಾಳಾಗುತ್ತದೆ. ಪೊಲೀಸರಿಗೂ ಹೇಳಬೇಡ ಎಂದು ಪತ್ನಿಯಲ್ಲಿ ಕೋರಿಕೊಂಡಿದ್ದಾನೆ.

ಗಂಡನ ಸ್ಥಿತಿ ಕಂಡು ಹೆದರಿದ ಪತ್ನಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಸ್ಥಳಕ್ಕಾಗಮಿಸಿ ನೋವಿನಿಂದ ಒದ್ದಾಡುತ್ತಿದ್ದ ಯುವಕನನ್ನು ಚೌಬೇಪುರ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗುಪ್ತಾಂಗಕ್ಕೆ ತೀವ್ರ ಗಾಯವಾಗಿದ್ದರಿಂದ ಆತನ ಸ್ಥಿತಿ ಗಂಭೀರವಾಗಿದೆ ಎಂದು ಕಾನ್ಪುರದ ಜಿಲ್ಲಾ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಇನ್ನೊಬ್ಬಾಕೆಯ ಜೊತೆಗೆ ಲೈಂಗಿಕವಾಗಿ ಸಹಕರಿಸಲಿಲ್ಲ ಎಂಬ ಕಾರಣಕ್ಕಾಗಿ ಗೆಳತಿಯೇ ಯುವಕನ ಮರ್ಮಾಂಗವನ್ನು ಕಚ್ಚಿದ್ದಾಳೆ. ತೀವ್ರ ರಕ್ತಸ್ರಾವವಾಗಿದ್ದು, ಗಂಡನ ಸ್ಥಿತಿಯ ಬಗ್ಗೆ ಪತ್ನಿ ದೂರು ನೀಡಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಗಣೇಶ ಪೆಂಡಲ್​ನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕ ಸಾವು

ABOUT THE AUTHOR

...view details