ಕರ್ನಾಟಕ

karnataka

ಅಣ್ಣನನ್ನೇ ಮದುವೆಯಾದ ತಂಗಿ.. ಮಗಳು ಸತ್ತಳೆಂದು ಶವಯಾತ್ರೆ ನಡೆಸಿದ ಅಪ್ಪ!

By

Published : Mar 31, 2021, 1:50 PM IST

ಜಾರ್ಖಂಡ್​ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಸಹೋದರಿ ಮತ್ತು ಸಹೋದರಿಯ ಪವಿತ್ರ ಸಂಬಂಧ ಇಲ್ಲಿ ಇಲ್ಲದಂತಾಗಿದೆ. ಸ್ವತಃ ಅಣ್ಣ-ತಂಗಿ ಮದುವೆಯಾಗಿ ಸಾಂಸರಿಕ ಜೀವನಕ್ಕೆ ಕಾಲಿಟ್ಟಿರುವ ಘಟನೆ ಇಲ್ಲಿನ ಚತ್ರಾದಲ್ಲಿ ನಡೆದಿದೆ.

Girl married her brother  Girl married her brother in chatra  Girl married her brother news  Chatra news  ಅಣ್ಣನನ್ನೇ ಮದುವೆಯಾದ ತಂಗಿ  ಚತ್ರಾದಲ್ಲಿ ಅಣ್ಣನನ್ನೇ ಮದುವೆಯಾದ ತಂಗಿ  ಅಣ್ಣನನ್ನೇ ಮದುವೆಯಾದ ತಂಗಿ ಸುದ್ದಿ  ಚತ್ರಾ ಸುದ್ದಿ
ಮಗಳು ಸತ್ತಳೆಂದು ಶವಯಾತ್ರೆ ನಡೆಸಿದ ಅಪ್ಪ

ಚತ್ರಾ:ಸಹೋದರಿಯೊಬ್ಬರು ತನ್ನ ಹಿರಿಯ ಸಹೋದರನನ್ನು ಮದುವೆಯಾಗಿ ಸಪ್ತಪದಿ ತುಳಿದಿರುವ ಘಟನೆ ಖರಿಕಾ ಗ್ರಾಮದಲ್ಲಿ ನಡೆದಿದೆ.

ಖರಿಕಾದ ಸುಖದೇವ್ ರಾಮ್‌ನ 25 ವರ್ಷದ ಮಗಳು ಸಬಿತಾ ಅಲಿಯಾಸ್ ಕಿರಣ್ ಕುಮಾರಿ ಅವರು ಲಖನ್ ರಾಮ್ ಅವರ ಪುತ್ರ ರಾಜ್‌ದೀಪ್ ಕುಮಾರ್​ನನ್ನು ಪ್ರೀತಿಸುತ್ತಿದ್ದಳು. ಸಂಬಂಧದಲ್ಲಿ ಇಬ್ಬರೂ ಸಹೋದರ ಮತ್ತು ಸಹೋದರಿಯಾಗಿದ್ದಾರೆ. ಇನ್ನು ಇವರ ಪ್ರೀತಿಯನ್ನು ಎರಡು ಕುಟುಂಬಗಳು ನಿರಾಕರಿಸಿದ್ದು, ಇಬ್ಬರಿಗೂ ಬುದ್ಧಿ ಹೇಳಿದ್ದರು. ಆದರೂ ಸಹ ಇಬ್ಬರು ತಮ್ಮ ಪ್ರೇಮವನ್ನು ಮುಂದುವರಿಸಿದ್ದರು.

ನಾಲ್ಕು ತಿಂಗಳ ಹಿಂದೆ ಇಬ್ಬರೂ ಮದುವೆಯಾಗಿದ್ದಾರೆ. ನಂತರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಹಿರಿಯರು ಒಪ್ಪದ ಕಾರಣ ಈ ವಿಷಯ ಸ್ಥಳೀಯ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಅಲ್ಲಿಯೂ ಸಹ ಸಾಯುವುದಾಗಲಿ, ಜೀವಿಸುವುದಾಗಲಿ ಅದು ನನ್ನ ಪತಿ ರಾಜ್‌ದೀಪ್‌ನೊಂದಿಗೆ ಎಂದು ಹೇಳಿದ್ದಾಳೆ. ಈ ಮಾತುಗಳನ್ನು ಕೇಳಿದ ಆಕೆಯ ಕುಟುಂಬವು ಶಾಕ್​ಗೆ ಒಳಪಟ್ಟಿತು.

ಇನ್ನು ಯುವತಿಯ ಪೋಷಕರು ಆಕೆಯ ಫೋಟೋವನ್ನು ಶವಯಾತ್ರೆ ಮಾಡಿ ಮಗಳು ತಮ್ಮ ಪಾಲಿಗೆ ಸತ್ತಳೆಂದು ಅಂತ್ಯಕ್ರಿಯೆ ಮಾಡಿದರು. ಕೊನೆಯ ವಿಧಿಗಳನ್ನು ನೆರವೇರಿಸುವ ಮೂಲಕ ಮಗಳ ಜೊತೆಯಿದ್ದ ಎಲ್ಲಾ ಸಂಬಂಧಗಳನ್ನು ಆ ಕುಟುಂಬ ಕೊನೆಗೊಳಿಸಿತು.

ABOUT THE AUTHOR

...view details